March 29, 2024

Bhavana Tv

Its Your Channel

ಭಟ್ಕಳ ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯರನ್ನು ಬಿ.ಜೆ.ಪಿ. ಭಟ್ಕಳ ಮಂಡಳದ ವತಿಯಿಂದ ಗೌರವಿಸಲಾಯಿತು.

ಭಟ್ಕಳ ; ತಾಲೂಕಿನಲ್ಲಿ ಕೋವಿಡ್-೧೯ ಸಂದರ್ಭದಲ್ಲಿ ಅತ್ಯಂತ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರನ್ನು ಬಿ.ಜೆ.ಪಿ. ಭಟ್ಕಳ ಮಂಡಳದ ವತಿಯಿಂದ ರಾಜ್ಯದ ಕಾರ್ಮಿಕ ಹಾಗೂ ಸಕ್ಕರೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರ ಪರವಾಗಿ ಗೌರವಿಸಲಾಯಿತು.

ಬಿ.ಜೆ.ಪಿ. ಮಂಡಳದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಡಳದ ಅಧ್ಯಕ್ಷ ಸುಬ್ರಾಯ ದೇವಡಿಗ ಆಶಾ ಕಾರ್ಯಕರ್ತರು ತಮ್ಮ ಜೀವನದ ಹಂಗು ತೊರೆದು ಕೋವಿಡ್ ವಿರುದ್ದದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತಮ ಕಾರ್ಯನಿರ್ವಹಿಸಿದ ಅವರ ಕಾರ್ಯವನ್ನು ಗೌರವಿಸುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತರನ್ನು ಗೌರವಿಸಿ ಅವರಿಗೆ ತಲಾ ಎರಡು ಸೀರೆಗಳನ್ನು ಕೊಡುವ ಮೂಲಕ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ ಮಾತನಾಡಿ ಆಶಾ ಕಾರ್ಯಕರ್ತರು ಕೋವಿಡ್-೧೯ ಸಂದರ್ಭದಲ್ಲಿ ನಿಷ್ಟೆಯಿಂದ ತಮ್ಮ ಕರ್ತವ್ಯವನ್ನು ಮಾಡುವ ಮೂಲಕ ಕೊರೊನಾ ತಡೆಗಟ್ಟಲು ಸಹಕಾರ ನೀಡಿದರು. ಇವರ ಸೇವಾ ಮನೋಭಾವನೆ ಎಲ್ಲರಿಗೂ ಮಾದರಿಯಾಗ ಬೇಕು ಎಂದರು.
ಮಾತನಾಡಿದ ಬಿ.ಜೆ.ಪಿ. ಪ್ರಮುಖ ಕೃಷ್ಣಾ ನಾಯ್ಕ ಆಸರಕೇರಿ ಅವರು ಜಿಲ್ಲಾ ಉಸ್ತುವಾರಿ ಸಚಿವರು ಆಶಾ ಕಾರ್ಯಕರ್ತೆಯರನ್ನು ಗೌರವಿಸುವ ಕಾರ್ಯವನ್ನು ಮಾಡಿದ್ದಾರೆ. ನಿಮ್ಮ ಕಾರ್ಯಕ್ಕೆ ಬೆಲೆ ಕಟ್ಟಲಾಗದು, ಆದರೆ ಆ ದಿಶೆಯಲ್ಲಿ ನಿಮಗೆ ಗೌರವವನ್ನು ಸಮರ್ಪಿಸುತ್ತಿದ್ದೇವೆ ಎಂದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶಿವಾನಿ ಶಾಂತರಾಮ, ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಗೊಂಡ ಮಾತನಾಡಿದರು. ಆಶಾ ಕಾರ್ಯಕರ್ತರಾದ ಮಂದಾಕಿನಿ ಹೆಬ್ಬಾರ ಮತ್ತು ಗೀತಾ ನಾಯ್ಕ ಮಾತನಾಡಿ ಭಟ್ಕಳದಲ್ಲಿ ಕೋವಿಡ್ ಲಾಕಡೌನ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು ಮನೆಮನೆಗೆ ಆರೋಗ್ಯ ಸಮೀಕ್ಷೆ, ಮಾಹಿತಿ ಪಡೆಯಲು ಹೋದ ಸಂದರ್ಭದಲ್ಲಿ ಅನುಭವಿಸಿದ ಕಷ್ಟದ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ರಾಜೇಶ ನಾಯ್ಕ, ಆಶಾ ಕಾರ್ಯಕರ್ತರ ಮೇಲ್ವಿಚಾರಕಿ ಶೋಭಾ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ ನಾಯ್ಕ, ಲಕ್ಷ್ಮೀ ನಾಯ್ಕ, ಯುವ ಮೋರ್ಚಾ ತಾಲೂಕಾ ಅಧ್ಯಕ್ಷ ಮಹೇಂದ್ರ ನಾಯ್ಕ, ಮಹಿಳಾ ಮೋರ್ಚಾದ ಶ್ರೇಯಾ ಮಹಾಲೆ ಮುಂತಾದವರಿದ್ದರು. ಬಿಜೆಪಿ ಮಂಡಳದ ಪ್ರಧಾನ ಕಾರ್ಯದರ್ಶಿ ಮೋಹನ ನಾಯ್ಕ ಸ್ವಾಗತಿಸಿ ವಂದಿಸಿದರೆ, ಇನ್ನೋರ್ವ ಪ್ರಧಾನಕಾರ್ಯದರ್ಶಿ ಭಾಸ್ಕರ ದೈಮನೆ ನಿರೂಪಿಸಿದರು.

error: