March 28, 2024

Bhavana Tv

Its Your Channel

2.50 ಕೋಟಿ ರೂ.ವೆಚ್ಚದಲ್ಲಿ ಕಾರ್ಕಳ ತಾಲೂಕು ಪಂಚಾಯಿತಿಯ ನೂತನ ಕಛೇರಿ ಕಟ್ಟಡ ಉದ್ಘಾಟನೆ

ಕಾರ್ಕಳ : ವಿಧಾನ ಸಭಾ ಕ್ಷೇತ್ರ ವಿವಿಧ ಆಯಾಮಗಳಲ್ಲಿ ಅಭಿವೃದ್ದಿ ನಡೆಯುತ್ತಿದ್ದು, ಇದೀಗ 2.50 ಕೋಟಿ ರೂ.ವೆಚ್ಚದಲ್ಲಿ ಕಾರ್ಕಳ ತಾಲೂಕು ಪಂಚಾಯಿತಿಯ ನೂತನ ಕಛೇರಿ ಕಟ್ಟಡ ಉದ್ಘಾಟನೆಗೊಂಡಿದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ತಾಲೂಕು ಪಂಚಾಯಿತಿಯ ನೂತನ ಕಚೇರಿ ಕಟ್ಟಡ ಹಾಗೂ ವಿಶೇಷ ಚೇತನ ರ ನೂತನ ವಾಣಿಜ್ಯ ಸಂಕೀರ್ಣ ಕಟ್ಟಡದ ಉದ್ಘಾಟನೆಯನ್ನು ಶನಿವಾರ ನೆರವೇರಿಸಿ ಮಾತನಾಡಿದರು. ತಾ.ಪಂ.ನಲ್ಲಿ ಹತ್ತಾರು ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿದ್ದು, ಅದಕ್ಕೆ ಪೂರಕ ಎಂಬAತೆ ಈ ಕಟ್ಟಡದ ರಚನೆಯಾಗಿದೆ. ಹೆಬ್ರಿ ತಾ.ಪಂ.ಕಟ್ಟಡಕ್ಕೆ 1.50 ಕೋಟಿ ರೂ. ಮಂಜೂರಾಗಿದ್ದು, ಈ ತಿಂಗಳಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಜತೆಗೆ ಅಜೆಕಾರು ಗ್ರಾಮಕರಣಿಕರ ಕಛೇರಿ, ಶಿಕ್ಷಣ ಇಲಾಖೆ ಕಛೇರಿ, ವನ್ಯಜೀವಿ ವಿಭಾಗದ ಕಛೇರಿಗಳು ನಿರ್ಮಾಣಗೊಂಡಿದ್ದು, ಸರಕಾರಿ ಸೇವೆಗಳು ಜನತೆಗೆ ಸುಲಲಿತವಾಗಿ ಸಿಗುವಂತಾಗಬೇಕು ಎಂದರು.
ಪುರಸಭೆ ಅಧ್ಯಕ್ಷೆ ಸುಮಕೇಶವ್, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಪ್ರಭಾರ ತಹಸೀಲ್ದಾರ್ ಪುರಂದರ, ಕಾರ್ಕಳ ತಾ.ಪಂ. ಆಡಳಿತಾಧಿಕಾರಿ ಹಾಗೂ ಆಡಳಿತ ನಿರ್ದೇಶಕರು ನಗರಭಿವೃದ್ದಿ ಕೋಶ ಪ್ರತಿಭಾ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ.ಎನ್, ಹೆಬ್ರಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಪುರಸಭೆ ಮುಖ್ಯಾಧಿಕಾರಿ ರೂಪಾ ಜಿ.ಶೆಟ್ಟಿ, ಕುಕ್ಕುಂದೂರು ಗ್ರಾ.ಪಂ.ಅಧ್ಯಕ್ಷೆ ಶಶಿಮಣಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 94ಸಿ ಅಡಿಯಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ನಡೆಯಿತು. ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು.

error: