April 20, 2024

Bhavana Tv

Its Your Channel

ಮುಂಡ್ಕೂರು ಕಲ್ಲಿಮಾರಿನಲ್ಲಿ ಪುರಾತನ ನಾಗಕಲ್ಲು ಪತ್ತೆ.

ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಕಲ್ಲಿಮಾರ್‌ವಿನಲ್ಲಿ ಪುರಾತನ ಕಾಲದ ನಾಗಕಲ್ಲು ಪತ್ತೆಯಾಗಿದೆ. ನಾಗ ಬನದ ಸಮೀಪ ಅಗೆಯುವಾಗ ಈ ಕಲ್ಲು ಪತ್ತೆಯಾಗಿದೆ. ನಾಗಕಲ್ಲು ತುಂಡಾಗಿದ್ದು ಬಹಳ ಪುರಾತನವಾದ ಅಪರೂಪದ ಶಿಲ್ಪ ಕಲೆ ಇದರಲ್ಲಿ ಗೋಚರಿಸುತ್ತಿದೆ. ರವಿಪ್ರಸಾದ್ ಭಟ್ ಸಹಕಾರದಲ್ಲಿ ಈ ಅಪರೂಪದ ಶಿಲ್ಪರೂಪದ ನಾಗಕಲ್ಲು ಪತ್ತೆಯಾಗಿದೆ. ಸುಮಾರು 500 ವರ್ಷಗಳ ಹಿಂದಿನ ಪುರಾತನ ಶಿಲ್ಪ ಕಲೆಯ ಹಾಗೆ ಕಂಡುಬರುತ್ತಿದೆ.

ವರದಿ: ಅರುಣ ಭಟ್ ಕಾರ್ಕಳ

error: