June 22, 2021

Bhavana Tv

Its Your Channel

ಕಾರ್ಕಳದಲ್ಲಿ ಉಚಿತ ಆಂಬುಲೆನ್ಸ್ ಸೇವೆಗೆ ಚಾಲನೆ

ಕಾರ್ಕಳ: ಲಾಕ್ ಡೌನ್ ಸಂದರ್ಭದಲ್ಲಿ ಕಾರ್ಕಳ ತಾಲೂಕಿನ ಕೊರೋನಾ ಸೋಂಕಿತರಿಗೆ ನೆರವಾಗಲೆಂದು ಪುರಸಭಾ ಸದಸ್ಯರಾದ ಶುಭದರಾವ್ ಮತ್ತು ಸಹೋದರರು ನೀಡಿದ ಉಚಿತ ಅಂಬ್ಯುಲೆನ್ಸ್ ಸೇವೆಗೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯವರಾದ ಡಾ. ಸುಬ್ರಹ್ಮಣ್ಯ ರಾವ್ ಚಾಲನೆ ನೀಡಿದರು.

ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ರೂ ೪ ಲಕ್ಷ ವೆಚ್ಚದಲ್ಲಿ ೪೫೦ ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಕಿಟ್ಟನ್ನು ವಿತರಿಸಿದ ಕಾರ್ಕಳ ಪುರಸಭೆಯ ಸದಸ್ಯರಾದ ಶುಭದರಾವ್ ಮತ್ತು ಸಹೋದರರು ಕೋರೊನಾ ರೋಗಿಗಳ ಪರದಾಟ ನೋಡಿ ಇಂದು ಕಾರ್ಕಳ ಸಾರ್ವಜನಿಕ ಆಸ್ಪತ್ರೆಗೆ ಉಚಿತವಾಗಿ ಅಂಬುಲೇನ್ಸ ನೀಡಿದರು, ವೈದ್ಯಾಧಿಕಾರಿಯವರಾದ ಡಾ. ಸುಬ್ರಹ್ಮಣ್ಯ ರಾವ್ ಚಾಲನೆ ನೀಡಿದರು.

ಕಾರ್ಕಳ ತಾಲೂಕಿನಲ್ಲಿ ಕೊರೋನಾ ಸೋಂಕಿನ ಶಂಕಿತರಿಗೆ ಹಾಗೂ ಅದರಿಂದಾಗಿ ಉಸಿರಾಟದ ತೊಂದರೆಗೆ ಒಳಗಾಗುವವರಿಗೆ ತುರ್ತು ಚಿಕಿತ್ಸೆಯ ಅಗತ್ಯವಿರುವ ಸಂದರ್ಭದಲ್ಲಿ ಸಹಾಯವಾಗಲೆಂದು ೨೪ ಗಂಟೆಗಳ ಉಚಿತ ಆಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಿದ್ದೇವೆ ಇಂತಹ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ೯೮೮೦೭೭೪೬೬೬ ದೂರವಾಣಿ ಸಂಖ್ಯೆಗೆ ಕರೆ ಮಾಡುವಂತೆ ಪುರಸಭಾ ಸದಸ್ಯರಾದ ಶುಭದರಾವ್ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ, ಕೋವಿಡ್ ನೋಡಲ್ ಆಫೀಸರ್ ಡಾ. ಜೋಸ್ನಾ, ನವೀನ್ ರಾವ್, ಚೇತನ್ ರಾವ್, ಆಯಿಷಾ ಮೊದಲಾದವರು ಉಪಸ್ಥಿತರಿದ್ದರು.

error: