September 16, 2024

Bhavana Tv

Its Your Channel

ಮಾರ್ಚ್ 18 ಕ್ಕೆ ಕಾರ್ಕಳ ಸಾಣೂರು ಉರೂಸ್

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ಅಂತ್ಯ ವಿಶ್ರಮಗೊಂಡಿರುವ ಅಸಂಖ್ಯಾತ ಜನರ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ನೀಡುತ್ತಿರುವ ಹಝರತ್ ಅಸ್ಸಯ್ಯದ್ ಶಾಹುಲ್ ಹಮೀದ್ ವಲಿಯುಲ್ಲಾರವರ ಸಾಣೂರು ಉರೂಸ್ ಸಮಾರಂಭವು ಮಾರ್ಚ್ 18 ಶನಿವಾರ ನಡೆಯಲಿದೆ.
ಮಗ್ರಿಬ್ ನಮಾಜ್ ನಂತರ ನಡೆಯುವ ಕಾರ್ಯಕ್ರಮದ ನೇತ್ರತ್ವವನ್ನು ಉಡುಪಿ ಚಿಕ್ಕಮಗಳೂರು ಸಂಯುಕ್ತ ಖಾಝಿ ಝೈನುಲ್ ಉಲೇಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಇವರು ವಹಿಸಲಿದ್ದು, ಕಾರ್ಯಕ್ರಮದ ಉದ್ಘಾಟಣೆಯನ್ನು ತ್ವೈಭಾ ಗಾರ್ಡನ್ ಬಂಗ್ಲೆಗುಡ್ಡೆ ಪ್ರಾಂಶುಪಾಲ ಅಹ್ಮದ್ ಶರೀಫ್ ಸಅದಿ ಅಲ್ ಖಾಮಿಲ್ ಕಿಲ್ಲೂರು ರವರು ನೆರವೇರಿಸಲಿದ್ದಾರೆ.
ಸಯ್ಯಿದ್ ಅಬೂಬಕ್ಕರ್ ಸಿದ್ದೀಕ್ ತಂಓಳ್ ಹಾದಿ ಮದನಿ ಮುರ ತೀರ್ಥಳ್ಳಿರವರು ದುವಾ ಆಶೀರ್ವಚನ ನೀಡಲಿದ್ದು , ಖ್ಯಾತ ವಾಗ್ಮಿ ಪ್ರಗಲ್ಬ ಪಂಡಿತ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪತ್ತಣಾಪುರಂ ಕೇರಳ ಇವರು ಮುಖ್ಯ ಪ್ರಭಾಷಣ ನೀಡಲಿದ್ದಾರೆ.
ಮುಯ್ಯುದ್ದೀನ್ ಜುಮ್ಮಾ ಮಸೀದಿ ಹಾಗೂ ಸಾಣೂರು ದರ್ಗಾ ಶರೀಫ್ ಅಧ್ಯಕ್ಷ ಐಡಿಯಲ್ ಅಬ್ದುಲ್ ರಹಿಮಾನ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಬಿ ಎಂ ಫಾರೂಖ್, ಮಾಜಿ ಶಾಸಕ ಬಿ ಎ ಮೊಯಿದ್ದೀನ್ ಭಾವ, ದ ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ ಎ ಅಬ್ದುಲ್ ನಾಸೀರ್, ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಉದ್ಯಮಿಗಳಾದ ಅಬ್ದುಲ್ ಲತೀಫ್ ಗುರಪುರ, ಬಿ ಎಂ ಮಾಮ್ಥಾಜ್ ಅಲಿ, ಡಾ . ಅಬ್ದುಲ್ ರವೂಫ್ ಸುಲ್ತಾನ್ ಗೋಲ್ಡ್, ವಿವಿಧ ಮಸೀದಿ ಮದ್ರಸ , ಸಂಘಟನೆಗಳ ನೇತಾರರು ಉಲೇಮಾ ಉಮರಗಳು ಭಾಗವಹಿಸಲಿದ್ದಾರೆ

ವರದಿ: ಅರುಣ ಭಟ್ ಕಾರ್ಕಳ

error: