April 25, 2024

Bhavana Tv

Its Your Channel

ಯಶಸ್ವಿಯಾಗಿ ನಡೆದ ಅಷ್ಟಬಂದ ಸಹಿತ ಪುನರ್ ಪ್ರತಿಷ್ಠೆ ಮತ್ತು ತ್ರೀಶತ ಕಲಶ ಸಹಿತ ಬ್ರಹ್ಮ ಕುಂಬಾಭಿಷೇಕ ಅಷ್ಟಬಂಧ ಬ್ರಹ್ಮಕಲಶೋತ್ಸವ

ಕಾರ್ಕಳ:- ಸುಮಾರು 300 ವರ್ಷ ಇತಿಹಾಸಪ್ರಸಿದ್ಧ ಪಡೆದಿರುವ ಪರ್ಪಲೆಯ
ತಪ್ಪಲಲ್ಲಿರುವ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ಹಾಗೂ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಅಷ್ಟಬಂದ ಸಹಿತ ಪುನರ್ ಪ್ರತಿಷ್ಠೆ ಮತ್ತು ತ್ರೀಶತ ಕಲಶ ಸಹಿತ ಬ್ರಹ್ಮ ಕುಂಬಾಭಿಷೇಕ ಅಷ್ಟಬಂಧ ಬ್ರಹ್ಮಕಲಶೋತ್ಸವ 32 ವರ್ಷಗಳ ನಂತರ ಇಂದು ಎಡಪದವು ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಶುಭೋದ ರಾವ್ ಮೂರು ದಿನಗಳ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ಇಂದು ಬ್ರಹ್ಮಕಲಶೋತ್ಸವ ನಡೆಯುತ್ತಿದೆ.3 ದಿನಗಳಿಂದ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಇಂದು ಸುಮಾರು 5000 ಭಕ್ತಾದಿಗಳು ಶ್ರೀ ಶ್ರೀ ಕ್ಷೇತ್ರಕ್ಕೆ ಬಂದು ಈ ಕಾರ್ಯಕ್ರಮ ಭಾಗವಹಿಸಲಿದ್ದಾರೆ. ಇಲ್ಲಿಯ ವ್ಯವಸ್ಥೆ ಅಚ್ಚುಕಟ್ಟಾಗಿ ನೆರವೇರಿದೆ. ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಸ್ವಯಂಸೇವಕರಿಗೆ ನನ್ನ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಧ್ಯಮದ ಮೂಲಕ ಹೇಳಿದರು.

ವರದಿ: ಅರುಣ ಭಟ್ ಕಾರ್ಕಳ

error: