April 26, 2024

Bhavana Tv

Its Your Channel

108 ಕೋಟಿಯ ಏತ ನೀರಾವರಿ ಯೋಜನೆಯು ಅವೈಜ್ಞಾನಿಕವಾಗಿ ನಿರ್ಮಾಣ-ಕೂಡಲೆ ಕ್ರಮ ತೆಗೆದುಕೊಳ್ಳಿ -ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ ಪೂಜಾರಿ

ಕಾರ್ಕಳ; 108 ಕೋಟಿಯ ಏತ ನೀರಾವರಿ ಯೋಜನೆಯು ಅವೈಜ್ಞಾನಿಕವಾಗಿ ನಿರ್ಮಾಣವಾಗಿ ಯೋಜನೆಯಿಂದ ಅಲ್ಲಿನ ಪರಿಸರದ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಕಳೆದ ವರ್ಷ ಮತ್ತು ಇ ವರ್ಷ ಹೆಚ್ಚು ಮಳೆ ಬಂದ ಸಂದರ್ಭ ನೆರೆನೀರು ನುಗ್ಗುವಂತಾಗಿದೆ. ಈ ಯೋಜನೆಗೆ ಪೂರಕವಾಗಿ ತೋಡುಗಳಿಗೆ ಕಟ್ಟಿರುವ ತಡೆಗೋಡೆ ಮತ್ತು ಚೆಕ್ ಡ್ಯಾಮ್ ರೈತರ ತೋಟ ಗದ್ದೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ ಇದರ ಬಗ್ಗೆ ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಸಮಸ್ತ ಸಮಗ್ರ ತನಿಖೆ ನಡೆಸಬೇಕೆಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ ಪೂಜಾರಿಯವರು ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಎಣ್ಣೆಹೊಳೆ ಯೋಜನೆ ಸೇರಿ ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳಲ್ಲಿ ಅನಗತ್ಯವಾಗಿ ಅವಶ್ಯ ಇಲ್ಲದ ಕಿಂಡಿ ಅಣೆಕಟ್ಟು ಕಾಲುಸಂಕ ಕಿರು ಸೇತುವೆಗಳನ್ನು ಮಾಡುತ್ತಿದ್ದೀರಿ, ಅವಶ್ಯಕ ಅಭಿವೃದ್ಧಿಗಳನ್ನು ಮಾಡಿ ಆದರೆ ಜನರ ತೆರಿಗೆ ಹಣವನ್ನು ಈ ರೀತಿ ಯಲ್ಲಿ ಲೂಟಿ ಯಾಗುವುದು ಬೇಡ, ಕಿರು ನೀರು ಯೋಜನೆ ರಾಜ್ಯಮಟ್ಟದ ನೀರಾವರಿ ಯೋಜನೆಗಳನ್ನು ಸರಕಾರ ಮಂಜೂರು ಮಾಡುವಾಗ ಅದಕ್ಕೆ ಯಾರು ಜವಾಬ್ದಾರರು ಸಚಿವರು ಶಾಸಕರು ಅಥವಾ ಸಂಸದರು ಅವರು ಮಂಜೂರುಗೊಳಿಸಿದೆ ಯೋಜನೆಗಳಿಗೆ ಅವರ ಜವಾಬ್ದಾರರು ಕಳೆದ ಕಾಮಗಾರಿಕೆ ಜೊತೆಗೆ ಜನತೆಗೆ ಅನುಕೂಲವಾಗುವ ಬದಲು ಜನರಿಗೆ ಕಂಟಕವಾಗುವ ಯೋಜನೆಗಳನ್ನು ತಕ್ಷಣವೇ ನಿಲ್ಲಿಸಿ ಜನ ಕರೋನ ಸಂಕಷ್ಟದಲ್ಲಿರುವಾಗ ಇವರ ಅಭಿವೃದ್ಧಿ ಹೆಸರಿನಲ್ಲಿ ಆಗುವ ಎಲ್ಲಾ ಕಾಮಗಾರಿಗೆ ನಿಲ್ಲಿಸಿ ಕಮಿಷನ್ ದಂಧೆಯನ್ನು ನಿಲ್ಲಿಸಿ ಎಂದು ಬ್ಲಾಕ್ ಕಾಂಗ್ರೆಸ್ ಆಗ್ರಹಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸದಾಶಿವ ದೇವಾಡಿಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾರ್ಕಳ, ದಿನೇಶ್ ಶೆಟ್ಟಿ, ರಾಮಣ್ಣ ಶೆಟ್ಟಿ ಗ್ರಾಮ ಅಧ್ಯಕ್ಷರು ಮರ್ಣೆ, ಜಾನ್ ಟೆಲ್ಲಿಸ್ ಗ್ರಾಮ್ ಪಂಚಾಯತ್ ಸದಸ್ಯರು ಅಜೆಕಾರು ಮತ್ತು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಕೆ. ಮ್. ಖಲೀಲ್ ವಂದಿಸಿದರು.

ವರದಿ ಅರುಣ್ ಕುಮಾರ್ ಭಟ್ ಕಾರ್ಕಳ

error: