April 20, 2024

Bhavana Tv

Its Your Channel

ಗ್ರಾಮೀಣ ದಲಿತಾಭಿವೃದಿ ಸಂಘ ಹೆಗಡೆ ಇವರ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಜಯಂತಿ

ಕುಮಟಾ: ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗ್ರಾಮ ಪಂಚಾಯತಿ ಸದಸ್ಯ ಶಿವಾನಂದ ಪಟಗಾರ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು ನಂತರ ಮಾತನಾಡಿ ಅವರು ಇದು ಭಾರತದ ಪಾಲಿನ ಮಹತ್ವದ ದಿನ. ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ ಡಾ ಬಿ ಆರ್ ಅಂಬೇಡ್ಕರ್ ಅವರು ಜನಿಸಿದ ದಿನ . ನಮ್ಮ ದೇಶ ಕಂಡ ಮಹಾನ್ ವ್ಯಕ್ತಿಗಳಲ್ಲಿ ಅಂಬೇಡ್ಕರ್ ಕೂಡಾ ಪ್ರಮುಖರು. ಮಹಿಳೆಯರ ಪ್ರಗತಿ, ಸಮಾಜದ ಏಳಿಗೆಯ ಕನಸು ಕಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಸಮಾನತೆ-ಅಸ್ಪೃಶ್ಯತೆಯ ವಿರುದ್ಧ ದನಿ ಎತ್ತಿ ಸಮಾಜವನ್ನು ತಿದ್ದುವ, ಭವ್ಯ ಭಾರತದ ನಿರ್ಮಾಣದತ್ತ ಪ್ರೇರಣೆಯಾಗಿದ್ದರು ಸಂವಿಧಾನ ಭಾರತದ ಪವಿತ್ರ ಗ್ರಂಥ. ಇದು ನಮ್ಮ ಬದುಕಿಗೂ ದಾರಿ. ಈ ಪವಿತ್ರ ಗ್ರಂಥದ ಮೂಲಕ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಈ ಪವಿತ್ರ ಗ್ರಂಥವನ್ನು ನಮಗೆ ನೀಡಿದವರು ಎಲ್ಲರ ಪಾಲಿನ ಸ್ಫೂರ್ತಿಯ ಚಿಲುಮೆ ಡಾ ಬಿ ಆರ್ ಅಂಬೇಡ್ಕರ್. ೧೪ನೇ ಏಪ್ರಿಲ್ ೧೮೯೧ರಲ್ಲಿ ಮಧ್ಯಪ್ರದೇಶದ ಮಾಹೋ ಎಂಬಲ್ಲಿ ಜನಿಸಿದ ಡಾ ಅಂಬೇಡ್ಕರ್ ಅವರ ಬಾಲ್ಯದ ದಿನಗಳು ಬಲು ಕಷ್ಟದಿಂದಲೇ ಕೂಡಿತ್ತು. ಅಸ್ಪೃಶ್ಯತೆ, ಅಸಮಾನತೆಯ ನೋವಿನ ನಡುವೆ ಬೆಳೆದಿದ್ದ ಅಂಬೇಡ್ಕರ್ ಅವರು ಬಳಿಕ ಇಡೀ ವಿಶ್ವವೇ ಗೌರವಿಸುವಂತಹ ನಾಯಕರಾಗಿ ರೂಪುಗೊಂಡಿದ್ದರು. ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದರು. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾಗಿದ್ದರು ಎಂದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅದ್ಯಕ್ಷೆ .ಗ್ರಾಮ ಪಂಚಾಯತ ಉಪದ್ಯಕ್ಷ ಶಾಂತರಾಮ ನಾಯ್ಕ. ಶಶಿಧರ ಎನ್ . ಅಡುಗೋಳಿ . ನಾಗರಾಜ ಎಸ್ ಮುಕ್ರಿ ನಾಗವೇಣಿ ನಾರಾಯಣ ಮುಕ್ರಿ.ಗೀತಾ ಮುಕ್ರಿ.ಲಕ್ಷ್ಮಿ ಮುಕ್ರಿ. ಶರವಾತಿ ಮುಕ್ರಿ.ಸವಿತಾ ಮುಕ್ರಿ.ಗ್ರಾಮೀಣ. ದಲಿತಭಿವೃದಿ ಸಂಘದ ಅಧ್ಯಕ್ಷ ಲಿಂಗು ಮುಕ್ರಿ.ವ್ಯವಸ್ಥಾಪಕರಾದ ಮಾಸ್ತಿ ಮುಕ್ರಿ ಇದ್ದರು.

error: