April 19, 2024

Bhavana Tv

Its Your Channel

ಮುಂಡ್ಕೂರು ಗ್ರಾಮ ಪಂಚಾಯತನಲ್ಲಿ 2022- 23ನೇ ಸಾಲಿನ ಗ್ರಾಮ ಸಭೆ.

ಕಾರ್ಕಳ: ಮುಂಡ್ಕೂರು ಗ್ರಾಮ ಪಂಚಾಯತ್ 2022- 23ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಸೋಮವಾರ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷೆ ಸುಶೀಲಾ ಬಾಬು ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕೃಷಿ ಇಲಾಖೆಯ ಸತೀಶ್ ನೋಡಲ್ ಅಧಿಕಾರಿಯಾಗಿದ್ದರು. ಸಂಕಲಕರಿಯದ ಉಗ್ಗೆದ ಬೆಟ್ಟು ಹಾಗೂ ಕೃಷ್ಣ ಬೆಟ್ಟು ನಿವಾಸಿಗಳ ನಡುವೆ ಮರಳುಗಾರಿಕೆ ಹಾಗೂ ರಸ್ತೆ ಅಗೆತದ ಬಗ್ಗೆ ಭಾರಿ ಮಾತಿನ ಚಕಮಕಿ ನಡೆಯಿತು. ಪಂಚಾಯತ್ ಮಾಜಿ ಸದಸ್ಯ ಸೋಮನಾಥ್ ಪೂಜಾರಿ ಉಗ್ಗೆದಬೆಟ್ಟು ನಿವಾಸಿಗಳ ಪರವಾಗಿ ಮಾತನಾಡಿ ಶಾಂಭವಿ ನದಿಯಿಂದ ಪ್ರಕಾಶ ಸಪಳಿಗ ಎಂಬವರು ಮರಳು ಪರವಾನಿಗೆ ಮಾಡಿದ್ದು ಮರಳು ಸಾಗಾಟದ ವಾಹನಗಳಿಂದಾಗಿ ರಸ್ತೆ ಹಾಳಾಗುತ್ತಿದೆ. ಇಲ್ಲಿ ಅಂಗನವಾಡಿಯು ರಸ್ತೆಯ ಬದಿಯಲ್ಲಿ ಇರುವುದರಿಂದ ತೊಂದರೆಯಾಗುತ್ತಿದೆ ಎಂದು ಜನರ ಮರಳುಗಾರಿಕೆ ನಡೆಸಬಾರದು ಎಂದು ಪಂಚಾಯಿತಿಗೆ ಅನೇಕ ಬಾರಿ ಮನವಿಯನ್ನು ಕೂಡ ನೀಡಿದ್ದೆವೆ ಎಂದರು. ಮರಳು ಪರವಾನಿಗೆಯವರ ಪರವಾಗಿ ಕೃಷ್ಣಬೆಟ್ಟುವಿನ ರಿಚಾಡ9 ಮಾತನಾಡಿ ನಾವು ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿಲ್ಲ ಪಂಚಾಯತ್ ಪರವಾನಿಗೆಯಿಂದ ಮರಳುಗಾರಿಕೆ ಮಾಡುತ್ತಿದ್ದೇವೆ ಎಂದು ಹೇಳಿದರು. ಯಾವುದೇ ಕಾರಣಕ್ಕೂ ಇಲ್ಲಿ ಮರಳುಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಸೋಮನಾಥ್ ಪೂಜಾರಿ ಹಠ ಹಿಡಿದರು.
ರಸ್ತೆ ಅಗೆತ ವಿವಾದ.
ಕಷ್ಣ ಬೆಟ್ಟುವಿನ ನಿವಾಸಿಗಳ ಪರವಾಗಿ ಮಾತನಾಡಿದ ಜೆಸಿಂತಾ ಅಶ್ವತ ಕಟ್ಟೆಯ ಬಳಿ ಹಲವು ವರ್ಷಗಳಿದ್ದ ಇದ್ದ ರಸ್ತೆಯನ್ನು ಹಗೆಯಲಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದಾಗ, ಈ ರಸ್ತೆಯಿಂದಾಗಿ ವಾಹನ ಸಂಚಾರ ಸಂದರ್ಭದಲ್ಲಿ ಕೆಸರಿನಿಂದ ಅಶ್ವತ ಕಟ್ಟೆ ಪವಿತ್ರತೆ ಹಾಳಾಗುತ್ತಿದ್ದು ಈ ಕಾರಣಕ್ಕಾಗಿ ಪಂಚಾಯತ್ ವತಿಯಿಂದ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಮೋರಿ ನಿರ್ಮಿಸಿ ನೂತನ ರಸ್ತೆ ಮಾಡಿಕೊಡಲಾಗಿದೆ ಎಂದು ಸೋಮನಾಥ್ ಪೂಜಾರಿ ತಿಳಿಸಿದರು. ಮರಳು ಪರವಾನಿಗೆಯ ಬಗ್ಗೆ ತಾಲೂಕು ಸಮಿತಿಯಲ್ಲಿ ನಿರ್ಣಯಿಸಲಾಗುವುದು ಎಂದು ಪಂಚಾಯತ್ ಉಪಾಧ್ಯಕ್ಷ ಅಧ್ಯಕ್ಷ ಭಾಸ್ಕರ್ ಶೆಟ್ಟಿ ತಿಳಿಸಿದರು.
ಅಧಿಕಾರಿಗಳ ಗೈರಿನ ಬಗ್ಗೆ ಆಕ್ರೋಶ ವ್ಯಕ್ತವಾಯಿತು. ಮರಳು ತೆಗೆಯುವ ಹೊರರಾಜ್ಯದ ಮಂದಿಯಿAದ ಕೀಟಲೆ ಯಾಗುತ್ತಿದೆ ಎಂಬ ದೂರು, ಗೋಕುಲನಗರ ಅಂಗನವಾಡಿ ಪಕ್ಕದ ಮರ ತೆರವು ,ಕಿಟಕಿ ದುರಸ್ತಿಯ ಬಗ್ಗೆ, ಸಂಕಲಕರಿಯ ದಾರಿದೀಪದ ಅವ್ಯವಸ್ಥೆಯ ಬಗ್ಗೆ ಪಡಿತಾರ್ ವಿದ್ಯುತ್ ತಂತಿಯ ಬಗ್ಗೆ ದೂರು ಕೇಳಿ ಬಂತು. ಪಂಚಾಯತ್ ಉಪಾಧ್ಯಕ್ಷ ಭಾಸ್ಕರ್ ಶೆಟ್ಟಿ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ಮಲ್ಲಿಕಾ ವರದಿ ನೀಡಿದರು.

error: