April 19, 2024

Bhavana Tv

Its Your Channel

ಮಳವಳ್ಳಿ ಸಿಡಿ ಹಬ್ಬವನ್ನು ಸರಳವಾಗಿ ಆಚರಿಸಲು ಅನುಮತಿ ನೀಡಿದ ತಾಲೂಕು ಆಡಳಿತ

ಮಳವಳ್ಳಿ ; ನಾಡಿನ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಮಳವಳ್ಳಿ ಸಿಡಿ ಹಬ್ಬವನ್ನು ಕೋವಿಡ್ ಹಿನ್ನೆಲೆಯಲ್ಲಿ ಸಂಪ್ರದಾಯAತೆ ಸರಳವಾಗಿ ಆಚರಿಸಲು ತಾಲೂಕು ಆಡಳಿತ ಅನುಮತಿ ನೀಡಿದ್ದು ಅದರಂತೆ ಹಬ್ಬ ಆಚರಣೆಗೆ ಪಟ್ಟಣದ ನಾಗರೀಕ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಹಿಂದೆ ಕರೆಯಲಾಗಿದ್ದ ಸಭೆಯಲ್ಲಿ ಸಂಪ್ರದಾಯಬದ್ದವಾಗಿ ನಡೆದುಕೊಂಡು ಬಂದಿರುವ ಸಿಡಿ ಹಬ್ಬವನ್ನು ಯಾವುದೇ ಕಾರಣಕ್ಕೆ ನಿಲ್ಲಿಸದೆ ಸಂಪ್ರದಾಯದAತೆ ಸರಳವಾಗಿ ಹಬ್ಬ ಆಚರಣೆಗೆ ಅವಕಾಶ ನೀಡಬೇಕೆಂದು ಮುಖಂಡರು ಒತ್ತಾಯಿಸಿದ್ದರು.
ಆದರೆ ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜನವರಿ 31 ರವರೆಗೆ ಹಬ್ಬ ಜಾತ್ರೆ ಉತ್ಸವಗಳಿಗೆ ಜಿಲ್ಲಾಧಿಕಾರಿಗಳು ನಿರ್ಬಂಧ ವಿಧಿಸಿರುವುದರಿಂದ 31 ರ ನಂತರ ಈ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ತಹಸೀಲ್ದಾರ್ ವಿಜಯಣ್ಣ ಸಭೆಯನ್ನು ಮುಂದೂಡಿದ್ದರು.
ಅದರAತೆ ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಗಡಿ ಯಜಮಾನರಾದ ಎಂ ಸಿ ವೀರೇಗೌಡ, ದೇವಾಲಯದ ಯಜಮಾನರಾದ ನಂಜುAಡಪ್ಪ ಮಾಜಿ ಪುರಸಭಾಧ್ಯಕ್ಷ ದೊಡ್ಡಯ್ಯ, ಎಂ ಎ ಚಿಕ್ಕರಾಜು, ಮತ್ತಿತರರು ಈ ಬಾರಿ ಸಿಡಿ ಬಂಡಿಗೆ ಹೊಸ ಸಿಡಿ ಮರವನ್ನು ಸಿದ್ದಪಡಿಸಿರುವುದರಿಂದ ಹಬ್ಬವನ್ನು ಅಚರಿಸಲೇ ಬೇಕಾಗಿದ್ದು ಕೋವಿಡ್ ನಿಯಮಾವಳಿಯಂತೆ ಸರಳವಾಗಿ ಎಲ್ಲಾ ಸಂಪ್ರದಾಯ ಗಳ ಹಬ್ಬ ಆಚರಣೆಗೆ ಅವಕಾಶ ನೀಡಬೇಕೆಂದು ತಾಲೂಕು ಆಡಳಿತವನ್ನು ಒತ್ತಾಯಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ತಹಸೀಲ್ದಾರ್ ವಿಜಯಣ್ಣ ಅವರು ಸಂಪ್ರದಾಯದAತೆ ಹಬ್ಬದ ಆಚರಣೆಯಾದ ಘಟ್ಟಗಳ ಮೆರವಣಿಗೆಯಲ್ಲಿ ಕೇವಲ 100 ರಿಂದ 150 ಜನರಿಗೆ ಮೀರದಂತೆ ಭಾಗವಹಿಸಿ ಪೂಜೆ ಸಲ್ಲಿಸಬಹುದಾಗಿದ್ದು, ಕೊಂಡ ಹಾಯಲು ದೇವರ ಕುಟುಂಬದ ಇಬ್ಬರಿಗೆ ಮಾತ್ರ ಅವಕಾಶವಿದ್ದು ಬೇರೆಯವರಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು. ಯಾವುದೇ ಜಾತ್ರೆ, ಅಂಗಡಿ ಮುಂಗಟ್ಟುಗಳನ್ನು ತೆರೆಯುವಂತಿಲ್ಲ , ಜೊತೆಗೆ ಸೌಂಡ್ ಸಿಸ್ಟಮ್, ವಿದ್ಯುತ್ ದೀಪಾಲಂಕಾರ, ಫ್ಲಕ್ಸ್ ಗಳನ್ನು ಹಾಕುವಂತಿಲ್ಲ ಎಂದು ಷರತ್ತು ಹಾಕಿದರು.
ಇದಕ್ಕೆ ಮುಖಂಡರು ಸಹಮತ ಸೂಚಿಸಿದರಾದರೂ ಸಿಡಿ ಬಂಡಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವಂತಿಲ್ಲ , ಬದಲಾಗಿ ಸಿಡಿ ಬಂಡಿ ಸಿದ್ದವಾಗುವ ಕೋಟೆ ಬೀದಿಯ ಪಟೇಲರ ಮನೆ ಬಳಿಯಿಂದ ನೇರವಾಗಿ ಪಟ್ಟಲದಮ್ಮ ದೇವಸ್ಥಾನದ ಬಳಿಗೆ ಎಳೆದು ತರಲು ಮಾತ್ರ ಅವಕಾಶ ನೀಡಲಾಗುವುದು ಎಂಬ ತಹಸೀಲ್ದಾರ್ ಅವರ ನಿರ್ಧಾರಕ್ಕೆ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.
ಹಬ್ಬ ಆಚರಣೆ ಎಂದ ಮೇಲೆ ನಿಗದಿತ ಬೀದಿಗಳಲ್ಲಿ ಸಿಡಿ ಬಂಡೆ ಹರಿಯಬೇಕಿರುವುದು ಸಂಪ್ರದಾಯ ಆಚರಣೆಯಾಗಿದ್ದು ಇದಕ್ಕೆ ಅವಕಾಶ ನೀಡಲೇಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಮುಖಂಡರ ಆಗ್ರಹಕ್ಕೆ ಸಮ್ಮತಿಸಿದ ತಾಲೂಕು ಆಡಳಿತ ಸಿಡಿ ಬಂಡಿ ನಿಗದಿತ ಬೀದಿಗಳಲ್ಲಿ ಎಳೆದು ತರಲು ತಾಲೂಕು ಆಡಳಿತ ಪರವಾಗಿ ಅನುಮತಿ ಘೋಷಿಸಿದ ಡಿವೈಎಸ್ಪಿ ಲಕ್ಷ್ಮಿ ನಾರಾಯಣ ಪ್ರಸಾದ್ ಅವರು ಆದರೆ ಬಂಡಿ ಉತ್ಸವದಲ್ಲಿ ನೂರಕ್ಕಿಂತ ಹೆಚ್ಚು ಜನ ಸೇರಿದಂತೆ ಷರತ್ತು ವಿಧಿಸಿದರು.
ಪುರಸಭಾಧ್ಯಕ್ಷೆ ರಾಧ ನಾಗರಾಜು, ಉಪಾಧ್ಯಕ್ಷ ಟಿ ನಂದಕುಮಾರ್, ತಾ ಪಂ ಇಒ ರಾಮಲಿಂಗಯ್ಯ, ಮುಖ್ಯಾಧಿಕಾರಿ ಪವನ್ ಕುಮಾರ್, ಮುಖಂಡರಾದ ಎಂ ಹೆಚ್ ಕೆಂಪಯ್ಯ, ಎನ್ ನಂಜುAಡಯ್ಯ, ಅಪ್ಪಾಜಿಗೌಡ, ಚಿಕ್ಕಮೊಗಣ್ಣ, ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: