April 25, 2024

Bhavana Tv

Its Your Channel

“ಪೀಪಲ್ಸ್ ಚಾಯ್ಸ್” ಪ್ರಶಸ್ತಿ ಪಡೆದ ಮುರ್ಡೆಶ್ವರದ ಶಿವನ ಮೂರ್ತಿ

ಮುರ್ಡೆಶ್ವರ: ಆರ್.ಎನ್. ಶೆಟ್ಟಿ ಅವರ ಕನಸಾದ ಮುರ್ಡೆಶ್ವರದಲ್ಲಿ ನಿರ್ಮಾಣಗೊಂಡಿದ್ದ ಕುಳಿತ ಭಂಗಿಯ ೧೨೩ ಎತ್ತರದ ಜಗತ್ತಿನ ಎರಡನೇ ಅತೀ ಎತ್ತರದ ಶಿವನ ಮೂರ್ತಿ. ಜಗತ್ತಿನ ಎರಡನೇ ಅತೀ ಎತ್ತರದ ಶಿವನ ಮೂರ್ತಿ ಎಂಬ ಖ್ಯಾತಿಯ ಮುರ್ಡೆಶ್ವರದ ಶಿವನ ಮೂರ್ತಿ ಅಮೇರಿಕಾದ ಪ್ರಖ್ಯಾತ ಅವಾರ್ಡ್ ಶೋ ಆಗಿರುವ “ಪೀಪಲ್ಸ್ ಚಾಯ್ಸ್” ಪ್ರಶಸ್ತಿಯನ್ನು ಗೆದ್ದು ಹೆಮ್ಮೆ ಮೂಡಿಸಿದೆ.
ಈ ಗ್ಲೋಬಲ್ ಫಿಲಿಫ್ಸ್ನಿಂದ ಆಯೋಜಿಸಲ್ಲಟ್ಟ ಈ ಸ್ಪರ್ಧೆಯಲ್ಲಿ ಜಗತ್ತಿನ ಇತರೆ ೨೪ ಪ್ರಾಜೆಕ್ಟ್ಗಳ ವಿರುದ್ಧ ಸ್ಪರ್ಧಿಸಿ ಮುರ್ಡೆಶ್ವರದ ಶಿವನ ಮೂರ್ತಿ “ಪೀಪಲ್ಸ್ ಚಾಯ್ಸ್ ಪ್ರಶಸ್ತಿ”ಯನ್ನು ಗೆದ್ದುಕೊಂಡಿದೆ.
ಸ್ಪರ್ಧೆಯಲ್ಲಿ ಒಟ್ಟು ೬೮೭೧ ಜನರು ಮತ ಚಲಾಯಿಸಿದ್ದು ೨೪ ಸ್ಪರ್ಧಿಗಳ ನಡುವೆ ಮುರ್ಡೆಶ್ವರದ ಶಿವನ ಮೂರ್ತಿ ೨೫೦೦ ಮತಗಳನ್ನು ಪಡೆಯುವ ಮೂಲಕ ವಿಜಯಿ ಆಗಿ ಈ ವಿದ್ಯುದಲಂಕಾರ ಮಾಡಿದ ಬೆಂಗಳೂರಿನ ಸಂಚನಾ ಗುರು ಡಿಸ್ಟಿçಬ್ಯೂಟರ್ಸ್ಗೆ ಈ ವರ್ಷದ ಪ್ರಶಸ್ತಿ ಘೋಷಿಸಲಾಗಿದೆ. ಪೀಪಲ್ಸ್ ಚಾಯ್ಸ್ ಅವಾರ್ಡ್ ಅಮೇರಿಕಾದ ಅವಾರ್ಡ್ ಶೋ ಆಗಿದ್ದು .೧೯೭೫ ರಿಂದ ಪ್ರತಿವರ್ಷ ನಡೆಯುತ್ತಿದೆ. ವಿವಿಧ ವಿಭಾಗಗಳಲ್ಲಿ ಪೀಪಲ್ಸ್ ಚಾಯ್ಸ್ ಪ್ರಶಸ್ತಿ ನೀಡಲಾಗುತ್ತಿದೆ. ಈ ಸ್ಪರ್ಧೆಗೆ ೨೦೦೫ ರಿಂದ ಆನ್ ಲೈನ್ ವೋಟಿಂಗ್ ನಡೆಸಲಾಗುತ್ತಿದೆ.

error: