March 29, 2024

Bhavana Tv

Its Your Channel

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಸರ್ಕಾರದಿಂದ ಮೆಚ್ಚುಗೆಯ ಪ್ರಮಾಣಪತ್ರ

ಮಣಿಪಾಲ, ೨೯ನೇ ಜನವರಿ ೨೦೨೧: ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಅನುಕರಣೀಯ (ಗಣನೀಯ) ಸೇವೆಗಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ, ಇತ್ತೀಚೆಗೆ ಕರ್ನಾಟಕ ಸರ್ಕಾರ ಮತ್ತು ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯಿಂದ ಮೆಚ್ಚುಗೆಯ ಪ್ರಮಾಣಪತ್ರ ಲಭಿಸಿದೆ. ಈ ಪ್ರಮಾಣಪತ್ರವನ್ನು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ಅವರಿಗೆ ಉಡುಪಿಯ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕರ್ನಾಟಕ ಸರ್ಕಾರದ ಗೌರವಾನ್ವಿತ ಮೀನುಗಾರಿಕೆ, ಬಂದರು ಮತ್ತು ಒಳನಾಡಿನ ಸಾರಿಗೆ ಸಚಿವರಾದ ಶ್ರೀ ಅಂಗರಾ ಎಸ್ ಅವರು ೨೦೨೧ ಜನವರಿ ೨೬ ರಂದು ಉಡುಪಿ ಜಿಲ್ಲಾ ಗಣರಾಜ್ಯೋತ್ಸವ ಸಮಾರಂಭದಲ್ಲಿ ಹಸ್ತಾಂತರಿಸಿದರು. ಕಸ್ತೂರ್ಬಾ ಆಸ್ಪತ್ರೆಯನ್ನು ಭಾರತ ಸರ್ಕಾರವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಯೆಂದು ೨೦೧೯ ರಲ್ಲಿ ಪ್ರಶಂಸಿಸಿತ್ತು ಮತ್ತು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳ ಸಮ್ಮುಖದಲ್ಲಿ ನಡೆದ ಆಯುಷ್ಮಾನ್ ಭಾರತ್ ನ ಪ್ರಥಮ ವಾರ್ಷಿಕೋತ್ಸವದ ಆಚರಣೆಗೆ ದೆಹಲಿಗೆ ಆಹ್ವಾನಿಸಿ ಗೌರವಿಸಿತ್ತು.

೨೦೧೮ ರಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿತ ಆಸ್ಪತ್ರೆಯಾಗಿದಂದಿನಿAದ , ಕಸ್ತೂರ್ಬಾ ಆಸ್ಪತ್ರೆಯು ಈ ಯೋಜನೆಯಡಿ ಸುಮಾರು ೧೫,೦೦೦ ರೋಗಿಗಳಿಗೆ ಚಿಕಿತ್ಸೆ ನೀಡಿದೆ ಮತ್ತು ಇದರಲ್ಲಿ ೧೩,೦೦೦ ದಷ್ಟು ಜನರು ಬಿಪಿಎಲ್ ರೋಗಿಗಳಾಗಿದ್ದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಆಸ್ಪತ್ರೆಯು ಆಯುಷ್ಮಾನ್ ಅಡಿಯಲ್ಲಿ ೧೦೪೩ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದೆ, ಅದರಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆದ ರೋಗಿಗಳ ಸಂಖ್ಯೆ ೪೦೦ ಕ್ಕೂ ಹೆಚ್ಚು. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆದ ರೋಗಿಗಳ ಕೆಲವು ಪ್ರಮುಖ ವಿಭಾಗವಾರು ಸಂಖ್ಯೆ ಈ ಕೆಳಗಿನಂತಿದೆ:-

  • ೩,೦೦೦ ಹೃದಯ ರೋಗಿಗಳು
  • ೫೫೫ ಹೃದಯ ಶಸ್ತ್ರಚಿಕಿತ್ಸೆಗಳು
  • ೧,೦೫೫ ನರ ಶಸ್ತ್ರಚಿಕಿತ್ಸೆಗಳು
  • ೯೦೫ ಮೂಳೆ ಶಸ್ತ್ರಚಿಕಿತ್ಸೆಗಳು
  • ೧೪೦ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗಳು.
  • ೪೧೫ ನವಜಾತ ರೋಗಿಗಳು
  • ೫೩೫ ಮಕ್ಕಳ ರೋಗಿಗಳು
  • ೯೦೦ ಕ್ಯಾನ್ಸರ್ ರೋಗಿಗಳು
  • ೧೪೦ ಮಕ್ಕಳ ಕ್ಯಾನ್ಸರ್ ರೋಗಿಗಳು
error: