April 13, 2024

Bhavana Tv

Its Your Channel

ಕುಂದಾಪುರದ ಹುಡುಗಿ ಕಾಶ್ಮೀರಕ್ಕೆ ಸೋಲೋ ರೈಡ್, 12 ದಿನಗಳಲ್ಲಿ 7 ಸಾವಿರ ಕಿಮೀ ಅಧಿಕ ದೂರವನ್ನು ಕ್ರಮಿಸಿದ ಸಾಕ್ಷಿ ಹೆಗ್ಡೆ

ಕುಂದಾಪುರ :-ದೇಶದಲ್ಲಿ ಹೆಣ್ಣು ಮಕ್ಕಳು ಎಷ್ಟು ಸುರಕ್ಷಿತರು ಎನ್ನುವುದನ್ನು ತೋರಿಸುವ ಸಲುವಾಗಿ ಏಕಾಂಗಿಯಾಗಿ ಕುಂದಾಪುರದ ಮೂಲದ ಹುಡುಗಿಯೊಬ್ಬಳು ಸದ್ಯ ಕಾಶ್ಮೀರ ಪ್ರಯಾಣ ಮಾಡಿ ಸುರಕ್ಷಿತಳಾಗಿ ಮರಳಿದ್ದಾಳೆ. ಕುಂದಾಪುರದಿAದ ತನ್ನ ಬಜಾಜ್ ಪಲ್ಸರ್ ಮೂಲಕ ಸೋಲೋ ರೈಡ್‌ನಲ್ಲಿ ತೆರಳಿರುವ ಈಕೆ ಕೇವಲ 12 ದಿನಗಳಲ್ಲಿ 7 ಸಾವಿರ ಕಿಮೀ ಅಧಿಕ ದೂರವನ್ನು ಕ್ರಮಿಸಿ ಮರಳಿದ್ದಾಳೆ. ಈ ಮೂಲಕ ನಮ್ಮ ದೇಶ ಮಹಿಳೆಯರಿಗೆ ಸುರಕ್ಷಿತವಲ್ಲ ಎನ್ನುವ ಕೆಲವರ ಬಾಯಿ ಮುಚ್ಚಿಸಿದ್ದಾಳೆ.

ಈಕೆ ಕುಂದಾಪುರ ತಾಲೂಕಿನ ಕುಂಭಾಶಿಯ ನಿವಾಸಿ ಸಾಕ್ಷಿ ಹೆಗ್ಡೆ. ಸಾಕ್ಷಿ ಹೆಗ್ಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿ ಮೂಲದವರು. ತಂದೆ ಶಿವರಾಮ ಹೆಗಡೆ ತಾಯಿ ಪುಷ್ಪಾ ಇವರ ಜೊತೆ ಸದ್ಯ ಕುಂಭಾಶಿಯಲ್ಲಿ ನೆಲೆಸಿದ್ದಾರೆ, ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ತೃತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿರುವ ಈಕೆಗೆ ಮೊದಲಿನಿಂದಲೂ ಬೈಕ್ ಕ್ರೇಜ್. ಕಳೆದ ಒಂದೂವರೆ ತಿಂಗಳ ಹಿಂದೆ ಹೊಸ ಬೈಕ್ ಖರೀದಿಸಿದ್ದ ಸಾಕ್ಷಿ ಹೆಗ್ಡೆಗೆ, ರಾಣಿಬೆನ್ನೂರಿನ ಓರ್ವ ಯುವತಿ ರಸ್ತೆ ಸುರಕ್ಷತೆ ಬಗ್ಗೆ ಸೋಲೋ ಬೈಕ್ ರೈಡ್ ಮಾಡಿರುವುದನ್ನು ನೋಡಿ ಸ್ಫೂರ್ತಿ ಪಡೆದ ಕುಂದಾಪುರದಿAದ ಕಾಶ್ಮೀರ ಸೋಲೋ ರೈಡ್ ಪ್ಲಾನ್ ಹಾಕಿದ್ದಾಳೆ. ಈ ಬಗ್ಗೆ ಮನೆಯವರಿಗೆ ತಿಳಿಸಿ ಒಪ್ಪಿಗೆಯ ಮೇರೆಗೆ, ಸ್ನೇಹಿತರು ಹಾಗೂ ಕುಂದಾಪುರ ಹಿಂದು ಜಾಗರ ವೇದಿಕೆ ನೆರವು ಪಡೆದು ಸೋಲೋ ರೈಡ್ ತೆರಳಿದ್ದಾಳೆ. ಮೇ 25ರಂದು ಕುಂಭಾಶಿಯಿAದ ಹೊರಟ ಇವರು 15 ದಿನಗಳಲ್ಲಿ ಜಮ್ಮು-ಕಾಶ್ಮೀರಕ್ಕೆ ಹೋಗಿ ಮರಳುವ ಯೋಜನೆ ಹಾಕಿಕೊಂಡಿದ್ದರು. ಆದರೆ ಅದನ್ನು ಹನ್ನೆರಡೇ ದಿನಗಳಲ್ಲಿ ಯಶಸ್ವಿಯಾಗಿ ಮುಗಿಸಿರುವ ಸಾಕ್ಷಿ ಇಂದು ಕುಂದಾಪುರಕ್ಕೆ ಮರಳಿದ್ದಾಳೆ.

