April 19, 2024

Bhavana Tv

Its Your Channel

ಸುಮೇಧ ಫ್ಯಾಷನ್ ಇನ್ಸ್ಟಿಟ್ಯೂಟ್ ಸಂಸ್ಥಾಪಕಿ ಸಾಧನಾ ಜಿ.ಆಶ್ರಿತ್‌ರವರಿಗೆ ಗೋಲ್ಡನ್ ವುಮೆನ್ಸ್ ಅಚೀವರ್ಸ್ ಅವಾರ್ಡ್

ಕಾರ್ಕಳ: ಸುಮೇಧ ಫ್ಯಾಷನ್ ಇನ್ಸ್ಟಿಟ್ಯೂಟ್ ಹಾಗೂ ಸುಮೇಧ ಡಿಸೈನರ್ ಬ್ಯೂಟಿನ ಸಂಸ್ಥಾಪಕಿ ಸಾಧನಾ ಜಿ.ಆಶ್ರಿತ್ ಫ್ಯಾಷನ್ ಡಿಸೈನಿಂಗ್ ಕಾಲೇಜ್ ಗಳಲ್ಲಿ ೧೨ವರ್ಷಗಳು ಅನುಭವಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ್ದು ಧಾರಾವಾಹಿಗಳಿಗೆ ಫ್ಯಾಷನ್ ಇವೆಂಟ್‌ಗಳಿಗೆ ಕಾಸ್ಟ್ಯೂಮ್ ಡಿಸೈನರ್ ಮತ್ತು ಅನೇಕ ಹೆಣ್ಣು ಮಕ್ಕಳಿಗೆ ಉಚಿತ ತರಬೇತಿ ನೀಡಿ ಅವರಲ್ಲಿ ಆತ್ಮಸ್ಥೈರ್ಯ ಕೊಟ್ಟು ಸ್ವಂತ ಉದ್ಯೋಗ ಮಾಡಲು ಅವಕಾಶ ಮಾಡಿಕೊಳ್ಳುತ್ತಿದ್ದಾರೆ.


ತಮ್ಮಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳಿಗೆ ಹಾಗೂ ಫ್ಯಾಷನ್ ಡಿಸೈನಿಂಗ್ ಆಗಿರುವಂತಹ ಬೇರೆ ಕಾಲೇಜು ವಿದ್ಯಾರ್ಥಿಗಳಿಗೆ ಉದ್ಯೋಗ ತೆಗೆಸಿ ಕೊಟ್ಟವರು ಹಾಗೂ ಅನೇಕ ಮಹಿಳೆಯರಿಗೆ ತಮ್ಮಲ್ಲಿ ಉದ್ಯೋಗವನ್ನು ದೊರಕಿಸಿ ಕೊಟ್ಟಿದ್ದಾರೆ ಇವರ ಈ ಸಾಧನೆಗೆ ಮೆಚ್ಚಿ ನಮ್ಮ ಕಾರ್ಕಳ ದ ಸಾಧನಾ ಆಶ್ರಿತ ಇವರಿಗೆ ಬೆಂಗಳೂರಿನಲ್ಲಿ ನಡೆದ ಗೋಲ್ಡನ್ ವುಮೆನ್ಸ್ ಅಚೀವರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಅಚಿವೆರ್ಸ್ ಅವಾರ್ಡ್ ಪ್ರಶಸ್ತಿ ದೊರಕಿದೆ ಇವರು ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ.

ವರದಿ; ಅರುಣ ಭಟ್ ಕಾರ್ಕಳ

error: