
ಕಾರ್ಕಳ: ಶಿಕ್ಷಣ ಇಲಾಖೆ ಕಾರ್ಕಳ ಹಾಗೂ ರೋಟರಿ ಆನ್ಸ್ ಕ್ಲಬ್‌ನ ಸಹಯೋಗದೊಂದಿಗೆ ವಿದ್ಯಾಗಮನ ಪ್ರಯುಕ್ತ ಶಾಲಾಮಕ್ಕಳಿಗೆ ಕೊರೋನಾ ಜಾಗೃತಿ ಮತ್ತು ಮಾಹಿತಿ ಹೊಂದಿರುವ ಕರಪತ್ರಗಳನ್ನು ಮಾನ್ಯ ಶಾಸಕರು ಉದ್ಘಾಟಿಸಿದರು. ಆನ್ಲೈನ್ ಮೂಲಕ ಎಲ್ಲಾ ಶಾಲೆಗಳಿಗೆ ಕೋರೋನ ತಡೆಗಟ್ಟುವ ಮಾಹಿತಿಯನ್ನು ರೋ. ರಮಿತ ಶೈಲೇಂದ್ರ ರಾವ್ ನೀಡಿದರು. ನಂತರ ತಾಲೂಕಿನ ೨೧ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಣ ಅಧಿಕಾರಿ ಶಶಿಧರ್ ಅವರು ಈ ರೀತಿಯ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಆರೋಗ್ಯ ಕಾಪಾಡಿಕೊಳ್ಳಲು ಈ ಎಲ್ಲಾ ಮಾಹಿತಿ ಅಗತ್ಯ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಬಾಲಕೃಷ್ಣ ಮತ್ತು ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು
More Stories
ಕ್ಲೀನ್ ದುರ್ಗ ವಾರಿಯರ್ಸ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಉಚಿತ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಣೆ
ರಸ್ತೆ ಅಪಘಾತದಿಂದ ಗುಂಡ್ಮಿ ಗ್ರಾಮದ ವಿದ್ಯಾರ್ಥಿ ಕಿಶನ್, ಕೋಮಸ್ಥಿತಿಗೆ ಆರ್ಥಿಕ ಸಹಾಯಕ್ಕೆ ಕೋರಿಕೆ
ಜಾಗತಿಕ ಆಶ್ಡೆನ್ ಪ್ರಶಸ್ತಿ:ಅಂತಿಮ ಪಟ್ಟಿಯಲ್ಲಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್-ಸುಸ್ಥಿರ ಇಂಧನ ಹಾಗೂ ಗ್ರಾಮೀಣ ಕೌಶಲ ವಿಭಾಗದ ಸೇವೆ ಪರಿಗಣನೆ-