ಕುಂದಾಪುರದಿoದ ಹೊರಟು ಮೊದಲನೇ ದಿನ ಕೊಲ್ಲಾಪುರ ತಲುಪಿ ಅಲ್ಲಿ ಒಂದು ದಿನ ಇದ್ದು .ನಂತರ ಪನ್ವೇಲ್‌ಗೆ ತೆರಳಿ ಅಲ್ಲಿ ಅಕ್ಕನ ಮನೆಯಲ್ಲಿ ಒಂದು ದಿನ ತಂಗಿ, ನಂತರ ಅಹಮದಾಬಾದ್, ರಾಜಸ್ಥಾನದ ಮೂ ಜಮ್ಮು-ಕಾಶ್ಮೀರಕ್ಕೆ ತಲುಪಿ ಶ್ರೀನಗರದಲ್ಲಿ ಒಂದು ದಿನವಿದ್ದು, ಬಳಿಕ ಚಂಡೀಗಢಕ್ಕೆ ತೆರಳಿದ್ದಾಳೆ. ಆದರೆ ಬರುವಾಗ ಹೋದ ದಾರಿಯನ್ನು ಒಳಸದೆ ಬೇರೆ ಊರುಗಳನ್ನು ಅಲ್ಲಿನ ಜನ ಜೀವನ ನೋಡುವ ಉದ್ದೇಶಕ್ಕೆ ಮಧ್ಯಪ್ರದೇಶ, ಉತ್ತರಪ್ರದೇಶ, ಲುಧಿಯಾನಗಳಲ್ಲಿ ಸಂಚರಿಸಿ ಮರಳಿದ್ದಾರೆ. 12 ದಿನಗಳ ಕಾಲವು ಕೂಡು ನಾನು ಚಲಾಯಿಸುತ್ತಿದ್ದ ಬೈಕ್ ಎಲ್ಲಿಯೂ ಹಾಳಾಗಿಲ್ಲ, ಕೆಲವು ಕಡೆಯಲ್ಲಿ ದಾರಿ ಕಠಿಣ ಎನಿಸಿದರೂ ಕೂಡ ಸಂಯಮದಿAದ ಬೈಕ್ ಚಲಾಯಿಸಿದೆ. ಆಹಾರ ಹೊರತುಪಡಿಸಿ ಮತ್ತೆ ಸೋಲೋ ರೈಡ್ ಉತ್ತಮವಾಗಿತ್ತು, ಆಹಾರದ ವಿಚಾರದಲ್ಲಿ ಕರ್ನಾಟಕ ಬೆಸ್ಟ್. ನಮ್ಮ ದೇಶದಲ್ಲಿ ಹುಡುಗಿಯರು ಸುರಕ್ಷಿತರಾಗಿದ್ದಾರೆ, ಮನೆಯವರ ಬೆಂಬಲವಿದ್ದರೆ ಏನನ್ನು ಬೇಕಾದರೂ ಹುಡುಗಿಯರು ಸಾಧಿಸಬಲ್ಲರು. ಮಹಿಳೆಯರು ಸಶಕ್ತರು ಹಾಗೂ ಆ ಬಗ್ಗೆ ಜಾಗೃತಿ ಮೂಡಿಸಲು ಬೈಕ್‌ನಲಿ ಈ ಏಕಾಂಗಿ ಪ್ರಯಾಣ ಎನ್ನುತ್ತಾರೆ ಸಾಕ್ಷಿ.

ಒಟ್ಟಾರೆಯಾಗಿ ದೇಶದಲ್ಲಿ ಹುಡುಗಿಯರು ಎಷ್ಟು ಸುರಕ್ಷಿತರು ಎನ್ನುವುದನ್ನು ಸಾಕ್ಷೀಕರಿಸಲು ತೆರಳಿದ ಸಾಕ್ಷಿ ಹೆಗ್ಡೆ ಹುಡುಗಿರ ಮನೋ ಸ್ಥೈರ್ಯ ಹೆಚ್ಚಿಸುವ ಕಾರ್ಯ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಆಕೆಗೆ ಬೆನ್ನೆಲುಬಾಗಿ ನಿಂತ ಪೋಷಕರು, ಸ್ನೇಹಿತರು ಹಾಗೂ ಹಿಂದೂ ಸಂಘಟನೆಗಳಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು…

error: