
ಭಟ್ಕಳ: ಆಟೋದಲ್ಲಿ ಬಿಟ್ಟು ಹೋದ ೮೦ ಸಾವಿರದಷ್ಟು ಬೆಲೆಬಾಳುವ ಬಂಗಾರವನ್ನು ಮರಳಿ ಸಂಬAಧ ಪಟ್ಟವರಿಗೆ ಮುಟ್ಟಿಸಿ ಆಟೋ ಚಾಲಕನೊರ್ವ ಮಾನವೀಯತೆ ಮೆರೆದ ಘಟನೆ ತಾಲೂಕಿ ಶಿರಾಲಿಯಲ್ಲಿ ನಡೆದಿದೆ.
ಶಿರಾಲಿ ಆಟೋ ಚಾಲಕ ಮಾದೇವ ಮುನ್ನಾ ನಾಯ್ಕ, ಎಂಬಾತ ತನ್ನ ಆಟೋದಲ್ಲಿ ಮಲ್ಲಾರಿಯ ಮಹಿಳೆಯೋರ್ವಳನ್ನು ಶಿರಾಲಿಯ ಹಾದಿಮಾಸ್ತಿ ದೇವಸ್ಥಾನದಿಂದ ಕರೆದುಕೊಂಡು ಮಾವಿನಕಟ್ಟೆಯಲ್ಲಿ ಬಿಟ್ಟು ಪುನಃ ಬರುವ ವೇಳೆ ಆಟೋದಲ್ಲಿ ಬ್ಯಾಗ್ ಇರೋದನ್ನು ಗಮನಿಸಿದ ಆಟೋ ಚಾಲಕ ಬ್ಯಾಗ್ ತೆರದು ನೋಡಿದಾಗ ನಗದು ಮತ್ತು ಚಿನ್ನ ಇದ್ದು. ಇವೆರಡರ ಮೌಲ್ಯ ಸುಮಾರು ೮೦ ಸಾವಿರ ಎನ್ನಲಾಗಿದೆ.ನಂತರ ಆಟೋ ಚಾಲಕ ಮಹಿಳೆಯನ್ನು
ಶಿರಾಲಿ ಆಟೋ ನಿಲ್ದಾಣಕ್ಕೆ ಕರೆಸಿ ಚಿನ್ನ ನಗದು ಇದ್ದ ಬ್ಯಾಗ್ ಪುನಃ ಮರಳಿ ನೀಡಿದ್ದಾರೆ.
ಈತನ ಈ ಕಾರ್ಯಕ್ಕೆ ಆಟೋ ಚಾಲಕರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
More Stories
ಗಂಡನಿOದ ಹೆಂಡತಿ ಕೊಲೆ
ಮಾಜಿ ಶಾಸಕರಿಂದ ಮಲ್ಲಿಗೆ ಬೆಳೆಗಾರರಿಗೆ ಅನ್ಯಾಯ: ಶಾಸಕ ಸುನೀಲ ನಾಯ್ಕ ನೇರವಾಗಿ ಆರೋಪ
ವೆಂಕಟಸುಬ್ಬಯ್ಯ ಅವರ ಬದುಕು ಶ್ರೀಗಂಧದ0ತೆ : ಅರವಿಂದ ಕರ್ಕಿಕೊಡಿ