April 22, 2021

Bhavana Tv

Its Your Channel

ಡಾ. ನಾಗರಾಜ ಭಟ್ಟ ಹಾಗೂ ಡಾ. ಸಚಿನ್ ಭಟ್ಟ ರಾಷ್ಟ್ರಮಟ್ಟದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಭಟ್ಕಳ: ಡಾ. ನಾಗರಾಜ ಭಟ್ಟ ಹಾಗೂ ಡಾ. ಸಚಿನ್ ಭಟ್ಟ ಇವರು ಇಸ್ರೋ ಐ.ಐ.ಟಿ. ಬಾಂಬೆ-ಏಐಸಿಟಿಇ ಜಂಟಿ ಸಹಭಾಗಿತ್ವದಲ್ಲಿ ಆಯೋಜನೆಗೊಂಡ ಮ್ಯಾಪಥಾನ್ ೨೦೨೧ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಪ್ರಸ್ತುತ ಉಡುಪಿ ಬಂಟಕಲ್ಲಿನಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ಭಟ್ಟ ಕಲ್ಲರೆಮನೆ ಹಾಗೂ ಎಲೆಕ್ಟಾçನಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಸಚಿನ್ ಭಟ್ಟ ಅಳ್ವೇಕೋಡಿ ಇವರ ತಂಡವೇ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಇವರು ಉತ್ತರ ಕನ್ನಡ ಜಿಲ್ಲೆಯ ಕುಮಟಾದವರಾಗಿದ್ದಾರೆ. ಇವರ ತಂಡದ ಸಮುದ್ರ ಸೀಮಾ: ಕೋಸ್ಟಲ್ ಕರ್ನಾಟಕ ಶೋರ್‌ಲೈನ್ ಡೈನಮಿಕ್ಸ್ ಎಂಬ ಸಂಶೋಧನೆಗೆ ಈ ಪುರಸ್ಕಾರ ಪ್ರಾಪ್ತವಾಗಿದೆ.
ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ನಡೆಸಲ್ಪಟ್ಟ ಸ್ಪರ್ಧೆಯಲ್ಲಿ ದೇಶಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚಿನ ತಂಡಗಳು ಭಾಗವಹಿಸಿದ್ದವು. ಕರ್ನಾಟಕದ ಕರಾವಳಿ ಹಾಗೂ ಅದರ ನದಿಮುಖಜ ಭೂಮಿಯಲ್ಲಿ ಕಳೆದ ನೂರು ವರ್ಷಗಳಲ್ಲಿ ಉಂಟಾದ ಬದಲಾವಣೆಯ ಬಗೆಗಿನ ಅಧ್ಯಯನವು ಏ.ಐ.ಸಿ.ಟಿ.ಯ ನಿರ್ದೇಶಕ ಡಾ. ಅನಿಲ್ ಸಹಸ್ರಬುದ್ಧೆಯವರಿಂದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಶ್ಲಾಘಿಸಲ್ಪಟ್ಟಿತು. ಭಾರತೀಯ ದೂರಸಂವೇದಿ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳುವ ಮುಕ್ತ ನಕಾಶೆ ತಂತ್ರಾoಶವನ್ನು ಬಳಸಿ ಭಾರತೀಯ ಪ್ರದೇಶಗಳಿಗೆ ವಿಷಯಾಧಾರಿತ ನಕ್ಷೆಯನ್ನು ತಯಾರಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿತ್ತು. ಭಾರತವನ್ನು ಜಾಗತಿಕ ಭೌಗೋಳಿಕ ಮಾಹಿತಿ ವ್ಯವಸ್ಥೆಯ ಕೇಂದ್ರವನ್ನಾಗಿಸುವ ಹಾಗೂ ಬಾಹ್ಯಾಕಾಶ ಅನ್ವಯಗಳಲ್ಲಿ ದೇಶದ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ದಿಸೆಯಲ್ಲಿ ಇದು ಸಕ್ರಿಯ ವೇದಿಕೆಯಾಗಿದೆ. ಇವರ ಸಾಧನೆಗೆ ಶ್ರೀ ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದೆ.

error: