April 25, 2024

Bhavana Tv

Its Your Channel

ಮೀನು ಕಾಮಿ೯ಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ

ಕಾರ್ಕಳ: ಅಖಿಲ ಭಾರತ ಮೀನುಗಾರರ ಮತ್ತು ಮೀನು ಕಾಮಿ೯ಕರ ಒಕ್ಕೂಟಕ್ಕೆ ಸಂಯೋಜಿಸಲ್ಪಟ್ಟ ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾಮಿ೯ಕರ ಸಂಘ(ರಿ) ಇದರ ನೇತೃತ್ವದಲ್ಲಿ ಮೀನು ಕಾಮಿ೯ಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಮೀನುಗಾರರು ಮತ್ತು ದ್ವಿಚಕ್ರ ವಾಹನದಲ್ಲಿ ಮೀನು ಮಾರಾಟಗಾರರು ಬೃಹತ್ ಪ್ರದಶ೯ನ ಹಾಗೂ ಪ್ರತಿಭಟನೆಯ ಹೋರಾಟ ಯಶಸ್ವಿಯಾಗಿ ನಡೆಸಿದರು.
ಉಡುಪಿ ಬನ್ನಂಜೆ ನಾರಾಯಣ ಗುರು ಸಭಾಂಗಣದಲ್ಲಿ ಜರುಗಿದ ಮೀನುಗಾರರ ಸಮಾವೇಶ ಉದ್ಘಾಟಿಸಿ , ಸಂಘದ ಜಿಲ್ಲಾಧ್ಯಕ್ಷ ಕೆ.ಶಂಕರ್ ಮಾತನಾಡುತ್ತಾ, ಕರಾವಳಿಯ ಮೂರು ಜಿಲ್ಲೆಯದ್ಯಂತ ಕೋವಿಡ್-೧೯ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಸಹಸ್ರಾರು ಸಂಖ್ಯೆಯಲ್ಲಿ ಬಡ ಮೀನುಗಾರರು ನಿರುದ್ಯೋಗ ದಿಂದಾಗಿ ಜೀವನ ನಡೆಸಲಾಗದೆ ಅನಿವಾಯ೯ವಾಗಿ ಬದಲಿ ಉದ್ಯೋಗಕ್ಕಾಗಿ ದ್ವಿಚಕ್ರ ಮೋಟಾರ್ ಸೈಕಲ್ ನಲ್ಲಿ ಮನೆ ಮನೆಗೆ ತೆರಳಿ ಮೀನು ವ್ಯಾಪಾರ ಮಾಡುತ್ತಿದ್ದಾರೆ.

ಆಥಿ೯ಕವಾಗಿ ಬಡತನದಲ್ಲಿರುವ ಇವರಿಗೆ ಸರಕಾರ ಸಾಮಾಜಿಕ ಭದ್ರತೆಗಾಗಿ ಕಲ್ಯಾಣ ಮಂಡಳಿ ಸ್ಥಾಪಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಜರುಗಿದ ಮೀನುಗಾರರ ಬೃಹತ್ ಪ್ರತಿಭಟನೆಯ ನಂತರ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಯವರಿಗೆ ಹಸ್ತಾಂತರಿಸಿ,ಪಿAಚಣಿ ಸೌಲಭ್ಯ,ಕಲ್ಯಾಣ ಮಂಡಳಿ ರಚನೆ ಅಪಘಾತ ಪರಿಹಾರ ಇತ್ಯಾದಿ ಬೇಡಿಕೆ ಈಡೇರಿಸುವುದಕ್ಕಾಗಿ ಈ ಕೂಡಲೇ ಮೀನುಗಾರರ ಸಂಘದ ಮುಖಂಡರೊಡನೆ ಮೀನುಗಾರಿಕಾ ಇಲಾಖಾಧಿಕಾರಿ ಜತೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಜಂಟೀ ಸಭೆ ಏಪ೯ಡಿಸಬೇಕು ಎಂದು ಒತ್ತಾಯಿಸಲಾಯಿತು.
ಪ್ರತಿಭಟನೆ ನೇತೃತ್ವವನ್ನು ಮೀನುಗಾರರ ಸಂಘದ ಮುಖಂಡರಾದ ಕವಿರಾಜ್.ಎಸ್,ಕೋಣಿ ವೆಂಕಟೇಶ್ ನಾಯಕ್, ನಳಿನಿ.ಎಸ್, ಉಮೇಶ್ ಕುಂದರ್ ಮಹೇಶ್ ಪೂಜಾರಿ ಅನ್ವರ್,ಸಂಗಮೇಶ್, ವಸಂತ,ಅನ್ವರ್ ಕಟಪಾಡಿ ಮೊದಲಾದವರು ವಹಿಸಿದ್ದರು..
ವರದಿ:ಅರುಣ ಭಟ್ ಕಾರ್ಕಳ

error: