June 22, 2021

Bhavana Tv

Its Your Channel

ಪೆಟ್ರೋಲ್ ಎರಿಕೆಯ ವಿರುದ್ದ ಜಾಗಟೆ ಬಾರಿಸಿ ಪ್ರತಿಭಟಿಸಿದ ನ್ಯಾಯವಾದಿ ರವೀಂದ್ರ ನಾಯ್ಕ

ಶಿರಸಿ : ಕೇಂದ್ರ ಮತ್ತು ರಾಜ್ಯ ಸರಕಾರದ ತಪ್ಪಾದ ಆರ್ಥಿಕ ನೀತಿಯಿಂದ ಶಿರಸಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ನೂರು ರೂಪಾಯಿಗೆ ಏರಿಕೆ ಆಗಿರುವ ಹಿನ್ನೆಲೆಯಲ್ಲಿ, ಪ್ರತಿಭಟನಾರ್ಥವಾಗಿ ಸಾಮಾಜಿಕ ಹೋರಾಟಗಾರ ಹಾಗೂ ನ್ಯಾಯವಾದಿ ರವೀಂದ್ರ ನಾಯ್ಕ್ ಮನೆಯಂಗಳದ್ದಲ್ಲಿ ಜಾಗಟೆ ಬಾರಿಸಿ ತೀವ್ರ ವಿರೋಧ ವ್ಯಕ್ತಪಡಿಸಿದರು.

    ಕೋವಿಡ್‌ನ ನೀತಿ ನಿಯಮದಂತೆ ಸಾರ್ವಜನಿಕ ಪ್ರತಿಭಟನೆಗೆ ಅವಕಾಶ ಇಲ್ಲದಿರುವದರಿಂದ, ಅವರು ಇಂದು ಮನೆಯ ಅಂಗಳದಲ್ಲೇ ಸಾಂಕೇತೀಕವಾಗಿ ಪ್ರತಿಭಟನೆ ವ್ಯಕ್ತಪಡಿಸಿ,  ಸರಕಾರ ಅತೀ ಶೀಘ್ರದಲ್ಲಿ ಇಂಧನ ಬೆಲೆ ಇಳಿಕೆಗೆ ಆಗ್ರಹಿಸಿದ್ದರು. 
    ಪೆಟ್ರೋಲ್ ಮೂಲ ಬೆಲೆ ೩೩ ರುಪಾಯಿಗೆ ಕೇಂದ್ರ ಮತ್ತೂ ರಾಜ್ಯ ಸರಕಾರವು ಶೇ ೨೬೦ ರಷ್ಟು ವಿವಿಧ ತೆರಿಗೆ ಹಾಕಿ, ಇಂದು ೧೦೦ರ ಗಡಿ ದಾಟಲು ಕಾರಣವಾಗಿದ್ದು ಇರುತ್ತದೆ ಅಂತ ಅವರು ಹೇಳುತ್ತಾ ಜಗತ್ತಿನಲ್ಲೇ ಅತೀ ಹೆಚ್ಚು ತೆರೆಗೆ ಹಾಕುವ ರಾಷ್ಟ್ರ ಭಾರತವಾಗಿದೆ ಎಂದು ಅವರು ಹೇಳಿದ್ದರು. 
   ತಕ್ಷಣ ಸರಕಾರವು ಹೆಚ್ಚುವರಿ ತೆರಿಗೆಗೆ ಕಡಿವಾಣ ಹಾಕಿ, ಇಂಧನ ಬೆಲೆ ಕಡಿತಗೊಳಿಸಬೇಕೆಂದು ರವೀಂದ್ರ ನಾಯ್ಕ್ ಸಾರ್ವಜನಿಕವಾಗಿ ಸರಕಾರಕ್ಕೆ  ಆಗ್ರಹಿಸಿದ್ದರು.
error: