April 26, 2024

Bhavana Tv

Its Your Channel

ಮೇ ದಿನಾಚರಣೆಯ ಅಂಗವಾಗಿ ರೈತ,ಕೃಷಿಕೂಲಿ, ಕಾರ್ಮಿಕರ ಬೃಹತ್ ಮೆರವಣಿಗೆ,ಬಹಿರಂಗ ಸಭೆ

ಬೈಂದೂರು: ಬೈಂದೂರು ತಾಲೂಕು ಸಿಐಟಿಯು ನೇತೃತ್ವದಲ್ಲಿ ರೈತ, ಕೃಷಿಕೂಲಿಕಾರ ಹಾಗೂ ಕಾರ್ಮಿಕರ ಬೃಹತ್ ಮೆರವಣಿಗೆ,ಬಹಿರಂಗ ಸಭೆ ಯಶಸ್ವಿಯಾಗಿ ಜರುಗಿತು.
ಸಿಐಟಿಯು ಸಂಯೋಜಿತ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಬೈಂದೂರು ಪೇಟೆಯ ಪ್ರಮುಖ ಬೀದಿಯಲ್ಲಿ ಬೃಹತ್ ಮೆರವಣಿಗೆಯಲ್ಲಿ ಸಾಗಿ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಯಿತು.
ಸಿಐಟಿಯು ಉತ್ತರಕನ್ನಡ ಜಿಲ್ಲಾಧ್ಯಕ್ಷ ತಿಲಕ್ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮೇ ದಿನದ ಮಹತ್ವವನ್ನು ವಿವರಿಸಿದರು,ದೇಶ ಪ್ರಸಕ್ತ ಎದುರಿಸುತ್ತಿರುವ ಸಮಸ್ಯೆಗಳು ಗಂಭೀರವಾಗಿದೆ. ವಿಶೇಷ ಸನ್ನಿವೇಶದಲ್ಲಿ ನಾವು ಮೇ ದಿನಾಚರಣೆ ಸಂದರ್ಭದಲ್ಲಿ ಸೇರುತ್ತಿದ್ದೇವೆ.
ದೇಶ ಹಲವು ಸವಾಲುಗಳನ್ನು ಎದುರಿಸುತ್ತಿದೆ.ಕೆಲವು ವಿಷಯ,ಘಟನೆಗಳು ನಮ್ಮ ಅಂದಾಜಿಗೆ ಮೀರಿ ನಡೆಯುತ್ತಿದೆ.ಅಂತಹ ಐತಿಹಾಸಿಕ ಗಂಭೀರ ಸವಾಲು ನಮ್ಮ ಚಳುವಳಿಗೆ ಬಂದಿದೆ ಎಂದು ಆತಂಕ ವ್ಯಕ್ತ ಪಡಿಸಿದರು.ನಮ್ಮ ಸಂವಿಧಾನದ ಆಶಯಗಳಿಗೆ ಕುತ್ತು ಬಂದಿದೆ,ಆಪತ್ತು ಬಂದಿದೆ ಎಂದು ತಿಲಕ್ ಗೌಡ ಹೇಳಿದರು.

ಕಾರ್ಮಿಕ ಮುಖಂಡ ವೆಂಕಟೇಶ್ ಕೋಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಐಟಿಯು ತಾಲೂಕು ಸಂಚಾಲಕ ರೋನಾಲ್ಡ್ ರಾಜೇಶ್ ಕ್ವಾಡ್ರಸ್,ಉದಯ ಗಾಣಿಗ ಮೊಗೇರಿ, ಗಣೇಶ್ ತೊಂಡೆಮಕ್ಕಿ, ನಾಗರತ್ನ ನಾಡ, ಶೀಲಾವತಿ, ರಮೇಶ್ ಗುಲ್ವಾಡಿ,ಅಮ್ಮಯ್ಯ ಪೂಜಾರಿ,ವಿಜಯ ಕಿರಿಮಂಜೇಶ್ವರ, ರೋನಿ ನಜ್ರತ್, ಮಂಜು ಪೂಜಾರಿ ಪಡುವರಿ, ಶೋಭ ನಾಡ,ರಾಮ ಖಂಭದಕೋಣೆ,ಲಕ್ಷ್ಮಣ ಯಡ್ತರೆ,ಶ್ರೀಧರ ಉಪ್ಪುಂದ,ಮಾಧವ ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು. ರಾಜೀವ ಪಡುಕೋಣೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.ರೊನಾಲ್ಡ್ ಸ್ವಾಗತಿಸಿದರು,ಶ್ರೀಧರ ಉಪ್ಪುಂದ ಧನ್ಯವಾದ ಗೈದರು.

ವರದಿ:ಅರುಣ ಭಟ್ ಕಾರ್ಕಳ

error: