April 25, 2024

Bhavana Tv

Its Your Channel

ಹುಟ್ಟಿದ 3-4ದಿನದ ಗಂಡು ಕರುಗಳನ್ನು ಬಿಟ್ಟು ಹೋದ ಅಪರಿಚಿತರು, ನೀರು ಆಹಾರ ಇಲ್ಲದೆ 2 ಘಟನೆ ಕರುಗಳು ಸಾವು

ಬೈಂದೂರು ; ತಾಲೂಕಿನ ಹೇರೂರು ಗ್ರಾಮದ ಯರುಕೋಣೆ ಸಮೀಪದ ಆಲ್ ಗೆದ್ದಕೇರಿಯಲ್ಲಿ ನಡೆದಿದೆ. ಹೈಬ್ರಿಡ್ ಜಾತಿಯ ಹುಟ್ಟಿದ 3-4ದಿನಗಳ ಸುಮಾರು 10-12 ಗೋವಿನ ಗಂಡು ಕರುಗಳನ್ನು ಅಪರಿಚಿತರು ವಾಹನದಲ್ಲಿ ತಂದು ಯರುಕೋಣೆ ಸಮೀಪದ ಆಲಗೆದ್ದಕೇರಿಯ ಕಲ್ಲುಪಾರಿಗಳ ಮಧ್ಯೆ ಬಿಟ್ಟು ಹೋಗಿದ್ದಾರೆ.
ಸ್ಥಳೀಯ ನಿವಾಸಿ ಶಿಕ್ಷಕ ಜಯಪ್ರಕಾಶ ಶೆಟ್ಟಿ ಮಾತನಾಡಿ ನಾನು ಶಾಲೆಯಿಂದ ಮನೆಗೆ ಬರುವ ಸಮಯದಲ್ಲಿ ಗಂಡು ಕರುಗಳ ಕೂಗಾಟ ಕೇಳಿಸಿದ್ದು ಕಲ್ಲುಪಾರಿಗಳ ಒಳಗೆ ಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಆಹಾರ ನೀರು ಇಲ್ಲದೆ ಹಸಿವಿನಿಂದ 2 ಕರುಗಳು ಸಾವನ್ನಪ್ಪಿದೆ. ಕೆಲವು ಕರುಗಳು ಹಸಿವಿನಿಂದ ನಿತ್ರಾಣ ಗೊಂಡಿದ್ದು ಸ್ಥಳೀಯರು ನೀರು ಕುಡಿಸಿ, ಹುಲ್ಲು ನೀಡಿ ಉಪಚರಿಸಿದ್ದರು.
ಬೈಂದೂರು ಪಶುವೈದ್ಯಾಧಿಕಾರಿಗೆ ನಾಗರಾಜ್ ಅವರು ಕರುಗಳಿಗೆ ಚಿಕಿತ್ಸೆಯನ್ನು ನೀಡಿದರು
10-12ಕರುಗಳನ್ನು ಬಿಟ್ಟು ಹೋಗಿರುವುದಾಗಿ ಸ್ಥಳೀಯರು ಶಂಖೆ ವ್ಯಕ್ತಪಡಿಸಿದು, 5 ಕರುಗಳು ಕಲ್ಲುಪಾರಿಗಳ ಮಧ್ಯೆ ಸಿಕ್ಕಿದ್ದು, ಇನ್ನುಳಿದ ಕರುಗಳಿಗೆ ಹುಡುಕಾಟ ನಡೆಸಿರುವುದಾಗಿ ಮಾಹಿತಿ ನೀಡಿದ್ದಾರೆ.

ನಾಗೇಶ್ ಯರುಕೋಣೆ ಅವರು ಮನೆಯಲ್ಲಿ ಕರುಗಳನ್ನು ತಂದು ತಾತ್ಕಾಲಿಕ ಉಳುವಿಗೆ ವ್ಯವಸ್ಥೆ ಮಾಡಲಾಗಿದೆ. ಜನಪ್ರತಿನಿಧಿಗಳು ಕರುಗಳನ್ನು ಗೋಶಾಲೆಗೆ ಕಳುಹಿಸಲು ವಿಶ್ವ ಹಿಂದೂ ಪರಿಷತ್ ಸ್ಥಳೀಯ ಜನಪ್ರತಿನಿಧಿಗಳು ಸಹಕರಿಸಿದ್ದಾರೆ.

ಕರುಗಳು ರಕ್ಷಣೆಗೆ ಶಿಕ್ಷಕ ಜಯಪ್ರಕಾಶ ಶೆಟ್ಟಿ, ಸುಧಾಕರ ಪೂಜಾರಿ, ನಾಗೇಶ್, ರಕ್ಷಿತ್, ಮಂಜುನಾಥ ಸಹಾಯ ಮಾಡಿದರು.
ವರದಿ ; ಎಚ್. ಶುಶಾಂತ ಬೈಂದೂರ

error: