April 22, 2021

Bhavana Tv

Its Your Channel

ಮಾರುತಿ ಸ್ವೀಪ್ಟ ಹಾಗೂ ಸೈಕಲ್ ನಡುವೆ ಅಪಘಾತ, ಸೈಕಲ್ ಸವಾರ ಸಾವು

ಭಟ್ಕಳ ; ಜಾಲಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಹನಿಫಾಬಾದ್ ಕ್ರಾಸ್ ಬಳಿ ಕಾರೊಂದು ಸೈಕಲ್ ಗೆ ಗುದ್ದಿದ ಪರಿಣಾಮ ಗಾಯಗೊಂಡ ಸೈಕಲ್ ಸವಾರ ಚಿಕಿತ್ಸೆ ಫಲಸದೇ ಮೃಪಟ್ಟಿದ್ದ ಘಟನೆ ಶನಿವಾರ ನಡೆದಿದೆ.

ಸಿದ್ದಾಪುರ ತಾಲೂಕಿನ ಹೆರಂದೂರು ನಿವಾಸಿ ಹಜರತ್ ಅಲಿ ಸಾಬ್(೬೭) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಮಾರುತಿ ಸ್ವೀಪ್ಟ ಕಾರು ಭಟ್ಗಳ ಕಡೆಯಿಂದ ಹೊನ್ನಾವರ ಕಡೆಗೆ ಅತೀ ವೇಗ ಹಾಗೂ ನಿಷ್ಠಾಳಜಿ ತನದಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ, ಭಟ್ಕಳ ಹನೀಪಾಬಾದ್ ಕ್ರಾಸ್ ಹತ್ತಿರ ಸೈಕಲ್ ಸವಾರನಿಗೆ ಬಡಿದು ಸೈಕಲ್ ಸಮೇತ ಸ್ವೀಪ್ ಕಾರಿನ ಮುಂದಿನ ಗ್ಲಾಸಿನ ಮೇಲೆ ಬಿದ್ದು ಸೈಕಲ್ ಸವಾರನ ಎರಡು ಕೈಗಳಗೆ ಮತ್ತು ಕಾಲಿಗೆ ಭಾರಿ ಗಂಭೀರವಾಗಿ ಗಾಯಗೊಂಡಿದ್ದು ಅಂಬ್ಯುಲೆನ್ಸ್ ನಲ್ಲಿ ಭಟ್ಕಳ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಕುಂದಾಪುರದ ಮಾರ್ಗ ಮದ್ಯದಲ್ಲಿ ಸೈಕಲ್ ಸವಾರ ಹಜರತ್ ಅಲಿ ಸಾಬ್ ಮೃತಪಟ್ಟಿದ್ದಾರೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: