April 24, 2024

Bhavana Tv

Its Your Channel

ಕಾರ್ಕಳ ಪುರಸಭೆ ಸಾಮಾನ್ಯ ಸಭೆ

ಕಾರ್ಕಳ: ನಿರ್ಮಲ ಯೋಜನೆಯಡಿಯಲ್ಲಿ ಕಾರ್ಕಳ ಪುರಸಭಾ ತ್ಯಾಜ್ಯ ನಿರ್ವಹಣಾ ಘಟಕದ ಅಭಿವೃದ್ಧಿಗಾಗಿ ರೂ.1 ಕೋಟಿ ಅನುದಾನವನ್ನು ಪುರಸಭಾ ಅಧ್ಯಕ್ಷರ ಅನುಮತಿಯ ಮೇರೆಗೆ ಕಾದಿರಿಸಿರುವ ವಿಚಾರಕ್ಕೆ ಸಂಬAಧಿಸಿದAತೆ ಪುರಸಭಾ ಸಾಮಾನ್ಯ ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.
ಸದಸ್ಯ ಸೋಮನಾಥ ನಾಯ್ಕ ವಿಚಾರವನ್ನು ಮುಂದಿಟ್ಟು ಸದಸ್ಯರ ಗಮನಕ್ಕೆ ಬಾರದೇ ಇಷ್ಟೊಂದು ಮೊತ್ತ ಅನುದಾನಕ್ಕೆ ಸಮ್ಮತಿ ಸೂಚಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು. ಅದಕ್ಕೆ ಅಧ್ಯಕ್ಷರು ಉತ್ತರಿಸುತ್ತಾ ಜಿಲ್ಲಾಡಳಿತದಿಂದ ತುರ್ತಾಗಿ ಸಂದೇಶ ಬಂದಿದ್ದು, ಅಧ್ಯಕ್ಷತೆಯ ನೆಲೆಯಲ್ಲಿ ಸಮ್ಮತಿಪತ್ರವನ್ನು ಜಿಲ್ಲಾಡಳಿತಕ್ಕೆ ಕೂಡಲೇ ಕಳುಹಿಸಲೇ ಬೇಕಾಯಿತು. ಇಲ್ಲದೇ ಹೋಗಿದ್ದರೆ, ಅನುದಾನ ಮಂಜೂರಾತಿಗೆ ತೊಡಕಾಗಲಿದೆ ಎಂದರು.
ಪ್ರತಿಪಕ್ಷ ನಾಯಕ ಅಶ್ಪಕ್ ಅಹಮ್ಮದ್ ಮಾತನಾಡಿ, ಜಿಲ್ಲಾಡಳಿತದ ಅವಸರ ಕ್ರಮದಿಂದ ಅಧ್ಯಕ್ಷರನ್ನು ಸಂಕಷ್ಟಕ್ಕೆ ಸಿಲುಕಿಸುವುದು ತರವಲ್ಲ. ಪುರಸಭಾ ಸಾಮಾನ್ಯ ಸಭೆಯಲ್ಲಿ ಹಲವು ಮಹತ್ವದ ವಿಚಾರದ ಕುರಿತು ನಿರ್ಣಯಗಳನ್ನು ಪ್ರಸ್ತಾಪಿಸಿದರೂ ಜಿಲ್ಲಾಡಳಿದಿಂದ ಸ್ಪಂದನೆ ಸಿಕ್ಕಿಲ್ಲ. ಸಿಬ್ಬಂದಿಗಳ ಕೊರತೆಯಿಂದಾಗಿ ಪುರಸಭೆಯ ಅಭಿವೃದ್ಧಿ ಕಾರ್ಯಗಳು ನೆನೆಗುದ್ದಿಗೆ ಬಿದ್ದಿದೆ. ತೆರವುಗೊಂಡಿರುವ ಹುದ್ದೆಗೆ ಕೂಡಲೇ ನೇಮಕಾತಿ ನಡೆಸದೇ ಕೋಟಿ,ಕೋಟಿ ಅನುದಾನಗಳು ವಿನಿಯೋಗಿಸುವ ರೀತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಎಲ್ಲ ಮಾಯಾ ಪುರಸಭೆಯಲ್ಲಿ ಎಲ್ಲಾ ಮಾಯಾ
ಕಾರ್ಕಳ ಪುರಸಭೆಯ ಅಧೀನದಲ್ಲಿ ಇರುವ ಮುಂಡ್ಲಿ ಡ್ಯಾಮ್‌ಗೆ ಬಳಸಲಾಗುತ್ತಿದ್ದ 125 ಕೆ.ಜಿ ಭಾರದ 220 ಕಬ್ಬಣದ ಗೇಟ್ ಕಳವು ಪ್ರಕರಣದ ಕುರಿತು ಪೊಲೀಸ್ ಇಲಾಖೆಯಿಂದ ನಡೆದಿರುವ ತನಿಖೆಯು ಯಾವ ಹಂತದಲ್ಲಿ ತಲುಪಿದೆ. ಕರ್ನಾಟಕ ಪೊಲೀಸ್ ಇಲಾಖೆಯು ಅದೆಷ್ಟೋ ನಿಗೂಢ ರಹಸ್ಯಗಳನ್ನು ಬಯಲಿಗೆಳೆದಿದೆ. ಅದಕ್ಕಿಂತ ಈ ಪ್ರಕರಣವು ಇನ್ನಷ್ಟು ರಹಸ್ಯ ವಾಗಿದೆಯೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷ ಸದಸ್ಯ ವಿನ್ನಿಬೋಲ್ಡ್ ಮೆಂಡೋನ್ಸಾ ಮಾತನಾಡಿ, ಇಂತಹದೇ ಪ್ರಕರಣವು ಇನ್ನು ಮುಂದೆ ಸಣ್ಣಕೈಗಾರಿಕಾ ವಲಯದಲ್ಲಿ ನಡೆದರೂ ಅಶ್ಚರ್ಯವಿಲ್ಲ. ಅಲ್ಲಿ ಅಳವಡಿಸಿದ ಕಬ್ಬಿಣದ ವಿದ್ಯುತ್ ಕಂಬಗಳಿಗೆ ತಲಾ ಒಂದು ಲಕ್ಷ ವೆಚ್ಚ ತಗುಲಿದ್ದು, ಅವುಗಳ ಬದಲಾವಣೆ ಮಾಡುತ್ತಿದೆ. ಈಗಾಗಲೇ ಅಲ್ಲಿ 23 ಕಬ್ಬಣದ ವಿದ್ಯುತ್ ಕಂಬಗಳಿದ್ದರೂ 7ನ್ನು ಮಾತ್ರ ಬದಲಾಯಿಸಲಾಗಿದೆ. ಉಳಿದವುಗಳ ಕತೆ-ವ್ಯಥೆ ಏನೆಂಬುವುದರ ಬಗ್ಗೆ ವಿವರ ನೀಡುವಂತೆ ಕೋರಿದರು.
12 ವರ್ಷಗಳಿಂದ ಪುರಸಭಾ ವಿದ್ಯುತ್ ಹಾಗೂ ನೀರಿನ ಸರಬರಾಜು ವಿಭಾಗಗಳಲ್ಲಿ ನಿರುಪಯುಕ್ತವಾದ ಬೆಲೆಬಾಳುವ ವಸ್ತುಗಳ ಕುರಿತು ವಿವರಗಳನ್ನು ಸಾಮಾನ್ಯ ಸಭೆಯಲ್ಲಿ ನೀಡಲು ಪುರಸಭಾ ಆಡಳಿತ ವಿಫಲಗೊಂಡಿದೆ. ಸುಮಾರು ರೂ.50 ಲಕ್ಷ ಮೊತ್ತಗಳ ವಿವರ ನೀಡಿ ಎಂದು ಅಶ್ಪಕ್ ಅಹಮ್ಮದ್ ಒತ್ತಾಯಿಸಿದರು.

ಬೇಸಿಗೆ ಆರಂಭವಾದರೂ ಪ್ಯಾಚ್ ವರ್ಕ್ಸ್ ಏನಾಯಿತು?
ಮಳೆಗಾಲದ ಸಂದರ್ಭದಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಬಹುತೇಕ ರಸ್ತೆಗಳು ಹಾನಿಗೊಂಡಿದೆ. ಪ್ರಾಕೃತಿಕ ವಿಕೋಪದಡಿಯಲ್ಲಿ ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡಿಲ್ಲವೇ ಬೇಸಿಗೆ ಆರಂಭವಾದರೂ, ರಸ್ತೆ ದುರಸ್ಥಿ ಕಾಮಗಾರಿ ಯಾಕೆ ಆರಂಭಿಸಿಲ್ಲ ಎಂದು ಪ್ರತಿಪಕ್ಷ ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಖಾರಿ ರೂಪಾ ಶೆಟ್ಟಿ ಮಾತನಾಡಿ, ರಸ್ತೆ ದುರಸ್ಥಿ ಕಾಮಗಾರಿಗೆ ಅನುದಾನ ಬಿಡುಗಡೆಗೊಂಡಿಲ್ಲ. ರೂ.2 ಲಕ್ಷವನ್ನು ಪ್ಯಾಚ್‌ವರ್ಕ್ಸ್ ಕಾಮಗಾರಿ ಕಾದಿರಿಸಿದೆ ಎಂಬ ಉತ್ತರ ನೀಡಿದರು. ಈ ಅನುದಾನದ ಮೊತ್ತ ಇಡೀ ಪುರಸಭಾ ರಸ್ತೆಯ ಪ್ಯಾಚ್‌ವರ್ಕ್ಸ್ ಕಾಮಗಾರಿಗೆ ಸಾಕಾದಿತ್ತೇ ಎಂದು ಮರು ಪ್ರಶ್ನಸಿದರು.

ಸಚಿವ ಸುನೀಲ್ ಬಗ್ಗೆ ಹಾಡಿಹೊಗಳಿದ ಕಾಂಗ್ರೆಸ್ಸಿಗರು
ಶಾಸಕ ವಿ.ಸುನೀಲ್‌ಕುಮಾರ್ ಇಂಧನ ಸಚಿವರಾದ ಬಳಿಕ ಬೆಳಕು ಯೋಜನೆ ಜಾರಿಗೆ ತಂದಿರುವ ಮೂಲಕ ಹಲವು ಬಡಕುಟುಂಬಗಳಿಗೆ ಬದುಕಿಗೆ ಬೆಳಕು ಚೆಲ್ಲಿದೆ ಎಂದು ಪುರಸಭಾ ಕಾಂಗ್ರೆಸ್ ಸದಸ್ಯರು ಪ್ರಶಂಸೆ ವ್ಯಕ್ತಪಡಿಸಿದರು. ಅಂತಹ ಕುಟುಂಬಗಳಿಗೆ ಕುಡಿಯುವ ನೀರಿನ ಭಾಗ್ಯವನ್ನು ಪುರಸಭಾ ವ್ಯಾಪ್ತಿಯಲ್ಲಿ ಕಲ್ಪಸಿಸುವಂತೆ ಅವರು ಮನವಿ ಮಾಡಿಕೊಂಡರು.
ಪುರಸಭಾ ಅಧ್ಯಕ್ಷೆ ಸುಮಕೇಶವ್, ಉಪಾಧ್ಯಕ್ಷೆ ಪಲ್ಲವಿ ರಾವ್, ಸ್ಥಾಯೀ ಸಮಿತಿ ಅಧ್ಯಕ್ಷ ಲಕ್ಷಿö್ಮÃ ನಾರಾಯಣ ಮಲ್ಯ, ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉಪಸ್ಥಿತರಿದ್ದರು.

ವರದಿ:ಅರುಣ ಭಟ್ ಕಾರ್ಕಳ

error: