December 3, 2021

Bhavana Tv

Its Your Channel

ದಾನವು ಕೊಟ್ಟದ್ದು ನಮಗೆ ತಿಳಿದಿರಬೇಕೆ ಹೊರತು ಪರರ ಮೆಚ್ಚುಗೆಗಾಗಿ ಅಲ್ಲ : ರಾಜೇಶ್ ಶೆಣೈ

ಕಾರ್ಕಳ:ದಾನವು ಕೊಟ್ಟದ್ದು ನಮಗೆ ತಿಳಿದಿರಬೇಕೆ ಹೊರತು ಪರರ ಮೆಚ್ಚುಗೆಗಾಗಿ ಅಲ್ಲ .ಒಂದು ಕೈಯಿಂದ ಕೊಟ್ಟದ್ದು ಇನ್ನೊಂದು ಕೈಗೆ ತಿಳಿಯಬಾರದು. ನಮ್ಮ ದಾನದಿಂದ ದೈವ ಸಂಪ್ರೀತನಾಗಬೇಕೇ ಹೊರತು ಬೇರೆಯವರ ಹೊಗಳಿಕೆಗೆ ಸೀಮಿತ ವಾಗಬಾರದು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಶೆಣೈ ನುಡಿದರು
ಅವರು ಲಯನ್ಸ್ ಕ್ಲಬ್ ಕಾರ್ಕಳ ಆಶ್ರಯದಲ್ಲಿ ಪ್ರಾಂತ್ಯ ಅಧ್ಯಕ್ಷರ ಭೇಟಿ ಮತ್ತು ದೀಪಾವಳಿ ಹಬ್ಬದ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು
ನಮ್ಮ ಬದುಕನ್ನು ಬೇರೆಯವರಿಗಾಗಿ ವ್ಯಯಿಸುವವರು ಜೀವನದಲ್ಲಿ ಯಶಸ್ವಿಯಾಗುತ್ತಾನೆ.ಹೆಸರು ,ಯಶಸ್ಸು, ಗೌರವವನ್ನು ನಾವು ಹಿಂಬಾಲಿಸದೆ ಯಶಸ್ಸು, ಗೌರವ ನಮ್ಮನ್ನು ಹಿಂಬಾಲಿಸುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಪ್ರಾಂತ್ಯ ಅಧ್ಯಕ್ಷರಾದ ಲಯನ್ ಮಿಥುನ್ ಆರ್ ಹೆಗ್ಡೆರವರು ಮಾತನಾಡಿ ಕಾರ್ಕಳ ಲಯನ್ಸ್ ಸಂಸ್ಧೆ ಮಾಡುವ ಸಮಾಜಮುಖಿ ಕೆಲಸಗಳನ್ನು ಶ್ಲಾಘಿಸಿದರು, ಮುಂದಿನ ದಿನಗಳಲ್ಲಿ ಕಾರ್ಕಳ ಲಯನ್ಸ್ ಕ್ಲಬ್ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆಯಲಿ ಎಂದು ಹಾರೈಸಿದರು,
ಈ ಸಮದರ್ಭದಲ್ಲಿ ಪ್ರಾಂತ್ಯದ ಪ್ರಥಮ ಮಹಿಳೆ ಸ್ವಾತಿ ಎಂ ಹೆಗ್ಡೆ , ಮಾಜಿ ಗವರ್ನರ ಸುರೇಶ ಪ್ರಭು, ಜಿಲ್ಲಾ ಕಾರ್ಯದರ್ಶಿ ಸಪ್ನಾ ಸುರೇಶ್, ಜಿಲ್ಲಾ ಕೋಶಾಧಿಕಾರಿ ಜಯಪ್ರಕಾಶ್ ಭಂಡಾರಿ, ಪ್ರಾಂತ್ಯ ಸಲಹೆಗಾರ ಸತ್ಯಶಂಕರ್ ಶೆಟ್ಟಿ, ವಲಯ ಅಧ್ಯಕ್ಷ ಸುಭಾಷ್ ಸುವರ್ಣ, ಉಪಸ್ಥಿತರಿದ್ದರು, ಪ್ರಾಂತ್ಯ ಮತ್ತು ಜಿಲ್ಲೆಯಿಂದ ಸುಮಾರು ೨೦೦ ಕ್ಕು ಅಧಿಕ ಜನ ಭಾಗವಹಿಸಿದರು ಕಾರ್ಯದರ್ಶಿ ನಿತ್ಯಾನಂದ ಭಂಡಾರಿ ಧನ್ಯವಾದ ಅರ್ಪಿಸಿದರು

ವರದಿ: ಅರುಣ ಭಟ್ ಕಾರ್ಕಳ

error: