June 22, 2021

Bhavana Tv

Its Your Channel

ದಿನಸಿ, ಹಣ್ಣು-ತರಕಾರಿ ಹಾಗೂ ಹಾಲಿನ ಮಾರಾಟದ ಜೊತೆಗೆ ಮಳೆಗಾಲಕ್ಕೆ ಅಗತ್ಯವಿರುವ ರೈನ್‌ಕೋಟ್, ಛತ್ರಿ ಹಾಗೂ ಚಪ್ಪಲಿ ಮಾರಾಟಕ್ಕೆ ಅನುಮತಿ

ಭಟ್ಕಳ: ಸರ್ಕಾರದ ಹೊಸ ಮಾರ್ಗಸೂಚಿಯಂತೆ ಜಿಲ್ಲಾಧಿಕಾರಿಗಳು ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು ಅದರಂತೆ ಸೋಮವಾರದಿಂದ ಗುರುವಾರದ ತನಕ ಬೆಳಿಗ್ಗೆ ೮ ಗಂಟೆಯಿAದ ೧೨ ಗಂಟೆಯ ತನಕ ದಿನಸಿ, ಹಣ್ಣು-ತರಕಾರಿ ಹಾಗೂ ಹಾಲಿನ ಮಾರಾಟದ ಜೊತೆಗೆ ಮಳೆಗಾಲಕ್ಕೆ ಅಗತ್ಯವಿರುವ ರೈನ್‌ಕೋಟ್, ಛತ್ರಿ ಹಾಗೂ ಚಪ್ಪಲಿ ಮಾರಾಟಕ್ಕೆ ಅನುಮತಿಸಲಾಗಿದೆ ಎಂದು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಹೇಳಿದರು.

ಅವರು ಮಿನಿ ವಿಧಾನ ಸೌಧದಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಉಳಿದಂತೆ ಮಾರ್ಗ ಸೂಚಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದ ಸಹಾಯಕ ಆಯುಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ ಧರಿಸುವುದು ಕಡ್ಡಾಯವಾಗಿದ್ದು ಅಂಗಡಿಕಾರರು ಇದನ್ನು ನಿಭಾಯಿಸಬೇಕು.ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದ್ದು ಅವರು ನಿಯಂತ್ರಿಸುವರು ಎಂದೂ ಹೇಳಿದರು.

error: