April 25, 2024

Bhavana Tv

Its Your Channel

ಜಾಗತಿಕ ಆಶ್ಡೆನ್ ಪ್ರಶಸ್ತಿ:ಅಂತಿಮ ಪಟ್ಟಿಯಲ್ಲಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್-ಸುಸ್ಥಿರ ಇಂಧನ ಹಾಗೂ ಗ್ರಾಮೀಣ ಕೌಶಲ ವಿಭಾಗದ ಸೇವೆ ಪರಿಗಣನೆ-

ಮಣಿಪಾಲ : ಪ್ರತಿಷ್ಠಿತ ಆಶ್ಡೆನ್ ಪ್ರಶಸ್ತಿಯ ಅಡಿಯಲ್ಲಿ ಶಕ್ತಿಯನ್ನು ತಲುಪಿಸುವ ಕೌಶಲ ವೃದ್ಧಿಯ ವಿಭಾಗದ ದೀರ್ಘಪಟ್ಟಿಯಲ್ಲಿ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ಆಯ್ಕೆಯಾಗಿದೆ .ಯುನೈಟೆಡ್ ಕಿಂ?ಗ್‌ಡಮ್ ನ ಆಶ್ಡೆನ್ ಕಳೆದ ೨೦ವರ್ಷಗಳಿಂದ ಪರಿವರ್ತಕ ಹವಾಮಾನ ಪರಿಹಾರಗಳನ್ನು ಬೆಂಬಲಿಸುತ್ತಾ ಬಂದಿದೆ. ೨೦೨೧ ರ ಆಶ್ಡೆನ್ ಪ್ರಶಸ್ತಿಗಾಗಿ ೮೦೦ಕ್ಕೂ ಹೆಚ್ಚು ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಇದೀಗ ೩೮ ಸಂಸ್ಥೆಗಳನ್ನು ದೀರ್ಘಪಟ್ಟಿಯಲ್ಲಿ ಹೆಸರಿಸಿದ್ದು, ಅದರಲ್ಲಿ ಬಿವಿಟಿ ಕೂಡ ಒಂದು.
ಸAಸ್ಥೆಗಳನ್ನು ಸ್ವತಃ ಭೇಟಿ ಮಾಡಿ, ತಜ್ಞರ ಅಭಿಪ್ರಾಯ ಪಡೆಯುವ ಮೂಲಕ ಕಠಿಣ ಮೌಲ್ಯಮಾಪನ ಹಾಗೂ ತೀರ್ಪಿನ ಪ್ರಕ್ರಿಯೆ ನಡೆಯಲಿದೆ .ಪ್ರಶಸ್ತಿ ವಿಜೇತರನ್ನು ನವೆಂಬರ್ ೨೦೨೧ರಲ್ಲಿ ಘೋಷಿಸಲಾಗುವುದು.

error: