April 26, 2024

Bhavana Tv

Its Your Channel

ಬೈಕ್ ಕಳ್ಳತನ : ಆರೋಪಿ ಬಂಧನ

ಭಟ್ಕಳ: ಎಪ್ರಿಲ್ ೫ ರಂದು ಮನೆ ಮುಂದೆ ನಿಲ್ಲಿಸಿದ್ದ ಹೊಂಡಾ ಕಂಪನಿಯ ಡಿವೋ ಸ್ಫೂಟ್ ಕಳ್ಳತನ ಮಾಡಿದ್ದ ಆರೋಪಿಯನ್ನು ಭಟ್ಕಳ ನಗರ ಠಾಣೆ ಪೊಲೀಸರು ಬಂಧಿಸಿ ೨೦ ಸಾವಿರ ಬೆಲೆಯ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ಅಚಾದ ನಗರ ೭ನೇ ಕ್ರಾಸ್, ಶೆಡಕುಳ ಹೊಂಡದ್ ಪಾರೂಕ-ಉಲ್ಲಾ ತಂದೆ ಬೋಗಿ ಭಾಷಾ ಬಂಧಿತ ಆರೋಪಿಯ ಆಗಿದ್ದಾನೆ. ಜುಕಾಕು ಹೌಸ್, ಮುಖ್ಯ ರಸ್ತೆ, ಮನೆಯೊಂದರ ಮುಂದೆ ಎಪ್ರಿಲ್ ೧ ರಂದು ನಿಲ್ಲಿಸಿದ್ದ ಹೊಂಡಾ ಆಕ್ಟಿವಾ ಸ್ಕೂಟರ್ ಕಳವು ಮಾಡಿಕೊಂಡು ಹೋಗಿದ್ದ ಬಗ್ಗೆ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಚರಣೆ ಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಶಿವಪ್ರಕಾಶ ದೇವರಾಜು,ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್ ಭದ್ರಿನಾಥ,ಕಾರವಾರ ರವರ ಮಾರ್ಗದರ್ಶನದಲ್ಲಿ ಭಟ್ಕಳ ಡಿ.ವೈ.ಎಸ್.ಪಿ ಕೆ.ಯು ಬೆಳ್ಯಪ್ಪ ನೇತ್ರತ್ವದಲ್ಲಿ ಸಿ.ಪಿ.ಐ ದಿವಾಕರ ಪಿ.ಎಮ್, ಪಿ.ಎಸ್.ಐ ಕುಮಾರಿ ಸುಮಾ ಬಿ, ಪಿ.ಎಸ್.ಐ. ಹೆಚ್.ಬಿ ಕುಡಗುಂಟಿ, ಹಾಗೂ ಪ್ರೊಬೆಷನರಿ ಪಿ.ಎಸ.ಐ ಸಿದ್ದಪ್ಪ ಗುಡಿ, ಎ,ಎಸ್.ಐ ನವೀನ ಬೋರ್ಕರ ಹಾಗೂ ಸಿಬ್ಬಂದಿಯವರಾದ ದಿನೇಶ ನಾಯಕ,ಈರಣ್ಣಪೂಜಾರಿ,ಲೋಕಪ್ಪ ಕತ್ತಿ,ಬಾಗಪ್ಪಾ ಕಡಕಲ್ಲ,ಹಾಗೂ ಚಾಲಕ ಯಶವಂತ ನಾಯ್ಕ, ತಂಡವು ಆರೋಫಿತನನ್ನು ಪತ್ತೆ ಮಾಡಿ ವಿಚಾರಣೆಗೊಳಪಡಿಸಿ ಆರೋಪಿತನಿಂದ ಹೊಂಡಾ ಕಂಪನಿಯ ಡಿವೋ ಸ್ಕೂಟರ್ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

error: