July 26, 2021

Bhavana Tv

Its Your Channel

ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಇಳಿಕೆ. ಕರೋನ ಸ್ವಯಂಟೆಸ್ಟಿAಗ್ ಮಾಡಿಸಿಕೊಳ್ಳಿ, ಪುರಸಭೆ ಅಧಿಕಾರಿ ರೂಪ ಶೆಟ್ಟಿ ಮನವಿ

ಕಾರ್ಕಳ ; ನೂತನ ಮುಖ್ಯಾಧಿಕಾರಿಯಾಗಿ ಅಧಿಕಾರಿಯಾಗಿ ವಹಿಸಿಕೊಂಡ ರೂಪಾ ಶೆಟ್ಟಿಯವರು ಮಾದ್ಯಮದವರೊಂದಿಗೆ ಮಾತನಾಡಿ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಕೊರೊನಾ ಸೋಂಕು ಗರಿಷ್ಠ ಮಟ್ಟದಲ್ಲಿ ಇಳಿಕೆಯಾಗಿದೆ. ಇದು ತುಂಬಾ ಸಂತೋಷದ ವಿಷಯ ಎಂದು ತಿಳಿಸಿದರು. ಪುರಸಭೆ ವ್ಯಾಪ್ತಿಯ ಒಳಗೆ ಸಂಚಾರಿ ಕರೋನ ಟೆಸ್ಟಿಂಗ್ ವಾಹನದ ವ್ಯವಸ್ಥೆ ಮಾಡಿದ್ದೇವೆ. ಪುರಸಭೆ ವ್ಯಾಪ್ತಿಯ ಒಳಗೆ ದೊಡ್ಡ ಹಾಗೂ ಸಣ್ಣ ವ್ಯಾಪಾರಸ್ಥರು ಹಾಗೂ ಕಾರ್ಮಿಕರು ಎಲ್ಲರೂ ಕರೋನ ಸ್ವಯಂಟೆಸ್ಟಿAಗ್ ಅನ್ನು ಮಾಡಿಸಿ ಕರೋನ ಮಹಾಮಾರಿಯನ್ನು ತಡೆಗಟ್ಟುವಲ್ಲಿ ಪುರಸಭೆ ಯೊಂದಿಗೆ ಕೈಜೋಡಿಸಬೇಕು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಮಾಧ್ಯಮದ ಮೂಲಕ ಪುರಸಭೆ ಅಧಿಕಾರಿ ರೂಪ ಶೆಟ್ಟಿ ಮನವಿ ಮಾಡಿಕೊಂಡರು.
ವರದಿ ; ಅರುಣ ಭಟ್, ಕಾರ್ಕಳ

error: