March 25, 2024

Bhavana Tv

Its Your Channel

೧೫ ವರ್ಷದ ಒಳಗಿನ ಮಕ್ಕಳಿಗೆ ವಾತ್ಸಲ್ಯ ಎಂಬ ಹೆಸರಿನಡಿಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡುತ್ತಿದ್ದೇವೆ- ಶಾಸಕ ಸುನೀಲ ಕುಮಾರ

ಕಾರ್ಕಳ, ವೈದ್ಯಕೀಯ ಕ್ಷೇತ್ರದಲ್ಲಿ ನಮ್ಮ ತಾಲ್ಲೂಕಿನಲ್ಲಿ ಸಮರ್ಥವಾಗಿ ಮಾಡುವ ಕೆಲಸ ಎಲ್ಲರ ಸಹಕಾರದೊಂದಿಗೆ ಮಾಡಿದ್ದೇವೆ. ಪರಿಸ್ಥಿತಿ ಅನುಗುಣವಾಗಿ ಹೊಸ ಹೊಸ ವ್ಯವಸ್ಥೆಯನ್ನು ಕೂಡ ಜೋಡಿಸಿಕೊಳ್ಳುವ ವ್ಯವಸ್ಥೆಯನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಮಾಡಿದ್ದೇವೆ. ವಾತ್ಸಲ್ಯ ಎಂಬ ಹೆಸರಿನಡಿಯಲ್ಲಿ ಮುಂಬರುವ ದಿನಗಳಲ್ಲಿ ಹೆಚ್ಚು ಅನಾಹುತ ಗಳು ಆಗದಂತೆ ಎಚ್ಚರಿಕೆ ಕ್ರಮ ವಹಿಸಬೇಕು ಅಂತಹ ಕ್ರಮಗಳನ್ನು ತಾಲೂಕು ಆಡಳಿತ ವೈದ್ಯರ ಸಹಾಯದಿಂದ ಮಾಡಿದ್ದೇವೆ. ಇನ್ನು ಬರುವಂತಹ ಕರೋನ ಮೂರನೇ ಅಲೆಯನ್ನು ಮುನ್ನೆಚ್ಚರಿಕೆಯಾಗಿ ಕಾರ್ಕಳದಲ್ಲಿ ವಿಶೇಷವಾದಂತಹ ವ್ಯವಸ್ಥೆ ಕಾರ್ಕಳ ತಾಲೂಕಿನಲ್ಲಿ ನಡಿತಾ ಇದೆ. ೧೫ ವರ್ಷದ ಒಳಗಿನ ಮಕ್ಕಳಿಗೆ ವಾತ್ಸಲ್ಯ ಎಂಬ ಹೆಸರಿನಡಿಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡುತ್ತಿದ್ದೇವೆ. ದೊಡ್ಡಪ್ರಮಾಣದಲ್ಲಿ ಸುಮಾರು ಎರಡು ತಿಂಗಳ ಕಾಲ ಆರೋಗ್ಯ ತಪಾಸಣೆ ಶಿಬಿರ ಪ್ರತಿಗ್ರಾಮದ ಶಾಲಾ ಮಟ್ಟದಲ್ಲಿ ನಡೆಯಲಿದೆ. ಸರಿಸುಮಾರು ೪೦೦೦೦ ಮಕ್ಕಳು ಈ ತಪಾಸಣಾ ಶಿಬಿರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಉಭಯ ಜಿಲ್ಲೆಗಳ ತಜ್ಞ ವೈದ್ಯರ ತಂಡಗಳು ಈ ಮಕ್ಕಳ ಆರೋಗ್ಯ ತಪಾಸಣೆ ಮಾಡಲಿರುವರು. ೨೨೦ ಸರಕಾರಿ ಶಾಲೆಗಳ ಉಳಿದಂತೆ ಖಾಸಗಿ ಶಾಲೆ ಮಕ್ಕಳನ್ನು ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ನಾವು ಈ ಸಂದರ್ಭದಲ್ಲಿ ನಾನ್ನೂರಕ್ಕೂ ಹೆಚ್ಚು ಶಿಬಿರಗಳನ್ನು ಮಾಡುತ್ತಿದ್ದೇವೆ. ಇದೇ ತಿಂಗಳು ೨೮ ರಂದು ಗೃಹ ಸಚಿವರಾದ ಹಾಗೂ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಯವರು ಶಿಬಿರದ ಉದ್ಘಾಟನೆಯನ್ನು ನಗರದ ಪೆರ್ವಾಜೆ ಶಾಲೆಯಲ್ಲಿ ಉದ್ಘಾಟಿಸುವರು. ಮಕ್ಕಳ ಪೋಷಕರು ಯಾವುದೇ ರೀತಿಯ ಅಸಡ್ಡೆಯನ್ನು ಮಾಡದೆ ಇದರ ಪ್ರಯೋಜನವನ್ನು ಸದುಪಯೋಗ ಪಡಿಸಬೇಕೆಂದು ಶಾಸಕರುತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಮೂಲಕ ಮನವಿ ಮಾಡಿದರು.

error: