April 20, 2024

Bhavana Tv

Its Your Channel

ಗತವೈಭವದೊಂದಿಗೆ ನವೀಕರಣಗೊಳ್ಳಲಿರುವ ಕೋಟೆ ಮಾರಿಯಮ್ಮ ಶ್ರೀ ಕ್ಷೇತ್ರ

ಕಾರ್ಕಳ: ಗತವೈಭವದೊಂದಿಗೆ ಕೋಟೆ ಮಾರಿಯಮ್ಮ ಶ್ರೀ ಕ್ಷೇತ್ರವು ಜೀಣೋದ್ಧಾರದೊಂದಿಗೆ ನವೀಕರಣಗೊಳ್ಳುವ ಮೂಲಕ ಅಷ್ಟಬಂಧ ಬ್ರಹ್ಮಕಲೋತ್ಸವವು ಸಾಂಗವಾಗಿ ನೆರವೇರಲಿದೆ ಎಂದು ಕೇರಳದ ಪಯ್ಯನ್ನೂರಿನ ನಾರಾಯಣ ಪೊದುವಾಳ್ ನುಡಿದರು.

ಕಾರ್ಕಳದ ಕೋಟೆ ಶ್ರೀ ಮಾರಿಯಮ್ಮ ಶ್ರೀ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಮೇಲಿನ ವಿಚಾರವನ್ನು ಮುಂದಿಟ್ಟರು. ಇಕ್ಕೇರಿ ನಾಯಕನ ಕಾಲಘಟ್ಟದಲ್ಲಿ ರಾಮಕ್ಷತ್ರೀಯ ಜನಾಂಗದವರು ಆರಾಧಿಸಿಕೊಂಡು ಬಂದಿದ್ದ ಶ್ರೀ ಮಾರಿಯಮ್ಮ ಹಾಗೂ ಕೋಟೆ ಆಂಜನೇಯ ಶ್ರೀ ಕ್ಷೇತ್ರಗಳೆರಡು ಸಮಕಾಲದಲ್ಲಿ ನವೀಕರಣಗೊಳ್ಳಲಿದೆ. ಅನುವಂಶಿಕ ಆಡಳಿತ ಮೊಕ್ತೇಸರರು, ಜೀರ್ಣೋದ್ಧಾರ ಸಮಿತಿಯವರು, ಅರ್ಚಕ ವೃಂದದವರು, ಭಕ್ತಾದಿಗಳು ಭಕ್ತಿ, ಭಾವನೆ, ಏಕತೆಯಿಂದ ಸತ್ಕಾರ್ಯ ನಡೆಸಿದಾಗ, ಶ್ರೀಕ್ಷೇತ್ರವು ಮತ್ತೇ ಕಾರಣೀಕ ಕ್ಷೇತ್ರವಾಗಿ ಮೆರೆಯಲಿದೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕಲೆ, ಸಾಹಿತ್ಯಕ್ಕೆ ಇಲ್ಲಿ ಪ್ರಾಶಸ್ತö ದೊರಕಲಿದೆ ಆ ಮೂಲಕ ಕಾರ್ಕಳ ಬೆಳಗಲಿದೆ ಎಂದು ಜ್ಯೋತಿಶಾಸ್ತ್ರ ಮೂಲಕ ತಿಳಿಸಿದ್ದಾರೆ.
ಅಷ್ಟಮಂಗಲ ಪ್ರಶ್ನೆಯ ವಿಮರ್ಶಕ ಶಶಿಪಂಡಿತ್, ಲಕ್ಷ್ಮೀಶ ಪಂಡಿತ್, ಸಜೀತ್ ಪೊದುವಾಳ್, ಶ್ರೀ ಕ್ಷೇತ್ರದ ಅರ್ಚಕ ರಘುರಾಮ್ ಆಚಾರ್ಯ, ಲಕ್ಷ್ಮೀಶ ಭಾರಧ್ವಜ್ ಅಷ್ಟಮಂಗಲ ಪ್ರಶ್ನೆ ಚಿಂತನದಲ್ಲಿ ಪಾಲ್ಗೊಂಡರು.
ಜೀಣೋದ್ಧಾರ ಸಮಿತಿಯ ಅಧ್ಯಕ್ಷರಾಗಿರುವ ಶಾಸಕ ಹಾಗೂ ಸಚಿವ ವಿ.ಸುನೀಲ್‌ಕುಮಾರ್, ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕೆ.ಬಿ.ಗೋಪಾಲಕೃಷ್ಣ ರಾವ್, ಕೆ.ಜೆ.ರಾಘವೇಂದ್ರ ರಾವ್, ಸುರೇಶ್ ಹವಾಲ್ದಾರ್, ಕೆ.ಬಿ.ಗುರುಪ್ರಸಾದ್, ಸಮಿತಿಯ ಪ್ರಮುಖರಾದ ವಿಜಯಶೆಟ್ಟಿ, ಸುಜಯ್ ಕುಮಾರ್ ಶೆಟ್ಟಿ, ಗಣೇಶ್ ಕಾಮತ್, ಜಗದೀಶ್ ಮಲ್ಯ, ಪಾಲಡ್ಕ ನರಸಿಂಹ ಪೈ, ನವೀನ್ ನಾಯಕ್, ನವೀನ್ ದೇವಾಡಿಗ, ಭಾಸ್ಕರ್ ಕುಲಾಲ್, ಹರೀಶ್ ಅಮೀನ್, ಪ್ರಶಾಂತ್ ರಾವ್ ಹಾಗೂ ಭಕ್ತರು ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: