March 24, 2024

Bhavana Tv

Its Your Channel

ಜೋಡುರಸ್ತೆಯ ಬಳಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ಸಿನ ಐಟಿ ಸೆಲ್ ಮತ್ತು ಸೇವಾದಳ ದಿಂದ ” ಪೆಟ್ರೋಲ್ ೧೦೦ ನಾಟ್ ಔಟ್” ಪ್ರತಿಭಟನಾ ರ‍್ಯಾಲಿ.

ಕಾರ್ಕಳ ; ಕೊರೋನಾ ಸಂಕಷ್ಟದ ಈ ದುರಂತ ಸನ್ನಿವೇಶದಲ್ಲಿ ದೇಶದ ಜನ ಆಹಾರ ಔಷಧಿಗಾಗಿ ಪರದಾಡುತಿದ್ದು ಸರಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಆದರೆ ಆಳುವ ಸರಕಾರಗಳು ಇವು ಯಾವುದರ ಪರಿವೆಯೂ ಇಲ್ಲದೆ ಅವೈಜ್ಞಾನಿಕ ರೀತಿಯಲ್ಲಿ ತೆರಿಗೆ ವಿಧಿಸಿ, ಇಂಧನದ ಬೆಲೆ ಲೀಟರಿಗೆ ೧೦೦ ರೂ. ಗಡಿದಾಟಿಸಿ ಆಹಾರ ಔಷದಿಗಳ ಬೆಲೆ ಏರಿಕೆಗೆ ಕಾರಣರಾಗಿ ಜನರ ಬದುಕನ್ನು ವ್ಯವಸ್ಥಿತ ರೀತಿಯಲ್ಲಿ ಸುಲಿಗೆ ಮಾಡುತ್ತಿವೆ. ಇದೊಂದು ನಿರ್ಲಜ್ಜ ಸರಕಾರ ಎಂದು ಜಿಲ್ಲಾ ಕಾಂಗ್ರಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದ್ದಾರೆ.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿ, ಹೆಬ್ರಿ ಬ್ಲಾಕ್ ಅಧ್ಯಕ್ಷ ಮಂಜುನಾಥ ಪೂಜಾರಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಸುಶಾಂತ್ ಸುಧಾಕರ್, ಬ್ಲಾಕ್ ಕಾರ್ಯದರ್ಶಿ ಪ್ರಭಾಕರ ಬಂಗೇರ ಸಂದರ್ಭೋವಿತವಾಗಿ ಮಾತಾಡಿದರು.
ಡಿಸಿಸಿ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಸಿರಿಯಣ್ಣ ಶೆಟ್ಟಿ, ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ರಾಜ್ಯ ಕೃಷಿ ವಿಭಾಗದ ಕಾರ್ಯದರ್ಶಿ ಉದಯ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ ಇನ್ನಾ, ಗ್ರಾಮೀಣ ಸಮಿತಿ ಅಧ್ಯಕ್ಷ ತೋಮಸ್ ಮಸ್ಕರೇನಸ್, ನವೀನ್ ದೇವಾಡಿಗ, ಅಲ್ಪ ಸಂಖ್ಯಾತ ಘಟಕದ ಮಹಮ್ಮದ್ ಅಸ್ಲಾಂ, ಜಿಲ್ಲಾ ಸಮಿತಿ ಉಪಾಧ್ಯಕ್ಷ ಆರಿಫ್ ಕಲ್ಲೊಟ್ಟೆ, ರೆಹಮತ್, ಎಸ್ಸಿ ಘಟಕಾಧ್ಯಕ್ಷ ಅಣ್ಣಪ್ಪ ನಕ್ರೆ, ಅನಿತಾ ಡಿಸೋಜ, ಪುರಸಭಾ ಸದಸ್ಯರಾದ ರೆಹಮತ್ ಶೇಕ್, ಪ್ರತಿಮಾ, ಶೋಭಾ ,ತಾರಾನಾಥ ಶೆಟ್ಟಿ , ರಾಜೇಂದ್ರ ದೇವಾಡಿಗ, ಸುನೀಲ್ ಭಂಡಾರಿ, ಕೃಷ್ಣ ಹೆಗ್ಡೆ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ವರದಿ; ಅರುಣ ಭಟ್,ಕಾರ್ಕಳ


error: