
ಕಾರ್ಕಳ:- ಕಾರ್ಕಳ ಇಲ್ಲಿನ ಸರ್ಕಾರಿ ಆಸ್ಪತ್ರೆ ಕೇವಲ ಸೌಲಭ್ಯ ಗಳಿಗಷ್ಟೇ ಹೆಸರುವಾಸಿ ಆಗಿರಬಾರದು. ವೈದ್ಯರ ಸೇವೆ ಯ ದೃಷ್ಟಿಯಿಂದಲೂ ಜನಹಿತವಾಗಬೇಕು. ಐಸಿ ಬಿಲ್ಡಿಂಗ್ ಆಸ್ಪತ್ರೆ ಜನಪ್ರಿಯವಾಗಲು ಸಾಧ್ಯವಿಲ್ಲ ವೈದ್ಯರು ದಾದಿಯರು ಒಳ್ಳೆಯ ಸೇವೆ ನೀಡಿದರೆ ಮಾತ್ರ ಆಸ್ಪತ್ರೆ ತಾಲೂಕಿನ ಜನಹಿತ ಕಾಪಾಡಲು ಸಾಧ್ಯ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ 10 ಬೆಡ್ ಗಳ ತುರ್ತು ಘಟಕ 12 ಬೆಡ್ ಜನರಲ್ ಹಾಸಿಗೆಯ ತುರ್ತು ಘಟಕ ಸಾರ್ವಜನಿಕ ಬಳಕೆಗೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಕಾರ್ಕಳದಲ್ಲಿ ಸೌಲಭ್ಯವಿಲ್ಲ ಎಂದು ಬೇರೆ ಕಡೆ ಹೋಗುವಂತಾಗಬಾರದು ಇಲ್ಲಿ ಎಲ್ಲಾ ಸೌಲಭ್ಯಗಳು ಎಲ್ಲರಿಗೂ ಸಿಗಬೇಕು ಇದೆ ಸ್ವರ್ಣ ಕಾರ್ಕಳದ ಕಲ್ಪನೆ ಎಂದು ಹೇಳಿದರು. ತಾಲೂಕು ಆಸ್ಪತ್ರೆಯಲ್ಲಿ ಸೌಲಭ್ಯ ಮಟ್ಟದಲ್ಲಿ ಆಸ್ಪತ್ರೆ ಆಕ್ಸಿಜನ್ ಸೆಂಟರ್ ಡಯಾಲಿಸಿಸ್ ಕೇಂದ್ರ ಮಕ್ಕಳ ಐಸಿಯು ಕೇಂದ್ರ ಹೀಗೆ ಎಲ್ಲವನ್ನು ಹೊಂದಿದೆ ಸರಕಾರ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ತಾಲೂಕಾಸ್ಪತೆ ಗೆ ಖಾಸಗಿ ಆಸ್ಪತ್ರೆಗೆ ಸೌಲಭ್ಯಗಳನ್ನು ಒದಗಿಸಲಾಗಿದೆ ಆರಂಭದಲ್ಲಿ 13 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿ ಸೌಲಭ್ಯ ಒದಗಿಸಲಾಗಿತ್ತು ಆನಂತರ ಕೋವಿಡ್ ಸಂದರ್ಭದಲ್ಲಿ ಕಾಲಕ್ಕೆ ತಕ್ಕಂತೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು . ಗೇರುಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿ ರಾಜ ಶೆಟ್ಟಿ ಮಾತನಾಡಿ ಆರೋಗ್ಯ ಕ್ಷೇತ್ರದಲ್ಲಿ ಸ್ವಾವಲಂಬನೆ ಅಗತ್ಯ ಅದನ್ನು ಮನಗಂಡು ಸಚಿವರು ಉತ್ತಮ ಆರೋಗ್ಯ ಸೇವೆಯನ್ನು ತಾಲೂಕಿನ ಜನತೆಗೆ ನೀಡಿದ್ದಾರೆಂದು ಹೇಳಿದರು .ಆಸ್ಪತ್ರೆಗೆ 78.18 ಲಕ್ಷ ರೂ ಮೊತ್ತದ ಮಕ್ಕಳ ಐಸಿಯು ಘಟಕದ ನಿರ್ಮಾಣದ ದಾನಿ ಅದಾನಿ ಸಂಸ್ಥೆಯ ಕಿಶೋರ ಆಳ್ವ ಮಾತನಾಡಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ವಿದ್ಯುತ್ ಸ್ಥಾವರ ಗ್ಯಾಸ್ ಪೈಪ್ಲೈನ್ ಯೋಜನೆ ವಿಮಾನ ನಿಲ್ದಾಣ ಇವುಗಳನ್ನು ನಿರ್ವಹಿಸುತ್ತಿದ್ದು ತನ್ನ ಸಿಎಸ್ ಆರ್ ಯೋಜನೆಯಲ್ಲಿ ಹತ್ತು ಹಲವಾರು ಅಭಿವೃದ್ಧಿ ಕೆಲಸಗಳನ್ನು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದು ಅಭಿವೃದ್ಧಿಗೆ ಕೈಜೋಡಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಾನಿಗಳಾದ ಅದಾನಿ ಗ್ರೂಪ್ ನ ಕಿಶೋರ್ ಅಲ್ವಾ , ಬೋಳ ಕ್ಯಾಶ್ಲೆಸ್ ರಾಹುಲ್ ಕಾಮತ್ ನಿರ್ಮಿತಿ ಕೇಂದ್ರದ ಇಂಜಿನಿಯರ್ ಪವನ್ ಅವರನ್ನು ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷ ಸುಮಾ ಕೇಶವ ಉಡುಪಿ ಡಿಎಚ್‌ಒ ನಾಗಭೂಷಣ್ ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ರಾಜ್ಯ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ಕುಡ್ವ ಉಪಸ್ಥಿತರಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ ಕೃಷ್ಣಾನಂದ ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿದರು . ಕೆ ಎಸ್ ರಾವ್ ವಂದಿಸಿದರು ಪ್ರಭಾಕರ್ ಶೆಟ್ಟಿ ಕುಂಡಲಿ ಕಾರ್ಯಕ್ರಮ ನಿರೂಪಿಸಿದರು ನರ್ಸಿಂಗ್ ವಿದ್ಯಾರ್ಥಿಗಳು ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ: ಅರುಣ ಭಟ್ ಕಾರ್ಕಳ

More Stories
ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರವಿತರಣೆ
ಯುವಕರಲ್ಲಿ ರಕ್ತದಾನ ಮಾಡುವ ಮನೋಭಾವನೆ ಮೂಡಿರುವುದು ಅಭಿನಂದನೀಯ-ಡಾ.ಕೆ.ಆರ್.ಜೋಷಿ.
ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡ ಇದರ ವತಿಯಿಂದ ಶೌರ್ಯ ಸಂಚಲನ ಕಾರ್ಯಕ್ರಮ