April 22, 2021

Bhavana Tv

Its Your Channel

ಅಗ್ನಿಶಾಮಕ ಸಿಬ್ಬಂದಿ ತ್ವರಿತ ಕಾರ್ಯಾಚರಣೆ: ಬಾವಿಗೆ ಬಿದ್ದಿದ್ದ ಹಸು ರಕ್ಷಣೆ

ಭಟ್ಕಳ ;ಆಕಸ್ಮಿಕವಾಗಿ ಕಾಲುಜಾರಿ ತೆರೆದ ಬಾವಿಗೆ ಬಿದ್ದಿದ್ದ ಹಸುವನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಭಟ್ಕಳ ಪಟ್ಟಣದ ಬೆಳ್ನಿಯಲ್ಲಿ ನಡೆದಿದೆ.

ಗ್ರಾಮದ ಅಹ್ಮದ್ ಏಜೆನ್ಸಿ ರವರಿಗೆ ಸೇರಿದ್ದ ಜಾಗದಲ್ಲಿನ ಸುಮಾರು ೨೦ ಅಡಿ ಆಳದ ಬಾವಿಗೆ ಸಂಜೆ ೬:೩೦ರ ವೇಳೆಗೆ ಹಸುವೊಂದು ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಠಾಣಾಧಿಕಾರಿ ಎಸ್.ರಮೇಶ, ಚಾಲಕ ಮಾರುತಿ ಆಚಾರಿ, ತಂತ್ರಜ್ಞ ಶಿವಪ್ರಸಾದ ನಾಯ್ಕ, ನಾರಾಯಣ ಪಟಗಾರ, ಮಾರುತಿ ನಾಯ್ಕ, ಚೇತನ ಪಾಟೀಲ, ಸಚಿನ್ ರಾಠೋಡ, ಶಂಕರ್ ಲಮಾಣಿ ಹಾಗೂ ಗೃಹರಕ್ಷಕ ಸಿಬ್ಬಂದಿ ಅರುಣ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಹಸುವನ್ನು ಹರಸಾಹಸಪಟ್ಟು ಬಾವಿಯಿಂದ ಮೇಲಕ್ಕೆ ಎತ್ತಿದ್ದು ಪ್ರಾಣಾಪಾಯದಿಂದ ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

error: