July 11, 2024

Bhavana Tv

Its Your Channel

ಮಾ.4ಕ್ಕೆ ‘ಹಣತೆ’ ಜೊಯಿಡಾ (ಸೂಪಾ) ತಾಲೂಕು ಘಟಕ ಉದ್ಘಾಟನೆ

ಜೊಯಿಡಾ : ‘ಹಣತೆ’ ಸಾಹಿತ್ಯಕ ಸಾಂಸ್ಕೃತಿಕ ಜಗಲಿ ಜೊಯಿಡಾ (ಸೂಪಾ) ತಾಲೂಕು ಘಟಕದ ನೂತನ ಕಾರ್ಯಕಾರಿ ಸಮಿತಿಯ ಉದ್ಘಾಟನೆ ಮಾ. 4 ಶನಿವಾರ ಮಧ್ಯಾಹ್ನ 3.30 ತಾಲೂಕಿನ ರಾಮನಗರದ ಅಂಬೇಡ್ಕರ್‌ಸ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ಹಣತೆ’ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ವಹಿಸಲಿದ್ದು ಉದ್ಘಾಟನೆಯನ್ನು ಜೊಯಿಡಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ಶೈಲಜಾ ಎಚ್.ಕೆ. ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಮನಗರ ಬಿಜಿವಿಎಸ್ ಕಾಲೇಜು ಪ್ರಾಂಶುಪಾಲ ಎಂ.ಎಚ್.ನಾಯಕ್, ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ವಿ.ರಾಣೆ ಪಾಲ್ಗೊಳ್ಳಲಿದ್ದಾರೆ.
ಹಣತೆ ಜಿಲ್ಲಾ ಪ್ರಧಾನ ಸಂಚಾಲಕ ಎನ್. ಜಯಚಂದ್ರನ್, ಹಣತೆ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಗಡೆಪ್ಪನವರ್ ಗೌರವ ಉಪಸ್ಥಿತರಿರುವರು ಎಂದು ‘ಹಣತೆ’ ಜೊಯಿಡಾ (ಸೂಪಾ) ತಾಲೂಕು ಘಟಕದ ಅಧ್ಯಕ್ಷ ಎಂಟನಿ ಜಾನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: