April 19, 2024

Bhavana Tv

Its Your Channel

ಹೆಬ್ರಿಯ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಲೋಕಾರ್ಪಣೆ.

ಹೆಬ್ರಿ : ರೈತರನ್ನು ಮಂಗಗಳ ಕಾಟದಿಂದ ರಕ್ಷಿಸಲು ಮಂಕಿ ಪಾರ್ಕ್ ಸ್ಥಾಪಿಸಲು ಶೀಘ್ರವೇ ತಜ್ಞರ ಸಮಿತಿ ರಚಿಸಿ, ಆ ಮೂಲಕ ರೈತರ ಹಲವಾರು ವರ್ಷದ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಅವರು ಶನಿವಾರ ಹೆಬ್ರಿಯಲ್ಲಿ ಅರಣ್ಯ ಇಲಾಖೆಯು ನಿರ್ಮಿಸಿದ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯನವನವನ್ನು ಲೋಕಾರ್ಪಣೆ ಮಾಡಿದರು.
ನಾವು ಜನರು ಅರಣ್ಯ ಮತ್ತು ಪ್ರಾಣಿ ಸ್ನೇಹಿಗಳಾಗಿ ಕೆಲಸ ಮಾಡಿ ಅಭಿವೃದ್ದಿಗೆ ಕೈಜೋಡಿಸಬೇಕಿದೆ, ಕಾನೂನಿನ ನೆಪದಲ್ಲಿ ಅಭಿವೃದ್ಧಿಗೆ ಅಡ್ಡಿ ಪಡಿಸಬಾರದು ಎಂದು ಸಚಿವ ಅರವಿಂದ ಲಿಂಬಾವಳಿ ಅಧಿಕಾರಿಗಳಿಗೆ ಸೂಚಿಸಿದರು.
ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ವಿಶೇಷ ಮುತುವರ್ಜಿ ವಹಿಸಿ ನಿವಾರಿಸಲಾಗುತ್ತದೆ, ಹೆಬ್ರಿ ಮುನಿಯಾಲು ವಿಶೇಷ ವಿದ್ಯುತ್ ಲೈನ್‌ಗೆ ಇರುವ ಅರಣ್ಯ ಇಲಾಖೆಯ ತೊಡಕು ನಿವಾರಣೆಗೆ ಸೂಚನೆ ನೀಡಿದರು.
ಶಾಸಕ ಸುನೀಲ್ ಕುಮಾರ್ ಕಾರ್ಯವೈಖರಿ ನಕ್ಸಲರ ಪಲಾಯನ : ಹೆಬ್ರಿ ಶೃಂಗೇರಿಯಲ್ಲಿ ಹಿಂದೆ ನಿತ್ಯವೂ ನಕ್ಸಲರ ಕಾಟವಿತ್ತು, ಶಾಸಕ ಸುನೀಲ್ ಕುಮಾರ್ ಶಾಸಕರಾದ ಬಳಿಕ ಅವರ ಕಾರ್ಯವೈಖರಿ ಕಂಡು ನಕ್ಸಲರೇ ಪಲಾಯನ ಮಾಡಿದ್ದಾರೆ ಎಂದು ಸಚಿವರು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸುನೀಲ್ ಕುಮಾರ್ ಹೆಬ್ರಿ ಕಾರ್ಕಳ ತಾಲ್ಲೂಕನ್ನು ಪ್ರವಾಸೋಧ್ಯಮ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸುತ್ತೇವೆ, ಹೆಬ್ರಿಯ ಉದ್ಯಾನವನವನ್ನು ಹೆಬ್ರಿಯ ಆಸ್ತಿ ಎಂದು ನಿರ್ವಹಿಸಿ ಉಳಿಸಬೇಕಿದೆ ಎಂದರು. ಕುಂದಾಪುರ ಡಿಎಫ್‌ಒ ಆಶೀಷ್ ರೆಡ್ಡಿ ಮಾತನಾಡಿ ೧೦ ವರ್ಷದ ಹಿಂದೆ ಪಾರ್ಕ್ ನಿರ್ಮಾಣ ಕಾರ್ಯ ಆರಂಭಗೊAಡಿದ್ದು ಎರಡು ವರ್ಷದ ಹಿಂದೆ ಕಾರ್ಯ ಪೂರ್ಣಗೊಂಡಿತ್ತು. ಕಳೆದ ಎರಡು ವರ್ಷದ ಹಿಂದೆಯೇ ಪಾರ್ಕ್ ಜನೋಪಯೋಗಕ್ಕೆ ಮುಕ್ತವಾಗಿತ್ತು. ಇದೀಗ ಅಧೀಕೃತವಾಗಿ ಉದ್ಘಾಟನೆಯಾಗಿದೆ. ಮುಂದಿನ ಪೀಳಿಗೆಗೆ ಅರಣ್ಯ ಮತ್ತು ಪರಿಸರವನ್ನು ಉಳಿಸಲು ಹಸಿರು ಉದ್ಯಾನವನ ನಿರ್ಮಾಣ ಮಾಡಲಾಗಿದೆ ಎಂದರು.
ಪಾರ್ಕ್ ಸ್ಥಾಪನೆಯ ಹಿಂದೆ ಶ್ರಮಿಸಿದ ಹೆಬ್ರಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಜಯಕರ ಪೂಜಾರಿ ಅವರ ಶ್ರಮವನ್ನು ಶಾಸಕ ಸುನೀಲ್ ಕುಮಾರ್ ಶ್ಲಾಘೀಸಿದರು. ಪಾರ್ಕಿನ ಸಾಕ್ಷಾಚಿತ್ರ ನಿರ್ಮಿಸಿದ ಛಾಯಗ್ರಾಹಕ ಮೂಡಬಿದಿರೆಯ ರವಿ ಕೋಟ್ಯಾನ್ ಅವರನ್ನು ಸಚಿವರು ಗೌರವಿಸಿದರು.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಹೆಬ್ರಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಜಯಕರ ಪೂಜಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಾಲತಿ, ನಾಡ್ಪಾಲಿನ ದಿನೇಶ ಹೆಗ್ಡೆ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಮಿಲ್ಲೋ ಟ್ಯಾಗೋ, ಪ್ರಕಾಶ್ ನೆಟಾಲ್ಕರ್, ರುಥ್ರೇನ್, ಡಾ.ಪ್ರಶಾಂತ್ ಪಿಕೆಎಂ, ಹೆಬ್ರಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್, ವಿವಿಧ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ, ಹೆಬ್ರಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಪೂಜಾರಿ ಇದ್ದರು. ಕಬ್ಬಿನಾಲೆ ಸೀತಾರಾಮ ಹೆಬ್ಬಾರ್ ನಿರೂಪಿಸಿ ಆರ್‌ಎಫ್‌ಒ ದಿನೇಶ್ ಕುಮಾರ್ ವಂದಿಸಿದರು.

ವರದಿ ; ಅರುಣ ಭಟ್, ಕಾರ್ಕಳ

error: