June 22, 2021

Bhavana Tv

Its Your Channel

ಆಟೋ ಚಾಲಕ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ

ಭಟ್ಕಳ: ತಾಲ್ಲೂಕಿನ ಮಾರುಕೇರಿ ಪಂಚಾಯತ್ ವ್ಯಾಪ್ತಿ ಕಿತ್ರೆ ಯಲ್ಲಿ ಆಟೋ ಚಾಲಕ ಓರ್ವನು ಮನೆ ಹಿಂಬದಿಯಲ್ಲಿ ಇರುವ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಮೃತ ವ್ಯಕ್ತಿ ಕುಳ್ಳ ಸೋಮಯ್ಯ ಗೊಂಡ (೪೮) ಎಂದು ಗುರುತಿಸಲಾಗಿದೆ, ಸಾಲಬಾಧೆಯಿಂದ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದು ಲಾಕ್‌ಡೌನ್ ವೇಳೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದು ದುಡಿಮೆ ಇಲ್ಲದೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಮನನೊಂದು ಆಟೋ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ದೊರೆತಿದೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಮೃತ ವ್ಯಕ್ತಿಯ ಭಾವ ಮೈದ ರಾಮ ಕುಪ್ಪ ಗೊಂಡ ದೂರು ನೀಡಿದ್ದು ದೂರು ದಾಖಲಿಸಿ ಕೊಂಡ ಎಎಸೈ ಕೃಷ್ಣಾನಂದ ನಾಯ್ಕ, ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ.

error: