April 24, 2024

Bhavana Tv

Its Your Channel

ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್‌ನಲ್ಲಿ ಉಚಿತ ಎಂಬ್ರಾಯ್ಡರಿ ತರಬೇತಿಯ ಸಮಾರೋಪ ಸಮಾರಂಭ

ಕಾರ್ಕಳ: ಶ್ರೀನಿವಾಸ ಸೇವಾ ಟ್ರಸ್ಟ್ ಅಧೀನದಲ್ಲಿರುವ ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್ ಇವರ ಆಶ್ರಯದಲ್ಲಿ ಇಂದು ಉಚಿತ ಎಂಬ್ರಾಯ್ಡರಿ ತರಬೇತಿಯ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಕಾರ್ಕಳದ ಪುರಸಭೆಯ ಅಧ್ಯಕ್ಷರಾದ ಸುಮಾ ಕೇಶವ್ ಇವರು ಹೆಣ್ಣುಮಕ್ಕಳ ಸ್ವಾವಲಂಬನೆ ಬದುಕನ್ನು ಕಟ್ಟಿಕೊಳ್ಳಬೇಕು. ಇಲ್ಲಿ ಹೊಲಿಗೆ ಮತ್ತು ಎಂಬ್ರಾಯ್ಡರಿ ತರಬೇತಿಗಳನ್ನು ಕಲಿತುಕೊಂಡು ಎಷ್ಟು ಮಹಿಳೆಯರು ತಮ್ಮ ಮನೆಯ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ ಅಂತವರಿಗೆ ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್ ನಮ್ಮ ಕಾರ್ಕಳದಲ್ಲಿ ಮಹಿಳೆಯರಿಗಾಗಿ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಇನ್ನೋರ್ವ ಅತಿಥಿಯಾದ ಕಾರ್ಕಳದ ಸುರಕ್ಷಾ ಅನಾಥಾಶ್ರಮ ಅಧ್ಯಕ್ಷರಾದ ಆಯಶ್ಯ ಇವರು ಈ ಸಂಸ್ಥೆಯಲ್ಲಿ ಕಲಿತ ತರಬೇತಿಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸ್ವಂತ ಉದ್ಯೋಗ ಮಾಡಿಕೊಂಡು ಮಹಿಳೆಯರು ಮುಂದೆ ಬರಬೇಕು ಎಂದರು.
ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್ ಅಧ್ಯಕ್ಷರು ಸಾಧನ ಇವರು ನಮ್ಮ ಸಂಸ್ಥೆಯ ಪ್ರಾರಂಭವಾದ ಗಳಿಂದಲೇ ಆರು ತಿಂಗಳಿಗೊಮ್ಮೆ ಉಚಿತ ತರಬೇತಿಯನ್ನು ಕೊಡುತ್ತ ಬಂದಿದ್ದೇವೆ ಇದು ನಮ್ಮ ಒಂದು ಸಮಾಜಸೇವೆ ಎಂದರು. ಇನ್ನು ಸರ್ಕಾರದಿಂದ ಕೌಶಲ್ಯ ಕರ್ನಾಟಕ ಮಹಿಳೆಯರಿಗಾಗಿ ಉಚಿತ ಯೋಜನೆ ದೊರೆತಲ್ಲಿ ಖಂಡಿತ ನಮ್ಮ ಸಂಸ್ಥೆ ನಿರ್ವಹಿಸಿ ಕೊಡುತ್ತವೆ. ನಮ್ಮ ಸಂಸ್ಥೆಯಲ್ಲಿ ಕಲಿತ ೨೮೬ ವಿದ್ಯಾರ್ಥಿಗಳು ಸ್ವಂತ ಉದ್ಯೋಗ ಹಾಗೂ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವಂತ ಉದ್ಯೋಗ ಮಾಡುವವರಿಗೆ ಬ್ಯಾಂಕಿನ ಸಾಲದ ಸೌಲಭ್ಯದ ಮಾಹಿತಿಯನ್ನು ಕೊಡುತ್ತೇವೆ ಎಂದು ಹೇಳಿದರು. ಸಂಸ್ಥೆಯ ವಿದ್ಯಾರ್ಥಿನಿಯರು ನಿರೂಪಣೆ ಚಂದನ ಮತ್ತು ಸ್ವಾಗತ ದೀಕ್ಷಾ ಇವರು ಮಾಡಿದರು. ಸಂಸ್ಥೆಯ ಶಿಕ್ಷಕರು ಸಹನಾ ಶ್ರೀಶ ಹಾಗೂ ಪುಷ್ಪ ಆಚಾರ್ಯ ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: