March 28, 2024

Bhavana Tv

Its Your Channel

ಅರಣ್ಯ ಅಧಿಕಾರಿಗಳ ವಿರುದ್ಧ, ತೀವ್ರ ಆಕ್ರೋಶ: ಸಮಸ್ಯೆ ಬಗೆಹರಿಸಲು ಒಂದು ತಿಂಗಳ ಗಡುವು

ಮುಂಡಗೋಡ: ಅರಣ್ಯವಾಸಿಗಳ ಸಮಸ್ಯೆಗಳಿಗೆ ಸಮರ್ಪಕ ಸ್ವಂದನೆ ತೋರಿಸದ ಸ್ಥಳೀಯ ಅಧಿಕಾರಿಗಳೊಂದಿಗೆ ತೀವ್ರ ಚರ್ಚೆ, ಆಕ್ರೋಶ ಭರಿತ ವಾಗ್ವಾದ, ಅಸಮರ್ಪಕ ಉತ್ತರಕ್ಕೆ ಮೇಲಧೀಕಾರಿಗಳಿಗೆ ಆಗಮಿಸುವಿಕೆಗೆ ಒತ್ತಾಯ, ಧರಣಿ, ಪ್ರತಿಭಟನೆ ಮುಂತಾದ ವಿವಿಧ ಮಜಲುಗಳ ಘಟನೆಗಳಿಂದ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ಭರಿತ ಉಗ್ರರೂಪದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಘಟಣೆ ಇಂದು ಮುಂಡಗೋಡ ಅರಣ್ಯ ಇಲಾಖೆಯ ಆವರಣದಲ್ಲಿ ಜರುಗಿತು

ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಇಂದು ಮುಂಡಗೋಡ ಅರಣ್ಯ ಇಲಾಖೆಯ ಕಛೇರಿಯ ಆವರಣದಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಅರಣ್ಯಾಧಿಕಾರಿಗಳಾದ ಎಸ್‌ಎಮ್ ವಾಲಿ(ಎಸಿಎಫ್), ಸುರೇಶ ಕಲ್ಲದ್(ಆರ್‌ಎಫ್‌ಓ) ಮತ್ತು ಅಜಯ್ ನಾಯ್ಕ ಅವರ ಸಮಕ್ಷಮದಲ್ಲಿ ಜರುಗಿತ್ತು.
ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯಿಂದ ಅಸಮರ್ಪಕ ಕಾರ್ಯ, ಅರಣ್ಯವಾಸಿಗಳಿಗೆ ಕಿರುಕುಳ, ವನ್ಯಜೀವಿಗಳಿಂದ ಬೆಳೆ ನಷ್ಟ, ಬೆಳೆ ನಷ್ಟಕ್ಕೆ ಪರಿಹಾರ ನೀಡದಿರುವುದು, ಅಸಮರ್ಪಕ ಜಿಪಿಎಸ್ ಕಾರ್ಯ, ಫೋಲೀಸ್ ಇಲಾಖಾ ಮೂಲಕ ಅರಣ್ಯವಾಸಿಗಳಿಗೆ ದೌರ್ಜನ್ಯ, ಅರಣ್ಯ ಇಲಾಖೆಯಿಂದ ಅರಣ್ಯವಾಸಿಗಳ ಮೇಲೆ ಹಲ್ಲೆಯು ಮುಂತಾದ ಸಮಸ್ಯೆಗಳನ್ನು ಇಂದು ಜರುಗಿದ ಅದಾಲತಗಳಲ್ಲಿ ತಾಲೂಕಿನ ಅರಣ್ಯವಾಸಿಗಳ ಸಮಸ್ಯೆಗಳ ಚಿತ್ರವನ್ನು ತಾಲೂಕಾದ್ಯಂತ ಆಗಮಿಸಿದ ಧುರೀಣರು ಪ್ರಸ್ತುತಪಡಿಸಿದ್ದರು.

ಉತ್ತರಿಸಲಾಗದೇ, ಅರಣ್ಯಾಧಿಕಾರಿಗಳು ತತ್ತರ: ಅರಣ್ಯವಾಸಿಗಳ ಸಮಸ್ಯೆಗಳಿಗೆ ಅರಣ್ಯಾಧಿಕಾರಿಗಳು ಉತ್ತರಿಸಲಾಗದೇ, ನೀಡಿದ ಉತ್ತರವೂ ಸಮರ್ಪಕವಿಲ್ಲದೇ, ಅರಣ್ಯವಾಸಿಗಳ ಪ್ರಶ್ನೆಗಳ ಮೇಲೆ ಪ್ರಶ್ನೆಗಳಿಗೆ ಅರಣ್ಯಾಧಿಕಾರಿಗಳು ತತ್ತರಿಸಿದ್ದು ವಿಶೇಷವಾಗಿತ್ತು. ಅರಣ್ಯವಾಸಿಗಳ ಬೇಡಿಕೆಗಳನ್ನು ಬಗೆಹರಿಸಲು ಒಂದು ತಿಂಗಳ ಕಾಲಾವಕಾಶ ನೀಡಿದ್ದು ಸದ್ರಿ ಅವದಿಯಲ್ಲಿ ಸಮಸ್ಯೆ ಬಗೆಹರಿಯದ್ದಿದ್ದಲ್ಲಿ ಮುಂದಿನ ತಿಂಗಳು ತೀವ್ರ ತರದ ಹೋರಾಟ ನಡೆಸಲು ತೀರ್ಮಾನಿಸಲಾಯಿತು.

ಅದಾಲತ್‌ನಲ್ಲಿ ತಾಲೂಕ ಅಧ್ಯಕ್ಷ ಶಿವಾನಂದ ಜೋಗಿ, ಶಬ್ಬೀರ್ ಚಪಾತಿ, ವಿರಭದ್ರ ಗುಳಗಿ, ಸೋಮಸಿಂಗ ಸಿಗ್ಗಟ್ಟಿ, ಬಾಬಣ್ಣ ಆಣವೇಕರ್ ಇಂದೂರ, ನಾರಾಯಣ ಶಿವಣ್ಣ, ಗೊದು ಗೌಳಿ, ಠಿಕ್ರು ಗೌಳೀ, ಮಾಬುಬಸಾಬ ಮಿಶ್ರಿ ಕೋಟಿ ಮುಂತಾದವರು ಉಪಸ್ಥಿತರಿದ್ದರು.

error: