June 22, 2021

Bhavana Tv

Its Your Channel

ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್‌ಇಂಡಿಯಾ ನಾರ್ಥಕೆನರಾ ಬ್ರಾ0ಚ್, ಕುಮಟಾ ವತಿಯಿಂದ ಪರಿಸರ ದಿನಾಚರಣೆ.

ಕುಮಟಾ ; ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಗೆ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ|| ಅಶೋಕ ಭಟ್ ಹಳಕಾರರವರು ಚಾಲನೆ ನೀಡಿದರು.
ಉಪಾಧ್ಯಕ್ಷರಾದ ವಿ. ಆಯ್ ಹೆಗಡೆ, ಕಾರ್ಯದರ್ಶಿ ಡಾ|| ಪ್ರೀತಿ ಭಂಡರ‍್ಕರ್, ಕೋಶಾಧಿಕಾರಿ ಬೀರಣ್ಣ ನಾಯಕ ಬ್ರಾö್ಯಂಚ್ ಮೆನೆಜರ್ ಶ್ರೀಮತಿ ಸಂತಾನ್ ಲೂಯಿಸ್ ಹಾಗೂ ಸಿಬ್ಬಂದಿ ವರ್ಗದವರು ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಗೆ ಪ್ರೋತ್ಸಾಹಿಸಿದರು.
ಕಾರ್ಯದರ್ಶಿ ಡಾ|| ಪ್ರೀತಿ ಭಂಡರ‍್ಕರ್‌ರವರು ವನಮಹೋತ್ಸವ ಹಾಗೂ ಕೃಷಿಕರ ದಿನಾಚರಣೆಯ ಶುಭಾಷಯ ತಿಳಿಸುವದರೊಂದಿಗೆ ಪರಿಸರ ಸಂರಕ್ಷಣೆಯ ಅವಶ್ಯಕತೆಯ ಕುರಿತು ಮಾತನಾಡಿದರು.
ಅಧ್ಯಕ್ಷರಾದ ಡಾ|| ಅಶೋಕ ಭಟ್ ಹಳಕಾರರವರು ಪರಿಸರದ ವೈಪರಿತ್ಯವನ್ನು ತಡೆಯಲು ಕಾಡು ಬೆಳೆಸಿ ನಾಡು ಉಳಿಸಿ ಹಾಗೂ ಪರಿಸರರಕ್ಷಣೆಯ ಮಹತ್ವದ ಕುರಿತು ಮಾತನಾಡಿದರು.

error: