June 22, 2021

Bhavana Tv

Its Your Channel

೨೦೨೧-೨೨ ನೇ ಸಾಲಿನ ಕುಮಟಾ ತಾಲೂಕ ಪಂಚಾಯತ ಬಜೆಟ್ ಮಂಡನೆ.

ಕುಮಟಾ: ತಾ ಪಂ ಸಭಾಭವನದಲ್ಲಿ ಶುಕ್ರವಾರ ಆಡಳಿತಾಧಿಕಾರಿ ಡಯಟ್ ಪ್ರಾಚಾರ್ಯ ಈಶ್ವರ ನಾಯ್ಕ ಅವರು ೨೦೨೧-೨೨ ನೇ ಸಾಲಿನ ತಾಪಂ ಬಜೆಟ್ ಮಂಡಿಸಿದರು.

೨೦೨೧-೨೨ ನೇ ಸಾಲಿಗಾಗಿ ೮೦೫೮.೯೧ ಲಕ್ಷ ರೂ. ಅನುದಾನ ನಿಗದಿಯಾಗಿದ್ದು ಕಳೆದ ೨೦೨೦-೨೧ ನೇ ಸಾಲಿಗಿಂತ ೧೧೩೯.೧೦ ಲಕ್ಷರೂ. ಕಡಿಮೆ ಅನುದಾನ ಕಲ್ಪಿಸಲಾಗಿದೆ. ತಾಲೂಕು ಪಂಚಾಯಿತಿ ಹಾಗೂ ಅಧೀನ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ವೇತನಾಂಶಕ್ಕೆ ೬೭೮೩.೦೨ ಲಕ್ಷರೂ ಅನುದಾನ ನಿಗದಿಸಲಾಗಿದ್ದು, ವೇತನೇತರ ವೆಚ್ಚಕ್ಕಾಗಿ ೧೨೭೫.೮೯ ಲಕ್ಷ ರೂ ನಿಗದಿಸಲಾಗಿದೆ. ಬಹುಶಃ ಕರೊನಾ ಸಂಕಟದ ನಿರ್ವಹಣೆ, ಆರ್ಥಿಕ ವ್ಯವಸ್ಥೆಯನ್ನು ಪರಿಗಣಿಸಿ ಅನುದಾನದಲ್ಲಿ ಕಳೆದ ವರ್ಷಕ್ಕಿಂತ ಕಡಿಮೆಯಾಗಿರಬಹುದು ಎಂದರು.
ವೈದ್ಯಕೀಯ ಹಾಗೂ ಜನಾರೋಗ್ಯ ಇಲಾಖೆಗೆ ೬೧.೭೭ ಲಕ್ಷರೂ, ಶಿಶು ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ೧೧೪೮.೪೩ ಲಕ್ಷರೂ, ಶಿಕ್ಷಣ ಇಲಾಖೆಗೆ ತಾಪಂನ ಒಟ್ಟೂ ಅನುದಾನದಲ್ಲಿ ೭೭.೨೩% ರಷ್ಟು ಅನುದಾನ ಒದಗಿಸಲಾಗಿದ್ದು ೬೨೨೪.೧೯ ಲಕ್ಷರೂ ನಿಗದಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ ೮೩.೦೪ ಲಕ್ಷರೂ, ಪಶುಸಂಗೋಪನಾ ಇಲಾಖೆಗೆ ೧೨೦.೫೯ ಲಕ್ಷರೂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ೧.೮೭ ಲಕ್ಷರೂ, ಕೃಷಿ ಇಲಾಖೆಗೆ ೪೫.೧೫ ಲಕ್ಷರೂ, ತಾಲೂಕು ಪಂಚಾಯಿತಿಗೆ ೫೧೩.೧ ಲಕ್ಷರೂ ಒದಗಿಸಿದ್ದು ತೋಟಗಾರಿಕೆ ಇಲಾಖೆಗೆ ಯಾವುದೇ ಅನುದಾನ ನಿಗದಿಸಿಲ್ಲ ಎಂದು ವಿವರಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗಣೇಶ ಪಟಗಾರ ಮಾತನಾಡಿ, ಮಾರ್ಚ ತಿಂಗಳಿAದ ನಮ್ಮ ಇಲಾಖೆಯಲ್ಲಿ ಸಂಬಳವಾಗಿಲ್ಲ ಎಂದು ಸಭೆಯ ಗಮನ ಸೆಳೆದರು.
ಇಓ ಸಿ.ಟಿ.ನಾಯ್ಕ ಮಾತನಾಡಿ, ಇಲಾಖೆಗಳು ತಮಗೆ ವೇತನಾಂಶದಲ್ಲಿ ಅಥವ ವಾರ್ಷಿಕ ಅನುದಾನ ಕೊರತೆಯಾಗಿದ್ದಲ್ಲಿ ತಾಪಂ ಅಕೌಂಟ್ ವಿಭಾಗಕ್ಕೆ ವರದಿ ಸಲ್ಲಿಸಬೇಕು. ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮಕ್ಕೆ ಪರಿಶೀಲಿಸಲಾಗುವುದು ಎಂದರು.
ಜಿಪA ಎಇಇ ರಾಮದಾಸ ಗುನಗಿ, ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ಬಿಇಓ ರಾಜೇಂದ್ರ ಭಟ್, ವಿವಿಧ ಇಲಾಖಾ ಅನುಷ್ಠಾನಾಧಿಕಾರಿಗಳಾದ ಭಾರತಿ ಆಚಾರ್ಯ, ಚೇತನ ನಾಯ್ಕ, ಆಯುಷ್ ವೈದ್ಯೆ ಡಾ. ಭಾರತಿ ಪಟಗಾರ ಇನ್ನಿತರರು ಇದ್ದರು.
ವರದಿ ; ನಟರಾಜ ಗದ್ದೆಮನೆ,ಕುಮಟಾ

error: