April 20, 2024

Bhavana Tv

Its Your Channel

ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಂದ ವಾತ್ಸಲ್ಯ ಶಿಬಿರದ ಉದ್ಘಾಟನೆ

ಕಾರ್ಕಳ : ರಾಜ್ಯ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷದಿಂದ ೧೫ ವರ್ಷದ ಮಕ್ಕಳಿಗೆ ಕೋರೋಣ ಮೂರನೇ ಅಲೆಯನ್ನು ತಡೆಯುವಂತ ವಿಶೇಷ ಆರೋಗ್ಯ ತಪಾಸಣೆಯನ್ನು ಮಾಡಿ ಮಕ್ಕಳಿಗೆ ಆರೋಗ್ಯವಂತ ರಾಗಿ ಮಾಡುವ ಸುಮಾರು ಎರಡು ತಿಂಗಳುಗಳ ಕಾಲ ನಡೆಯುವ ವಾತ್ಸಲ್ಯ ಎಂಬ ಶಿಬಿರದ ಉದ್ಘಾಟನೆಯನ್ನು ನಗರದ ಪೆರುವಾಜೆ ಶಾಲೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು.

ನಂತರ ಮಾಡಿದ ಸಚಿವರು ಇವತ್ತಿನ ಆಧುನಿಕ ಕಾಲದಲ್ಲಿ ಖಾಸಗೀಕರಣ ಉದಾರಿಕರಣ ಹಾಗೂ ಜಾತೀಕರಣ ನೋಡುತ್ತಿದ್ದೇವೆ. ಅದರಲ್ಲೂ ಅಂತಃಕರಣ ನೋಡುತ್ತಿದ್ದೇವೆ. ಯಾವ ಮನುಷ್ಯನಲ್ಲಿ ಅಂತಃಕರಣ ಇಲ್ಲವೋ ಅಲ್ಲಿ ಮಾನವ ಬದುಕು ಬೇಕಾದಂತ ವಾತಾವರಣ ಇರುವುದಿಲ್ಲ ಎಂದು ಹೇಳಿದರು. ಕೊರೋಣ ದಿಂದ ನಾವು ಹಲವಾರು ಪಾಠಗಳನ್ನು ಕಲಿತಿದ್ದೇವೆ. ವಾತ್ಸಲ್ಯ ಎಂಬ ವಿಶೇಷ ಮಕ್ಕಳ ಯೋಜನೆ ಅಡಿಯಲ್ಲಿ ಸುಮಾರು ೪೦೦೦೦ ಮಕ್ಕಳು ತಜ್ಞ ವೈದ್ಯರಿಂದ ಪರೀಕ್ಷಿಸಲ್‌ಪಡುತಾರೇ. ಕೆಲ ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಆಯುಷ್ಮಾನ್ ಯೋಜನೆಯಲ್ಲಿ ಸರಕಾರದಿಂದ ಉಚಿತ ಚಿಕಿತ್ಸೆಯನ್ನು ನೀಡಲಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿ ಸುನಿಲ್ ಕುಮಾರ್ ನಾವು ಒಂದು ವರ್ಷದಿಂದ ದೊಡ್ಡಪ್ರಮಾಣದಲ್ಲಿ ಆರೋಗ್ಯ ಸಂಬAಧಪಟ್ಟ ಆತಂಕಗಳು ನಿರ್ಮಾಣವಾಗಿ ಅದರಿಂದ ಹೊರಬರುವ ಪ್ರಯತ್ನಗಳು ಎಲ್ಲರ ಮನೆಯಲ್ಲಿ ಕೂಡ ನಡೆಯುತ್ತದೆ. ಕರೋನ ದೊಡ್ಡ ಪ್ರಮಾಣದಲ್ಲಿ ಜನಜೀವನದಲ್ಲಿ ಆತಂಕ ಉಂಟು ಮಾಡಿದೆ. ಆದರೆ ಮೂರನೇ ಅಲೆ ಬರುತ್ತದೆ, ಅಂತ ಸಂಗತಿಗಳು ನಮ್ಮ ಊರಿನ ನಮ್ಮ ಮಕ್ಕಳ ರಕ್ಷಣೆ ಮಾಡುವಂತ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್, ಜಿಲ್ಲಾ ಆರೋಗ್ಯಾಧಿಕಾರಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುರಸಭೆ ಅಧ್ಯಕ್ಷರು ಇನ್ನಿತರರು ಉಪಸ್ಥಿತರಿದ್ದರು.

ಅರುಣ ಭಟ್ ಕಾರ್ಕಳ

error: