May 23, 2022

Bhavana Tv

Its Your Channel

ಅಷ್ಟಬಂದ ಬ್ರಹ್ಮಕಲಶೋತ್ಸವ ಅಂಗವಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆ

????????????????????????????????????

ಕಾರ್ಕಳ: ಐತಿಹಾಸಿಕ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ಕ್ಷೇತ್ರದಲ್ಲಿ ಜನವರಿ 20ರಿಂದ 25ರ ವರೆಗೆ ನಡೆಯಲಿರುವ ಅಷ್ಟಬಂದ ಬ್ರಹ್ಮಕಲಶೋತ್ಸವ ಅಂಗವಾಗಿ ಕಾರ್ಕಳದ ಅನಂತ ಪದ್ಮನಾಭ ಶ್ರೀ ಕ್ಷೇತ್ರದ ಮುಂಭಾಗದಿoದ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಶ್ರೀ ಕ್ಷೇತ್ರ ಗರ್ಭಗುಡಿಯ ಮೇಲ್ಚಾವಣೆಗೆ ಪ್ರತಿಷ್ಠೆ ಮಾಡಲಾಗುವ ಶಿಖರಕಲಶ(ಮುಗುಳಿ)ವನ್ನು ಮಂಗಳವಾದ್ಯದೊAದಿಗೆ ಮೆರವಣಿಗೆಯಲ್ಲಿ ಕೊಂಡುಹೊಯ್ಯಲಾಯಿತು.
ಕೇರಳ ವಾದ್ಯ, ಛತ್ರ, ಪೂರ್ಣಕುಂಭ ಕಲಶ, ಛತ್ರಪತಿ ಶಿವಾಜಿ ಮಹಾರಾಜರ ಸ್ತಬ್ದಚಿತ್ರದೊಂದಿಗೆ ಸಂಪ್ರದಾಯಕ ಉಡುಗೆ ತೊಡುಗೆಯೊಂದಿಗೆ ಮೆರವಣಿ ಅನಂತಪದ್ಮನಾಭ ಶ್ರೀ ಕ್ಷೇತ್ರದ ಮುಂಭಾಗದಿAದ ಹೊರಟು ಬಸ್‌ನಿಲ್ದಾಣ, ಮೂರುಮಾರ್ಗ,ಆನೆಕೆರಯಾಗಿ ಹಿರಿಯಂಗಡಿ ಮೂಲಕ ಶ್ರೀಕ್ಷೇತ್ರಕ್ಕೆ ತಲುಪಿತು.

ವರದಿ:ಅರುಣ ಭಟ್ ಕಾರ್ಕಳ

error: