
ಕುಂದಾಪುರ(ಜ.೦೨); ಕೇಂದ್ರ ಸರಕಾರವು ರೂಪಿಸಿರುವ ಹೊಸ ಕಾರ್ಮಿಕ ಸಂಹಿತೆಗಳು ರೈತರ ಸಂಬoಧಪಟ್ಟ ಮೂರು ಕೃಷಿ ವಿರೋಧಿ ಕಾಯ್ದೆ,ವಿದ್ಯುತ್ ಕಾಯ್ದೆ ೨೦೨೦ ರ ಗೆಜೆಟ್ ನೋಟಿಪಿಕೇಷನ್ ಪ್ರತಿಗಳನ್ನು ಸಿಐಟಿಯು ಸಂಘಟನೆ ರಾಜ್ಯವ್ಯಾಪಿಯಾಗಿ ಶುಕ್ರವಾರ ದಹಿಸುವ ಮೂಲಕ ಪ್ರತಿಭಟನೆ ನಡೆಸಿತು.
ಸಿಐಟಿಯು ರಾಜ್ಯ ಅಧ್ಯಕ್ಷರಾದ ಎಸ್ ವರಲಕ್ಷ್ಮಿ ಅವರು ಕುಂದಾಪುರದ ಹಂಚು ಕಾರ್ಮಿಕ ಭವನದಲ್ಲಿ ನಡೆದ ಸಭೆಯ ಆರಂಭಕ್ಕೂ ಮುನ್ನ ಜನರಿಗೆ ಮಾರಕವಾಗಿರುವ ಹೊಸ ಕಾಯ್ದೆಗಳ ಸರಕಾರದ ಗೆಜೆಟ್ ನೋಟಿಪಿಕೇಷನ್ ದಹಿಸಿ ಮಾತನಾಡಿದ ಅವರು ದೇಶದ ದೊಡ್ಡ ಬಂಡವಾಳಗಾರರನ್ನು ಬೆಳೆಸಲು ರೈತ-ಕಾರ್ಮಿಕರ ಹಿತವನ್ನು ಬಲಿಕೊಡಲಾಗುತ್ತಿದೆ.ಈ ನೀತಿಗಳನ್ನು ಸೋಲಿಸಲು ೨೦೨೧ ಹೊಸ ವರ್ಷದಲ್ಲಿ ರೈತರು ಕಾರ್ಮಿಕರ ಹೋರಾಟ ವರ್ಷವಾಗಿ ಮುನ್ನೆಡೆದು ದೇಶ ರಕ್ಷಣೆ ಮಾಡಬೇಕಾಗಿದೆ.ಕಾರ್ಮಿಕರ ಹಕ್ಕುಗಳನ್ನು ಉಳಿಸಲು,ರೈತರ ಬದುಕನ್ನು ರಕ್ಷಿಸಲು,ಕಾರ್ಪೋರೇಟ್ ಹಿಡಿತದಿಂದ ದೇಶ ಕಾಪಾಡುವಂತೆ ಕಾರ್ಮಿಕರಿಗೆ ಕರೆ ನೀಡಿದರು. ಕಾರ್ಕಳ ಸಿಐಟಿಯು ಕಛೇರಿಯಲ್ಲಿಯೂ ಕಾಯ್ದೆ ಪ್ರತಿಗಳನ್ನು ದಹಿಸಿ ಪ್ರತಿಭಟಿಸಲಾಯಿತು ಸುನೀತಾ ಶೆಟ್ಟಿ,ಶೇಖರ ಕುಲಾಲ್ ಭಾಗವಹಿಸಿದ್ದರು,
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ,ತಾಲೂಕು ಸಂಚಾಲಕರಾದ ಎಚ್ ನರಸಿಂಹ,ದಾಸಭAಡಾರಿ,ಸುಶೀಲ ನಾಡ,ನಾಗರತ್ನ,ಸಿಂಗಾರಿ,ಆಶಾಲತಾ ಮುಂತಾದವರಿದ್ದರು. ಕುಂದಾಪುರದ ಮಂಗಳೂರು ಟೈಲ್ಸ್,ಪ್ರಭಾಕಿರಣ ಕಾರ್ಖಾನೆಗಳಲ್ಲಿ ಪ್ರತಿಭಟಿಸಿ ದಹಿಸಲಾಯಿತು.ಈ ವೇಳೆಯಲ್ಲಿ ಪಂಜುಪೂಜಾರಿ,ಪ್ರಕಾಶಕೋಣಿ ಇದ್ದರು.
More Stories
ಕ್ಲೀನ್ ದುರ್ಗ ವಾರಿಯರ್ಸ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಉಚಿತ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಣೆ
ರಸ್ತೆ ಅಪಘಾತದಿಂದ ಗುಂಡ್ಮಿ ಗ್ರಾಮದ ವಿದ್ಯಾರ್ಥಿ ಕಿಶನ್, ಕೋಮಸ್ಥಿತಿಗೆ ಆರ್ಥಿಕ ಸಹಾಯಕ್ಕೆ ಕೋರಿಕೆ
ಜಾಗತಿಕ ಆಶ್ಡೆನ್ ಪ್ರಶಸ್ತಿ:ಅಂತಿಮ ಪಟ್ಟಿಯಲ್ಲಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್-ಸುಸ್ಥಿರ ಇಂಧನ ಹಾಗೂ ಗ್ರಾಮೀಣ ಕೌಶಲ ವಿಭಾಗದ ಸೇವೆ ಪರಿಗಣನೆ-