April 16, 2024

Bhavana Tv

Its Your Channel

ಸಾಲಮನ್ನಾ: ಜಿಲ್ಲೆಯ ಮೀನುಗಾರರ ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಡಲಿ

ಮುಖ್ಯಮಂತ್ರಿ ಯಡಿಯೂರಪ್ಪನವರು ಮೀನುಗಾರರ ಮಹಿಳೆಯರ ಸಾಲಮನ್ನಾ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಇನ್ನುವರೆಗೂ ಉತ್ತರ ಕನ್ನಡ ಜಿಲ್ಲೆಯ ಮಹಿಳೆಯರಿಗೆ ಮಾತ್ರ ನ್ಯಾಯ ದೊರೆತಿಲ್ಲ. ಇನ್ನಾದರೂ ಸಾಲಮನ್ನಾಕ್ಕೆ ಆದೇಶ ನೀಡಿ ನ್ಯಾಯ ಓದಗಿಸುವಂತೆ ಜಿಲ್ಲೆಯ ಮೀನುಗಾರ ಮಹಿಳೆಯರು ಒತ್ತಾಯಿಸುತ್ತಿದ್ದಾರೆ. ಮೀನುಗಾರಿಕಾ ಸಚಿವ ಎಸ್ ಅಂಗಾರರವರು ಜಿಲ್ಲೆಗೆ ಆಮಿಸುತ್ತಿದ್ದು ಮೀನುಗಾರರ ಮಹಿಳೆಯರಿಗೆ ನ್ಯಾಯ ಓದಗಿಸಿಕೊಡಲಿ ಎಂಬ ಆಗ್ರಹ ವ್ಯಕ್ತವಾಗಿದೆ.

ರಾಜ್ಯದ ಮೀನುಗಾರ ಮಹಿಳೆಯರಿಗೆ ಸರ್ಕಾರವು ೬೦ ಕೋಟಿ ರೂಪಾಯಿಗಳ ಸಾಲ ಮನ್ನಾ ಘೋಷಣೆ ಮಾಡಿದ್ದು, ಸರ್ಕಾರದ ಅಸಮರ್ಪಕ ಮಾನದಂಡಗಳಿ0ದ ಜಿಲ್ಲೆಗೆ ಕೇವಲ ೧.೫ ಕೋಟಿ ರೂಪಾಯಿ ಮಾತ್ರ ದೊರೆತಿದೆ.
ಉಡುಪಿ ಮತ್ತು ಮಂಗಳೂರು ಜಿಲ್ಲೆಗೆ ಸುಮಾರು ೫೭ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಸಾಲಮನ್ನಾ ದೊರೆತ್ತಿದ್ದು, ಜಿಲ್ಲೆಯ ಮೀನುಗಾರ  ಮಹಿಳೆಯರಿಗೆ ತೀವೃ ಅನ್ಯಾಯವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳು ಹಾಗೂ ಅಂದಿನ ಮೀನುಗಾರಿಕಾ ಸಚಿವ ಶ್ರೀನಿವಾಸ ಪೂಜಾರಿಯವರು ಜಿಲ್ಲೆಯ ಮೀನುಗಾರರರಿಗೆ ನ್ಯಾಯ ದೊರಕಿಸಿ ಕೊಡುವ ಬರವಸೆ ನೀಡಿದ್ದರೂ, ಈವರೆಗೂ ಯಾವುದೆ ಪ್ರಯೋಜನವಾಗಿಲ್ಲ.
ಜಿಲ್ಲೆಗೆ ಆಗಮಿಸುತ್ತಿರುವ ಮೀನುಗಾರಿಕಾ ಸಚಿವ ಎಸ್. ಅಂಗಾರರವರು, ತಮ್ಮ ಸಾಲಮನ್ನಾ ಮಾಡಿ ನ್ಯಾಯ ಒದಗಿಸುವ ಬರವಸೆಯಲ್ಲಿ ಮೀನುಗಾರ ಮಹಿಳೆಯರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಸರ್ಕಾರವು ಮೀನುಗಾರರ ಅಂದಿನ ಸಮಸ್ಯೆಗಳಿಗೆ ಸ್ಫಂದಿಸಿ ರಾಜ್ಯದ ಮೀನುಗಾರ ಮಹಿಳೆಯರಿಗೆ ೬೦ ಕೋಟಿ ರೂಪಾಯಿ ಸಾಲಮನ್ನಾದ ಘೋಷಣೆ ಮಾಡಿತ್ತು. ಈ ಬಗ್ಗೆ ಎಲ್ಲೆಡೆಯಲ್ಲೂ ದೊಡ್ಡ ಪ್ರಮಾಣದ ಪ್ರಚಾರ ನೀಡಲಾಗಿತ್ತು. ೨೦೧೭ರಿಂದ ೨೦೧೯ರವರೆ ಮೀನುಗಾರ ಮಹಿಳೆಯರು ವ್ಯಯಕ್ತಿಕವಾಗಿ ಹಾಗೂ ಸ್ವಸಹಾಯ ಸಂಘಗಳ ಮೂಲಕ ರಾಷ್ಟಿçÃಕೃತ ಬ್ಯಾಂಕುಗಳಿAದ ಪಡೆದ ೫೦ ಸಾವಿರ ರೂಪಾಯಿಯವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ತಿಳಿಸಲಾಗಿತ್ತು. ಆದ್ದರಿಂದ ಅಂದಿನಿAದ ಮೀನುಗಾರ ಮಹಿಳೆಯರು ಬ್ಯಾಂಕಿನಿAದ ಪಡೆದ ಸಾಲವನ್ನು ಮರು ಪಾವತಿಸದೆ ಸಂತಸದಲ್ಲಿದ್ದರು. ಆದರೆ, ಸರ್ಕಾರದ ಹಲವು ಅಸಮರ್ಪಕವಾದ ಮಾನದಂಡಗಳಿAದ ಉತ್ತರ ಕನ್ನಡ ಜಿಲ್ಲೆಗೆ ೬೦ ಕೋಟಿಯಲ್ಲಿ ಕೇವಲ ೧.೫ ಕೋಟಿ ಮಾತ್ರ ಸಾಲಮನ್ನಾವಾಗಿದೆ.
ಈ ಬಗ್ಗೆ ಜಿಲ್ಲೆಯ ವಿವಿಧ ಮೀನುಗಾರ ಸಂಘಟನೆಗಳು, ಜಿಲ್ಲಾಧಿಕಾರಿಗಳಿಗೆ ತಮ್ಮ ಸಾಲಮನ್ನ ಮಾಡುವಂತೆ ವಿನಂತಿಸಿದ್ದರು. ಅಂದಿನ ಮೀನುಗಾರಿಕಾ ಸಚಿವ ಶ್ರೀನಿವಾಸ ಪೂಜಾರಿಯವರ ಬಳಿಯಲ್ಲೂ ಈ ಕುರಿತು ಹಲವು ಬಾರಿ ಮನವಿ ಮಾಡಿಕೊಳ್ಳಲಾಗಿತ್ತು.
ಕಾರವಾರ-ಅಂಕೋಲಾ ಶಾಸಕಿ ಶ್ರೀಮತಿ ರೂಪಾಲಿ ನಾಯ್ಕ, ಕುಮಟಾ-ಹೊನ್ನಾವರ ಶಾಸಕ ದಿನಕರ ಶೆಟ್ಟಿ ಹಾಗೂ ಭಟ್ಕಳ-ಹೊನ್ನಾವರ ಶಾಸಕ ಸುನಿಲ್ ನಾಯ್ಕರವರು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಮೀನುಗಾರಿಕಾ ಸಚಿವರಿಗೆ ಉತ್ತರ ಕನ್ನಡ ಜಿಲ್ಲೆ ಮೀನುಗಾರÀ ಮಹಿಳೆಯರ ಅನ್ಯಾಯ ಗಮನಕ್ಕೆ ತಂದಿದ್ದರು. ಜಿಲ್ಲೆಯ ಜನತೆಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ಆದರೆ ಅದೇ ಸಂದರ್ಭದಲ್ಲಿ ಕೊರೊನಾ ಮಹಾಮಾರಿ ಆರಂಭವಾದ್ದರಿAದ ಸಮಸ್ಯೆ ಹಾಗೆಯೇ ಉಳಿದುಕೊಂಡಿದೆ.
ಬಡ ಮೀನುಗಾರ ಮಹಿಳೆಯರು ರಾಷ್ಟೀಕೃತ ಬ್ಯಾಂಕುಗಳಿAದ ವ್ಯಯಕ್ತಿಕ ಹಾಗೂ ಸ್ವ-ಸಹಾಯ ಸಂಘಗಳ ಮೂಲಕ ಪಡೆದ ಸಾಲ ಮರುಪಾವತಿಸದೆ ಸರ್ಕಾರದ ಸಹಾಯಕ್ಕಾಗಿ ಕಾಯುತ್ತಿದ್ದಾರೆ. ಚಂಡ ಮಾರುತ, ಹವಾಮಾನ ವೈಪ್ಯರಿತ್ಯ ಹಾಗೂ ಕೊರೊನಾ ಮಹಾಮಾರಿಯ ತೊಂದರೆಯಿAದ ಮೀನುಗಾರ ಮಹಿಳೆಯರು ಸಾಲ ಮರು ಪಾವತಿಸಲಾಗದೆ ತೀವೃ ಸಂಕಷ್ಟದಲ್ಲಿದ್ದಾರೆ.

ಸಾಲಮನ್ನಾದಲ್ಲಿ ಸರ್ಕಾರದಿಂದ ಜಿಲ್ಲೆಯ ಮಹಿಳಾ ಮೀನುಗಾರರರಿಗೆ ತೀವ್ರ ಅನ್ಯಾಯವಾಗಿದೆ. ೬೦ಕೋಟಿ ಸಾಲಮನ್ನಾದಲ್ಲಿ ಜಿಲ್ಲೆಗೆ ಒಂದುವರೆ ಕೋಟಿ ದೊರೆತ್ತಿರುವುದು ಬೇಸರದ ಸಂಗತಿ. ಮಹಿಳೆಯರು ಸಾಲ ಮರುಪಾವತಿಸಲಾಗದೆ ತೀವ್ರ ಸಂಕಷ್ಟದಲ್ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳು ಜಿಲ್ಲೆಯ ಮೀನುಗಾರ ಮಹಿಳೆಯರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ನ್ಯಾಯ ದೊರಕಿಸಿಕೊಡಲಿಎಂದು ಜಿಲ್ಲಾ ಪಂಚಾಯತ ನಿಕಟಪೂರ್ವ ಅಧ್ಯಕ್ಷೆ ಜಯಶ್ರೀ ಮೋಗೇರರವರು ಆಗ್ರಹ ವ್ಯಕ್ತ ಪಡಿಸುತ್ತಾರೆ.
ಉತ್ತರ ಕನ್ನಡ ಮೀನುಗಾರ ಮಹಿಳೆಯರಿಗೆ ಮೀನುಗಾರರ ಸಾಲಮನ್ನಾದಲ್ಲಿ ಅನ್ಯಾಯವಾಗಿದೆ. ಮೀನುಗಾರಿಕಾ ಸಚಿವ ಎಸ್ ಅಂಗಾರರವರು ಮಹಿಳೆಯರ ಸಂಕಷ್ಟಕ್ಕೆ ಸ್ಪಂದಿಸಲಿ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ೫೫ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಸಾಲ ಮನ್ನಾ ಮಾಡಿದಂತೆ ಜಿಲ್ಲೆಯ ಮಹಿಳೆಯರಿಗೂ ಹೆಚ್ಚಿನ ಸೌಲಭ್ಯ ಒದಗಿಸಲಿ ಎಂದು ರಾಷ್ಟಿçÃಯ ಮೀನುಗಾರರ ಸಂಘಟನೆ ರಾಜ್ಯ ಕಾರ್ಯದರ್ಶಿ ಚಂದ್ರಕಾAತ ಕೋಚರೆಕರ ಅಭಿಪ್ರಾಯ ಪಡುತ್ತಾರೆ.

ಸರ್ಕಾರ ಸಾಲಮನ್ನಾ ಮಾಡಿದರೂ ತಮಗೆ ಅನ್ಯಾಯವಾಗಿರುವ ಬಗ್ಗೆ ಜಿಲ್ಲೆಯ ಮೀನುಗಾರ ಮಹಿಳೆಯರು ತೀವೃ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಷ್ಟಿçÃಕೃತ ಬ್ಯಾಂಕುಗಳು ಮೀನುಗಾರ ಮಹಿಳೆಯರಿಗೆ ಸಾಲ ಮರುಪಾವತಿಸುವಂತೆ ಒತ್ತಡ ಹೇರುತ್ತಿದ್ದು, ಸರ್ಕಾರ ಅವರ ಸಮಸ್ಯೆಗಳಿಗೆ ಸ್ಫಂದಿಸಿ ಜಿಲ್ಲೆಯ ಮೀನುಗಾರ ಮಹಿಳೆಯರಿಗೆ ನ್ಯಾಯ ಒದಗಿಸಬೇಕಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಶಾಸಕಿ ಶ್ರೀಮತಿ ರೂಪಾಲಿ ನಾಯ್ಕ, ಶಾಸಕರುಗಳಾದ ದಿನಕರ ಶೆಟ್ಟಿ ಹಾಗೂ ಸುನಿಲ್ ನಾಯ್ಕರವರು ಮೀನುಗಾರಿಕಾ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಒತ್ತಾಯ ಹೇರಿ ಜಿಲ್ಲೆಯ ಮೀನುಗಾರ ಮಹಿಳೆಯರಿಗೆ ಇನ್ನಾದರೂ ನ್ಯಾಯ ದೊರಕಿಸಿ ಸಾಲಮನ್ನಾ ಮಾಡಿ ನ್ಯಾಯ ದೊರಕಿಸಿಕೊಡುವಂತೆ ಆಗ್ರಹ ವ್ಯಕ್ತವಾಗಿದೆ.

ಭಾವನಾ ಟಿವಿಗಾಗಿ ವೆಂಕಟೇಶ ಮೇಸ್ತ ಹೊನ್ನಾವರ

error: