April 17, 2024

Bhavana Tv

Its Your Channel

ಕೆಪಿಸಿಸಿ ಮಾರ್ಗದರ್ಶನದಂತೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ಸಿನ ಬಜಗೋಳಿ ಗ್ರಾಮ ಸಮಿತಿ, ಹಾಗೂ ಮಹಿಳಾ ಸಮಿತಿಯಿಂದ “ಪೆಟ್ರೋಲ್ ೧೦೦ ನಾಟ್ ಔಟ್” ಪ್ರತಿಭಟನಾ ರ‍್ಯಾಲಿ

ಕಾರ್ಕಳ ; ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಮಾತನಾಡಿ ಕಳೆದ ೬ ವರ್ಷಗಳಲ್ಲಿ ಇಂಧನ ಬೆಲೆ ೩೦೦ ಶೇ. ಏರಿಕೆಯಾಗಿದೆ. ಇದೀಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಲೀಟರಿಗೆ ಸುಮಾರು ೬೪.೨೧ ಶೇ. ತೆರಿಗೆ ಹೊರಿಸುತ್ತಿವೆ. ಇದರ ಹೊರತಾಗಿಯೂ ದೇಶ ಅಭಿವೃದ್ಧಿ ಕಂಡಿಲ್ಲ. ಕೊರೋನಾ ನಿರ್ವಹಣೆ ಮತ್ತು ಸಂತ್ರಸ್ತರಿಗೆ ಪರಿಹಾರ ನೀಡಲು ಸರಕಾರದ ಬಳಿ ಹಣವಿಲ್ಲ. ಸರಕಾರಿ ಸಂಸ್ಥೆಗಳು ಬಿಕರಿ ಅಗುತ್ತಿವೆ. ಆದಾಗ್ಯೂ ಕೇಂದ್ರ ಇಂಧನ ಸಚಿವರು ಅಭಿವೃದ್ಧಿಯ ಕೆಲಸಗಳಿಗಾಗಿ ನಾವು ಇಂಧನ ಬೆಲೆ ಏರಿಕೆ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ಹಾಗಾದರೆ ಈ ತೆರಿಗೆ ಹಣ ಎಲ್ಲಿಗೆ ಹೋಯಿತು. ಬಿಜೆಪಿಯ ಕಿಸೆಗೆ ಹೋಯಿತೇ. ಈ ಪ್ರಶ್ನೆಗೆ ಉತ್ತರ ಸಿಗುವವರೆಗೆ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ ಎಂದರು.
ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ನಳಿನಿ ಆಚಾರ್ಯ, ತಾಪಂ. ಮಾಜಿ ಸದಸ್ಯ ಸುಧಾಕರ ಶೆಟ್ಟಿ ಇಂಧನ ಬೆಲೆ ಏರಿಕೆ ಖಂಡಿಸಿ ಮಾತಾಡಿದರು,
ನಗರ ಕಾಂಗ್ರೆಸ್ ಅಧ್ಯಕ್ಷ ಮಧುರಾಜ್ ಶೆಟ್ಟಿ, ತಾಪಂ ಮಾಜಿ ಸದಸ್ಯ ದಯಾನಂದ ಬಂಗೇರ, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಆರೀಫ್ ಕಲ್ಲೊಟ್ಟೆ, ಬ್ಲಾಕ್ ಪ್ರದಾನ ಕಾರ್ಯದರ್ಶಿ ಪ್ರಭಾಕರ ಬಂಗೇರ, ಅಜಿತ್ ಹೆಗ್ಡೆ, ಅನಿಲ್ ಪೂಜಾರಿ, ಸುನೀಲ್ ಕೋಟ್ಯಾನ್, ನವೀನ್ ದೇವಾಡಿಗ, ವಿವೇಕಾನಂದ ಶೆಣೈ, ಪುರಸಭಾ ಸದಸ್ಯರಾದ ಶುಭದಾ ರಾವ್, ರೆಹಮತ್, ಸೋಮನಾಥ ನಾಯ್ಕ್, ಹಾಗೂ ಪ್ರಥ್ವೀರಾಜ್ ಜೈನ್, ಸಂತೋಷ ಪೂಜಾರಿ, ನಾಗೇಶ ಭಂಡಾರಿ, ಸುನೀಲ್ ಭಂಡಾರಿ, ರಮಾಕಾಂತ ಶೆಟ್ಟಿ, ಮಕ್ಬೂಲ್, ಅಬ್ದುಲ್ ರಹೀಮ್, ರಂಜಿತ್ ಟಿಸಿ ಉಪಸ್ಥಿತರಿದ್ದರು.

error: