March 24, 2024

Bhavana Tv

Its Your Channel

ಕಾರ್ಕಳದಲ್ಲಿ ೪೭೦ ಕೊರೊನಾ ಸೋಂಕಿತರು-ಬಸವರಾಜ್ ಬೊಮ್ಮಾಯಿ

ಕಾರ್ಕಳ : ಕಾರ್ಕಳ ತಾಲೂಕಿನಲ್ಲಿ ೪೭೦ ಕೊರೊನಾ ಬಾಧಿತರಿದ್ದು, ೨೭ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

ಮೇ. ೨ರಂದು ಕಾರ್ಕಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಕಾರ್ಕಳ ಸರಕಾರಿ ಆಸ್ಪತ್ರೆ ಕೊರೊನಾ ಎದುರಿಸುವಲ್ಲಿ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ. ಈಗಾಗಲೇ ೧೦ ಐಸಿಯು ಹಾಗೂ ೫ ವೆಂಟಿಲೇಟರ್ ಬೆಡ್, ೪೬ ಎನ್‌ಐವಿ ಹಾಗೂ ೪೦ ಐಸೋಲೇಟೆಡ್ ಬೆಡ್‌ಗಳ ವ್ಯವಸ್ಥೆಯಿದೆ. ಶೀಘ್ರದಲ್ಲೇ ೫ ವೆಂಟಿಲೇಟರ್, ೫ ಹೆಚ್‌ಎಫ್‌ಎನ್‌ಸಿ ಹಾಗೂ ೧೦ ಎಸ್‌ಡಿಎಫ್ ಸೇರಿದಂತೆ ಒಟ್ಟು ೨೦ ವೆಂಟಿಲೇಟರ್‌ಗಳನ್ನು ಸರಕಾರಿ ಆಸ್ಪತ್ರೆಗೆ ಕಲ್ಪಿಸಲಾಗುವುದು ಎಂದವರು ತಿಳಿಸಿದರು.

ಆಕ್ಸಿಜನ್ ಜನರೇಟರ್
ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡುವಲ್ಲಿ ಯಾವೊಂದು ತೊಂದರೆಯಾಗಿಲ್ಲ. ೧೫ ರಿಂದ ೨೦ ಆಕ್ಸಿಜನ್ ಸಿಲಿಂಡರ್ ಅವಶ್ಯಕತೆಯಿದ್ದು ೨೦ರಿಂದ ೩೦ರಷ್ಟು ಈಗಾಗಲೇ ದಾಸ್ತಾನು ಇದೆ. ೫೦ ಹೊಸ ಸಿಲಿಂಡರ್ ಖರೀದಿಸುವ ಬಗ್ಗೆ ಅನುಮತಿ ಪಡೆದುಕೊಳ್ಳಲಾಗಿದ್ದು, ಮುಂದಿನ ವಾರ ಪೂರೈಕೆಯಾಗಲಿದೆ. ಕೇಂದ್ರ ಸರಕಾರದಿಂದ ಜಿಲ್ಲಾ ಆಸ್ಪತ್ರೆಗೆ ಒಂದು ಆಕ್ಸಿಜನ್ ಜನರೇಟರ್ ಮಂಜೂರಾಗಿದ್ದು, ರಾಜ್ಯ ಸರಕಾರದ ವತಿಯಿಂದ ಕಾರ್ಕಳ ಹಾಗೂ ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ತಲಾ ಒಂದರAತೆ ಆಕ್ಸಿಜನ್ ಜನರೇಟರ್ ನೀಡಲಾಗುವುದು. ಇದರೊಂದಿಗೆ ಎಂಸಿಎಫ್ ಸಂಸ್ಥೆ ತನ್ನ ಸಿಎಸ್‌ಆರ್ ಫಂಡ್‌ನಿAದ ಕಾರ್ಕಳ ಸರಕಾರಿ ಆಸ್ಪತ್ರೆಗೆ ಆಕ್ಸಿಜನ್ ಜನರೇಟರ್ ಕಲ್ಪಿಸುತ್ತಿದೆ ಎಂದು ವಿವರಿಸಿದರು.

ಜಿಲ್ಲಾಸ್ಪತ್ರೆಗೆ ತೆರಳಲು ವಿಶೇಷ ಆಂಬುಲನ್ಸ್
ಸಿಟಿ ಸ್ಕ್ಯಾನ್, ಎಂಆರ್‌ಐ ಸ್ಕ್ಯಾನ್ ಸೌಲಭ್ಯ ಪ್ರಸ್ತುತ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಇಲ್ಲವಾದರಿಂದ ಅಂತಹ ತಪಾಸಣೆಗಾಗಿ ಬರುವ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗುವುದು. ಇದಕ್ಕಾಗಿ ವಿಶೇಷ ಆಂಬುಲನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

೧೦ ಸಾವಿರ ಲಸಿಕೆ ಅವಶ್ಯಕತೆ
ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಕೊರತೆಯಿದೆ. ಜಿಲ್ಲೆಗೆ ಪ್ರತಿದಿನ ೧೦ ಸಾವಿರ ಕೋವ್ಯಾಕ್ಸಿನ್ ಅಗತ್ಯವಿದ್ದು, ನಾಲ್ಕೂವರೆ ಸಾವಿರ ಕೋವಾಕ್ಸಿನ್ ಲಸಿಕೆ ಪೂರೈಕೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಅಭೂತಪೂರ್ವ ಸಾಧನೆ
ಚುನವಾಣಾ ಫಲಿತಾಂಶದ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಪಶ್ವಿಮ ಬಂಗಾಳದಲ್ಲಿ ಬಿಜೆಪಿ ಪಕ್ಷವು ಅಭೂತಪೂರ್ವ ಸಾಧನೆ ಮಾಡಿದೆ. ಕಳೆದ ಅವಧಿಯಲ್ಲಿ ಮೂವರಷ್ಟಿದ್ದ ಬಿಜೆಪಿ ಶಾಸಕರ ಸಂಖ್ಯೆ ಇದೀಗ ೮೦ಕ್ಕೇರಿದೆ. ಕೇರಳದಲ್ಲಿ ಮೂವರು ಜಯಗಳಿಸಿರುವುದು ಕೂಡ ಪಕ್ಷದ ಸಾಧನೆ ಎಂದು ಬಣ್ಣಿಸಿದ ಅವರು ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ವಿ. ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಜಿ. ಜಗದೀಶ್, ಎಸ್‌ಪಿ ವಿಷ್ಣುವರ್ಧನ್, ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಉಪಸ್ಥಿತರಿದ್ದರು.
ವರದಿ ; ಅರುಣ ಭಟ್, ಕಾರ್ಕಳ

error: