April 18, 2024

Bhavana Tv

Its Your Channel

ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ವಿವಿಧ ಹಗರಣಗಳಲ್ಲಿ ಮುಳುಗಿದೆ. ಹಲವು ಕಾನೂನುಗಳನ್ನು ಜಾರಿಗೆ ತಂದಿರುವದನ್ನು ವಿರೋಧಿಸಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ.

ಭಟ್ಕಳ: ಮೊದಲು ಮಾಜಿಶಾಸಕ ಮಂಕಾಳ ವೈದ್ಯ ಇವರ ಗೃಹ ಕಚೇರಿಯಲ್ಲಿ ದೇವರಾಜು ಅರಸು ದಿನಾಚರಣೆ, ಹಾಗೂ ರಾಜೀವ ಗಾಂಧಿ ಜನ್ಮದಿನೋತ್ಸವ ಅಂಗವಾಗಿ ಸರಳವಾಗಿ ಕಾರ್ಯಕ್ರಮ ಆಚರಿಸಲಾಯಿತು. ನಂತರ ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿದರು.
ಭಟ್ಕಳ ತಹಸೀಲ್ದಾರರಿಗೆ ನೀಡಿದ ಮನವಿಯಲ್ಲಿ ರೈತ ವಿರೋದಿ ಭೂ ಸುಧಾರಣ ಕಾಯ್ದೆ, ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ ಕಾರ್ಮಿಕ ಕಾಯ್ದೆ ತಿದ್ದುಪಡಿ ಸೇರಿ ಪ್ರಜೆಗಳಿಗೆ ಮಾರಕವಾಗಿರುವ ವಿವಿಧ ತಿದ್ದುಪಡಿಗಳನ್ನು ಹಿಂಪಡೆಯಬೇಕು. ರಾಜ್ಯದಲ್ಲಿ ಅತಿವೃಷ್ಟಿಯಿಂದ ಆಗಿರುವ ತೀವ್ರ ಹಾನಿಗೆ ಪರಿಹಾರ ಒದಗಿಸಲು ವಿಫಲವಾಗಿರುವ ಸರ್ಕಾರದ ನಿಲುವನ್ನು ಖಂಡಿಸಿ, ಕರೊನಾ ನಿಯಂತ್ರಣ ಸಂದರ್ಬದಲ್ಲಿ ನಡೆದ ವ್ಯಾಪಕ ಬ್ರಷ್ಟಾಚಾರ ಪ್ರಕರಣವನ್ನು ಉಚ್ಚನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸುವದು ಅನಿವಾರ್ಯ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಬದಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಅಲ್ಬರ್ಟ ಡೀಕೊಸ್ತಾ, ತಾ.ಪಂ ಅಧ್ಯಕ್ಷ ಈಶ್ವರ ನಾಯ್ಕ, ವಿಷ್ಣು ದೇವಾಡಿಗ, ಮಹಾಬಲೇಶ್ವರ ನಾಯ್ಕ, ಮಾಜಿ ಬ್ಲಾಕ್ ಅಧ್ಯಕ್ಷ ವಿಠಲ್ ನಾಯ್ಕ, ರಮೇಶ ಮೊಗೇರ ಸೇರಿ ಇತರರು ಇದ್ದರು.

error: