April 19, 2024

Bhavana Tv

Its Your Channel

ದಿವಂಗತ ದೇವರಾಜ ಅರಸು ಅವರ ೧೦೫ನೆಯ ಹುಟ್ಟುಹಬ್ಬದ ಸವಿನೆನಪಿಗಾಗಿ ದಿ.ಡಿ ದೇವರಾಜ ಅರಸು ವಿಚಾರ ವೇದಿಕೆ ಹೊನ್ನಾವರ ಇವರಿಂದ ಗಣ್ಯರಿಗೆ ಸನ್ಮಾನ

ಹೊನ್ನಾವರ ; ಕಾರ್ಯಕ್ರಮವನ್ನು ನಿವೃತ್ತ ಸಹಯಕ ಅಭಿಯಂತರಾದ ಎಮ್ ವಿ ಹೆಗಡೆ ವರು ಉದ್ಘಾಟಸಿ ಮಾತನಾಡಿ ದಿವಂಗತ ದೇವರಾಜ ಅರಸುರವರ ಸಾಧನೆಯ ಕುರಿತು ವಿವರಿಸಿದರು. ಮೈಸೂರಿನ ದಿವಂಗತ ದೇವರಾಜ ಅರಸು ಎಲ್ಲಿ ಹೆಗ್ಗಾರ ಅನಂತ ನಾಯ್ಕರೆಲ್ಲಿ. ಹೊನ್ನಾವರ ತಾಲೂಕಿನ ಹಳ್ಳಿಯವರಾದರೂ ವಿಚಾರ ವೇದಿಕೆಯ ಅಧ್ಯಕ್ಷರಾಗಿ ದೂರದ ಮೈಸೂರಿನ ದಿವಂಗತ ದೇವರಾಜ ಅರಸುರವರ ಸಾಧನೆಗಳ ಕುರಿತು ವಿವರವಾಗಿ ತಿಳಿದುಕೊಂಡವರಾಗಿದ್ದಾರೆ. ೧೯೯೧ ನೇ ಇಸ್ವಿಯಿಂದ ಇಲ್ಲಿಯವರೆಗೆ ಪ್ರತಿವರ್ಷವೂ ದಿವಂಗತ ದೇವರಾಜ ಅರಸುರವರನ್ನು ಸ್ಮರಿಸುತ್ತಾ ಇಂತಹ ಉತ್ತಮ ಕಾರ್ಯ ಮಾಡುತ್ತಿರುವದು ಶ್ಲಾಘನೀಯ ಎಂದರು.

ದಿವಂಗತ ದೇವರಾಜ ಅರಸು ವಿಚಾರ ವೇದಿಕೆಯಿಂದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಸಹಾಯಕ ಅಭಿಯಂತರಾದ ಎಮ್ ವಿ ಹೆಗಡೆ, ಹಿರಿಯ ರಾಜಕಾರಣಿ ರಾಮನಾಥ ನಾಯ್ಕ, ಭಾವನ ಟಿವಿಯ ಪ್ರಧಾನ ಸಂಪಾದಕರಾದ ಭವನಿಶಂಕರ ನಾಯ್ಕ ಮತ್ತು ವೀರ ಯೋಧ ಗಣಪತಿ ಗೌಡ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗೌರವ ಸ್ಮೀಕರಿಸಿದ ಹಿರಿಯ ರಾಜಕಾರಣಿ ರಾಮನಾಥ ನಾಯ್ಕ ಮಾತನಾಡಿ ತಮ್ಮ ಜೀವನ ನಡೆದು ಬಂದ ದಾರಿಯನ್ನು ವಿವರಿಸಿ ಶುಭ ಕೋರಿದರು. ಸನ್ಮಾನ ಸ್ಮೀಕರಿಸಿದ ವೀರ ಯೋಧರಾದ ಗಣಪತಿ ಗೌಡ ಬೇರಂಕಿ ಇವರು ತಮ್ಮ ವೃತ್ತಿ ಜೀವನದ ಕುರಿತು ಮಾತನಾಡಿದರು.
ಸನ್ಮಾನಿತರಾದ ಭಾವನಾ ಟಿವಿ ಪ್ರಧಾನ ಸಂಪಾದಕರಾದ ಭವಾನಿಶಂಕರ ನಾಯ್ಕ ಮಾತನಾಡಿ ಅರಸು ವೇಧಿಕೆಯ ಕಾರ್ಯವನ್ನು ಶ್ಲಾಗಿಸಿದರು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕರು ಹಾಗೂ ರೋಟರಿಯ ಮಾಜಿ ಅಧ್ಯಕ್ಷರಾದ ವಿ ಜಿ ನಾಯ್ಕ ವಹಿಸಿ ಅರಸು ಹಾಗೂ ವೇಧಿಕೆಯ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷರಾದ ಅನಂತ ನಾಯ್ಕ ಹೆಗ್ಗಾರ ಎಲ್ಲರನ್ನು ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡುತ್ತಾ ದಿವಂಗತ ದೇವರಾಜ ಅರಸು ವಿಚಾರ ವೇದಿಕೆಯ ಇಲ್ಲಿಯವರೆಗಿನ ಕಾರ್ಯಚಟುವಟಿಕೆಗಳನ್ನು ತಿಳಿಸಿದರು. ದಿವಂಗತ ದೇವರಾಜ ಅರಸುರವರ ದೀಮಂತ ವ್ಯಕ್ತಿತ್ವ ಹಾಗೂ ಅವರ ಕೊಡುಗೆಗಳ ಬಗ್ಗೆ ಮಾತನಾಡಿದರು.
ಉಪನ್ಯಾಸಕ ಶಂಕರಗೌಡ ಗುಣವಂತೆ ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು. ಸಭಯಲ್ಲಿ ಹಲವರು ಗಣ್ಯರು ಮತ್ತು ದಿವಂಗತ ದೇವರಾಜ ಅರಸು ವಿಚಾರ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.

error: