April 24, 2024

Bhavana Tv

Its Your Channel

ಉಡುಪಿ ಜಿಲ್ಲಾ ವಿಶೇಷ ಮಕ್ಕಳ ಕ್ರೀಡೋತ್ಸವದಲ್ಲಿ ವಿಜೇತ ವಿಶೇಷ ಶಾಲಾ ಮಕ್ಕಳಿಗೆ ಸಮಗ್ರ ಪ್ರಶಸ್ತಿ

ಕಾರ್ಕಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ , ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದ ರಜತ ಮಹೋತ್ಸವ ಆಚರಣೆಯ ಪ್ರಯುಕ್ತ ಜಂಟಿಯಾಗಿ ಆಯೋಜಿಸಿದ ಉಡುಪಿ ಜಿಲ್ಲಾ ವಿಶೇಷ ಮಕ್ಕಳ ಕ್ರೀಡೋತ್ಸವದಲ್ಲಿ ಕಾರ್ಕಳ ಅಯ್ಯಪ್ಪನಗರ ವಿಜೇತ ವಿಶೇಷ ಶಾಲಾ ಮಕ್ಕಳು ಸಮಗ್ರ ಪ್ರಶಸ್ತಿ (ಚಾಂಪಿಯನ್ ) ಹಾಗೂ ಆಶಾ ನಿಲಯ ವಿಶೇಷ ಶಾಲೆ ಉಡುಪಿ ರನ್ನರ್ ಪ್ರಶಸ್ತಿಯನ್ನು ಗಳಿಸಿರುತ್ತಾರೆ .

ಪಥ ಸಂಚಲನದಲ್ಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮಾನಸ ವಿಶೇಷ ಶಾಲೆ ಪಾಂಬುರು , ದ್ವಿತೀಯ ಸ್ಥಾನ ವಿಜೇತ ವಿಶೇಷ ಶಾಲೆ ಕಾರ್ಕಳ, ತೃತೀಯ ಸ್ಥಾನ ಆಶಾ ನಿಲಯ ಉಡುಪಿ ವಿಶೇಷ ಶಾಲಾ ವಿದ್ಯಾರ್ಥಿಗಳು ಗಳಿಸಿದ್ದು ಜಿಲ್ಲಾಧಿಕಾರಿಗಳಾದ ಶ್ರೀ ಕೂರ್ಮ ರಾವ್ ಐಎಎಸ್‌ಇವರು ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ನೌಕಾಧಿಕಾರಿ ಕೊಮೊಡೋರ್ ಜೆರೂಮ್ ಕ್ಯಾಸ್ತಲಿನೊಸ್ವಿ ಎಸ್ ಎಮ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ವೀಣಾ ವಿವೇಕಾನಂದ್, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿಗಳಾದ ರತ್ನಾ, ಮಾನಸ ಸಂಸ್ಥೆಯ ಅಧ್ಯಕ್ಷರಾದ ಹೆನ್ರಿ ಡಿಸೋಜ, ಪ್ರಾಂಶುಪಾಲರಾದ ಸಿ.ಅನ್ಸಿಲ್ಲ, ವಿಶೇಷ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷೆ ಡಾ. ಕಾಂತಿ ಹರೀಶ್, ಗೌರವಾಧ್ಯಕ್ಷೆ ಆಗ್ನೇಸ್ ಕುಂದರ್, ಜಿಲ್ಲಾಧ್ಯಕ್ಷ ರವೀಂದ್ರ ಎಚ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ವಿಜೇತ ವಿಶೇಷ ಶಾಲೆಯಿಂದ ವಿವಿಧ ಸ್ಪರ್ಧೆಗಳಲ್ಲಿ ಒಟ್ಟು ೩೮ ವಿದ್ಯಾರ್ಥಿಗಳು ಭಾಗವಹಿಸಿದ್ದು, ಚಿನ್ನದ ಪದಕ -೨೫ ಬೆಳ್ಳಿ ಪದಕ -೧೨ ಕಂಚಿನ ಪದಕ – ೧೦ ಒಟ್ಟು ೪೭ ಪದಕಗಳನ್ನು ಗಳಿಸಿರುತ್ತಾರೆ.

ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿ ಶಾಲೆಗೆ ಕೀರ್ತಿ ತಂದ ವಿಜೇತ ಶಾಲೆಯ ಹೆಮ್ಮೆಯ ಮಕ್ಕಳಿಗೆ ಮತ್ತು ಸೂಕ್ತ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಉಮಾಶಂಕರ್ ಮತ್ತು ಸಹಕರಿಸಿದ ಎಲ್ಲ ಗೌರವಾನ್ವಿತ ಶಿಕ್ಷಕಿಯರಿಗೆ ತುಂಬು ಹೃದಯದ ಅಭಿನಂದನೆ ತಿಳಿಸಿದರು

ವರದಿ: ಅರುಣ ಭಟ್ ಕಾರ್ಕಳ

error: