April 20, 2024

Bhavana Tv

Its Your Channel

“ಡಾ|| ಬಿ.ಆರ್. ಆಂಬೇಡ್ಕರ್‌ರವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸ ಬೇಡಿ ಎಂದು ಹೊನ್ನಾವರ ತಾಲೂಕ ಆಸ್ಪತ್ರೆಯ ಸ್ತಿçà ರೋಗ ತಜ್ಞರಾದ ಡಾ ಕೃಷ್ಣಾ ಜಿ. ಹೇಳಿದರು.

ಹೊನ್ನಾವರ : “ಇವತ್ತು ನಾವು ಸಮಾಜದಲ್ಲಿ ಉತ್ತಮವಾಗಿ ಬದುಕುತ್ತಿರುವುದಕ್ಕೆ ಡಾ|| ಬಿ.ಆರ್.ಅಂಬೆಡ್ಕರ್ ಅವರು ನೀಡಿರುವ ಸಂವಿಧಾನವೇ ಕಾರಣ. ಸಮಾಜದ ಕಟ್ಟಕಡೆಯ ವ್ಯಕ್ತಿ ಸಹ ಸಮಾನತೆಯಿಂದ ಬದುಕ ಬೇಕೆಂದು ಡಾ|| ಬಿ.ಆರ್.ಅಂಬೇಡ್ಕರ್ ಕನಸಾಗಿತ್ತು. ಆ ನಿಟ್ಟಿನಲ್ಲಿ ನಮ್ಮ ಸಂವಿಧಾನ ರಚನೆಗೊಂಡಿದೆ. ಜಗತ್ತಿನಅತಿದೊಡ್ಡ ಮತ್ತುಅತ್ಯುತ್ತಮ ಸಂವಿಧಾನಗಳಲ್ಲಿ ನಮ್ಮ ಸಂವಿಧಾ£ Àಎನ್ನುವುದು ನಮ್ಮೆಲ್ಲರ ಹೆಮ್ಮೆ. ಜಗತ್ತಿನ ಮಹಾನ್ ವ್ಯಕ್ತಿಗಳಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಒಬ್ಬರು.ಆದರೆ ಇವತ್ತಿನ ದಿನಗಳಲ್ಲಿ ಡಾ||ಆಂಬೇಡ್ಕರ್‌ರವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುತ್ತಿರುವುದು ನಿಜಕ್ಕೂ ವಿಷಾಧನೀಯ. ಅವರು ಎಲ್ಲ ವರ್ಗಗಳಿಗೂ ಸಲ್ಲುವ ನಾಯಕರಾಗಿದ್ದಾರೆ .ಪ್ರತಿಯೊಬ್ಬರು ಪ್ರೀತಿಸುವ ಆರಾಧಿಸುವ ವ್ಯಕ್ತಿತ್ವ ಡಾ. ಬಿ.ಆರ್‌ಆಂಬೇಡ್ಕರ್ ಅವರದು. ಯಾವುದೇ ಕಾರಣಕ್ಕೂ ಒಂದು ವರ್ಗಕ್ಕೆ ಅವರನ್ನು ಸೀಮಿತಗೊಳಿಸಬೇಡಿ. ಹಾಗೇ ಮಾಡುವದರಿಂದ ಇಂದಿನ ಪೀಳಿಗೆ ಅಂಬೇಡ್ಕರರವರ ತತ್ವ ಸಿದ್ದಾಂತಗಳಿAದ ದೂರವಾಗುವ ಅಪಾಯವಿರುತ್ತದೆ. ”ಎಂದು ಹೊನ್ನಾವರತಾಲೂಕ ಆಸ್ಪತ್ರೆಯ ಸ್ತಿçà ರೋಗ ತಜ್ಞರಾದ ಡಾ|| ಕೃಷ್ಣಾ ಜಿ ರವರು ಹೇಳಿದರು. ಅವರು ಆಸ್ಪತ್ರೆಯಲ್ಲಿ ನಡೆದ ಡಾ|| ಬಿ.ಆರ್.ಅಂಬೇಡ್ಕರ್ ಜಯಂತಿ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ್ದರು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ ರಾಜೇಶಕಿಣಿ ಸೇರಿದಂತೆ ಎಲ್ಲ ವೈದ್ಯರುಗಳು, ಸಿಬ್ಬಂದಿವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆರೋಗ್ಯ ಸಹಾಯಕರಾದ ವೆಂಕಟೇಶ ಜಾಡಮಾಲಿರವರು ಕಾರ್ಯಕ್ರಮ ನಿರ್ವಹಿಸಿದ್ದರು.

error: